ಸಾಧನೆ

ಸುಮ್ನೆ ತಿಳ್ಕೊಂಡಿರಿ ಇಷ್ಟೆಲ್ಲ ಸೌಲಭ್ಯಗಳಿವೆ

Published On :

ಹಿರಿಯ ನಾಗರಿಕರು ಜೀವನದುದ್ದಕ್ಕೂ ತಮ್ಮ ಕುಟುಂಬದ ಏಳಿಗೆಗಾಗಿ ದುಡಿದರೂ, ಜೀವನದ ಸಂಧ್ಯಾಕಾಲದಲ್ಲಿ ನ್ಯಾಯವಾಗಿ ತಮಗೆ ಸಿಗಬೇಕಾದುದು ಮಾತ್ರ ಸಿಕ್ಕರೆ ಸಾಕು ಎಂದು ಕೇಳುತ್ತಾರೆಯೇ ಹೊರತು ಅದಕ್ಕಾಗಿ ಹೋರಾಟದ ದಾರಿ ಹಿಡಿಯುವವರಲ್ಲ. ಮಕ್ಕಳು ತಮ್ಮನ್ನು ವೃದ್ಧಾಪ್ಯದಲ್ಲಿ ನೋಡಿಕೊಳ್ಳಲಿ ಎಂಬ ಆಸೆ ಇದ್ದರೂ ತಮ್ಮಿಂದ ಅವರಿಗೆ ತೊಂದರೆಯಾಗಬಾರದು ಎಂಬ ಮನೋಭಾವವುಳ್ಳವರು. ಆದರೆ ಇಂದಿನ ಮಕ್ಕಳ ಜೀವನಶೈಲಿಯಿಂದ ಹೆಚ್ಚಿನ ಹಿರಿಯರು ಅಸಡ್ಡೆಗೊಳಗಾಗಿದ್ದಾರೆ. ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಅಂಥವರಿಗೆ ಆರೋಗ್ಯ ಸುರಕ್ಷೆ ಜತೆಗೆ ಆರ್ಥಿಕ ಸುರಕ್ಷತೆ ಕೂಡ ಬೇಕು.
ಆರ್ಥಿಕ ಸುರಕ್ಷೆ ಎಂದರೆ ಸರಕಾರದಿಂದ ಬರುವ ಪಿಂಚಣಿ. ಮಾಸಾಶನ. ಸರ್ಕಾರದ ಹಲವು ಯೋಜನೆಗಳು 60 ವಯಸ್ಸಿನ ನಂತರ ಜಾರಿಗೆ ಬಂದರೆ ಇನ್ನು ಕೆಲವು ಯೋಜನೆಗಳ ಪ್ರಯೋಜನ ಪಡೆಯಲು 65ರವರೆಗೆ ಕಾಯಬೇಕು. ಸರ್ಕಾರದ ಯಾವುದೇ ಯೋಜನೆಗಳ ಪ್ರಯೋಜನ ಪಡೆಯಲು ಸಂಬಂಧಿಸಿದ ಇಲಾಖೆಯಲ್ಲೊಮ್ಮೆ ವಿಚಾರಿಸುವುದು ಒಳಿತು.

-     ಸಂಧ್ಯಾ ಸುರಕ್ಷಾ, ವೃದ್ಧಾಪ್ಯ/ವಿಧವಾ ಮಾಸಾಶನ (65 ವಯೋವುತಿ).
-     ಹಿರಿಯರಿಗೆ ಆದಾಯ ತೆರಿಗೆಯಲ್ಲಿ ವಿನಾಯಿತಿ (60/58).
-     ಹಿರಿಯ ನಾಗರಿಕರಿಗೆ ಬ್ಯಾಂಕ್/ಪೋಸ್ಟ್ ಆಫೀಸ್ ಖಾತೆಯಲ್ಲಿ ಹೆಚ್ಚಿನ ಬಡ್ಡಿದರ (60).
-     ಹಿರಿಯರಿಗೆ ಪ್ರತ್ಯೇಕ ವೈಯಕ್ತಿಕ ಸಾಲದ ವ್ಯವಸ್ಥೆ (60).
-     ವಾಸವಿರುವ ಸ್ವಂತ ಮನೆಯ ಮೇಲೆ ಸಾಲದ ಸೌಲಭ್ಯ (60).
-     ಬಸ್/ರೈಲ್ವೆ ಪ್ರಯಾಣ ದರದಲ್ಲಿ ರಿಯಾಯಿತಿ (60)
-    ವಿಮಾನ ಪ್ರಯಾಣ ದರದಲ್ಲಿ ರಿಯಾಯಿತಿ (65).
-     ಜನಸಂದಣಿ ಇರುವಲ್ಲಿ ಹಿರಿಯರಿಗೆ ಪ್ರತ್ಯೇಕ ಕ್ಯೂ ವ್ಯವಸ್ಥೆ (60).
-    ಸಾರ್ವಜನಿಕ ವಾಹನದಲ್ಲಿ ಕಾಯ್ದಿರಿಸಿರುವ ಆಸನಗಳು (60).
-     ಸರ್ಕಾರಿ ವಸತಿ ಯೋಜನೆಯಲ್ಲಿ ಹಿರಿಯರಿಗೆ ಆದ್ಯತೆ (65).
-   ಅಂತ್ಯೋದಯ ಅನ್ನ ಯೋಜನೆ, ಕಡಿಮೆ ಬೆಲೆಯಲ್ಲಿ ಪಡಿತರ ವಿತರಣೆ (60).
-     ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ. ಕೆಲವು ಖಾಸಗಿ ಆಸ್ಪತ್ರೆಯವರೂ ಹಿರಿಯರಿಗೆ ವಿನಾಯಿತಿ ನೀಡುತ್ತಾರೆ (60).
-    ಹಲವು ರಾಜ್ಯಗಳಲ್ಲಿ ಉಚಿತ ಕಾನೂನು ಸಲಹೆ, ಅರ್ಜಿ ನ್ಯಾಯಾಲಯದಲ್ಲಿ ಶೀಘ್ರ ವಿಲೇವಾರಿ (60).

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.