ನೇತ್ರಾ ಪಾತ್ರ

ಯಾವುದೇ ಕ್ಷೇತ್ರದಲ್ಲಿ ತೊಡಗಿಕೊಂಡು ಸಾಧನೆ ಮಾಡಲು ವಯಸ್ಸಿನ ಅಭ್ಯಂತರವೇವೂ ಇಲ್ಲ ಎನ್ನುವುದಕ್ಕೆ ಹರಿಗದ್ದೆಯ ಗೃಹಿಣಿ ನೇತ್ರಾವತಿ ಹೆಗಡೆ ಸಾಕ್ಷಿಯಾಗಿ ನಿಲ್ಲುತ್ತಾರೆ.
ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ಸನಿಹದ ಹರಿಗದ್ದೆಯ ಪ್ರಗತಿಪರ ಕೃಷಿಕ ಚಂದ್ರಶೇಖರ ಹೆಗಡೆ ಅವರ ಬಾಳಸಂಗಾತಿ ನೇತ್ರಾವತಿ ಹೆಗಡೆ. ನಿರುಪಯುಕ್ತ ವಸ್ತುಗಳಿಂದ ಮನೆ ಬಳಕೆಗೆ ಬೇಕಾಗುವ ವೈವಿಧ್ಯಮಯ ವಸ್ತುಗಳನ್ನು ಸಿದ್ದಪಡಿಸುವುದರಲ್ಲಿ ಅವರು ನಿಪುಣರು. ಮನೆಗೆಲಸ ನಿಭಾಯಿಸುತ್ತಲೇ ಇದರಲ್ಲಿ ತೊಡಗಿಕೊಳ್ಳುತ್ತಾರೆ.
ಊರಿನಲ್ಲಿ ನೇತ್ರತ್ತಿಗೆ, ನೇತ್ರತ್ತೆ, ನೇತ್ರಜ್ಜಿ ಎಂದು ಚಿರಪರಿಚಿತರಾದ ಅವರು ವೇಸ್ಟಾದ ಸೀರೆ, ಬಿಳಿಹುಲ್ಲು, ಪ್ಲಾಸ್ಟಿಕ್ ಹಿಂಡಿ ಚೀಲ, ಉಪ್ಪಿನ ಚೀಲ.... ಇಂಥವುಗಳಿಂದ ಚಾಪೆ, ಗಾಶಿ (ಹಾಸಿಗೆ ಮಾದರಿಯ ಬಟ್ಟೆಯ ಮ್ಯಾಟ್), ಬಟ್ಟೆಯ ಹಾಸಿಗೆ, ದುಪ್ಪಡಿ, ಹಾರ, ಕಾಲು ಒರೆಸುವ ಮ್ಯಾಟು.... ಇತ್ಯಾದಿ ಗೃಹ ಬಳಕೆಗೆ ಅವಶ್ಯಕವಾದ ಪರಿಕರಗಳನ್ನು ಸಿದ್ಧಪಡಿಸಿದ್ದಾರೆ. ತಾವೇ ಕೈ ಹೊಲಿಗೆ ಹಾಕಿ ಇವನ್ನೆಲ್ಲ ಮಾಡುತ್ತಾರೆ. ಸಾಮಾನ್ಯವಾಗಿ ಮಲೆನಾಡಿನ ಗೃಹಿಣಿಯರು ವೇಸ್ಟ್ ಬಟ್ಟೆಗಳಿಂದ ಹಾಸಿಗೆ-ಹೊದಿಕೆಗಳನ್ನು ಮಾಡಿಕೊಳ್ಳುವುದು ಮಾಮೂಲು. ನೇತ್ರಜ್ಜಿ 62ರ ಇಳಿವಯಸ್ಸಿನಲ್ಲಿಯೂ ಇಂಥ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದಲ್ಲದೆ, ಆಸಕ್ತರಿಗೆ ತಾಳ್ಮೆಯಿಂದ ಕಲಿಸಿಕೊಡುತ್ತಾರೆ ಕೂಡ.
'ಕೆಲ ವರ್ಷ ಹಿಂದೆ ಮಾರ್ಕೆಟ್‌ನಿಂದ 400 ರು. ಕೊಟ್ಟು ಗಾಶಿ ತಂದಿದ್ದೇವೆ. ಅಷ್ಟೆಲ್ಲಾ ಹಣಕೊಟ್ಟು ತರುವುದಕ್ಕಿಂತ ಮನೆಯಲ್ಲಿಯೇ ವೇಸ್ಟಾಗುವ ಪರಿಕರಗಳನ್ನು ಉಪಯೋಗಿಸಿಕೊಂಡು ನಾವೇ ಮಾಡಿಕೊಳ್ಳಬಹುದಲ್ಲ ಅನ್ನಿಸಿತು. ಆರಂಭದಲ್ಲಿ ಲೋಡ್ ಕವರ್ ಮಾಡಿದೆ. ಆಮೇಲೆ, ಬಿಡುವಿನ ಸಮಯದಲ್ಲಿ ನಮಗೆ ಬೇಕಾಗುವ ವಸ್ತುಗಳನ್ನು ಸಿದ್ಧಪಡಿಸತೊಡಗಿದೆ' ಎನ್ನುತ್ತಾರೆ ನೇತ್ರಾವತಿ ಹೆಗಡೆ.
ಈ ಕಾಲದ ಹಳ್ಳಿಯಹಿಣಿಯರು ಬಿಡುವಿನ ವೇಳೆಯನ್ನು ಧಾರಾವಾಹಿ ವೀಕ್ಷಿಸುತ್ತ ವ್ಯರ್ಥ ಮಾಡುವುದೇ ಹೆಚ್ಚು. ನೇತ್ರಾವತಿ ಹೆಗಡೆ (ಫೋನ್: 08419-254609) ಇಳಿವಯಸ್ಸಿನಲ್ಲಿಯೂ ಉತ್ಸಾಹ, ಛಲದಿಂದಲೇ ತಮ್ಮ ಪ್ರವೃತ್ತಿಯಲ್ಲಿ ತೋಡಗಿಕೊಂಡಿರುವುದು ಶ್ಲಾಘನೀಯ.
- ಚಿತ್ರ-ಬರಹ: ಗಣಪತಿ ಹಾಸ್ಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


