ಚಿರ ಯೌವ್ವನ!

ಇಂದಿನ ವೇಗದ ಬದುಕಿನಲ್ಲಿ ಅರವತ್ತು ವರ್ಷಕ್ಕೇ ವೃದ್ಧರಂತಾಗಿಬಿಡುತ್ತಾರೆ. ಇದಕ್ಕೆ ಮನಸ್ಸಿನ ದುರ್ಬಲತೆಯೇ ಕಾರಣ. ಆದರೆ ಇದು ನಿಜವಾಗಿ ಮಧ್ಯ ವಯಸ್ಸನ್ನು ದಾಟುವ ಹಂತ. ಹಾಗಾಗಿ ಸದಾ ಮನಸ್ಸನ್ನು ಚೇತೋಹಾರಿಯಾಗಿರಿಸಿಕೊಳ್ಳುವುದು ಇದಕ್ಕೆ ಪರಿಹಾರವಾಗಬಲ್ಲದು. ಮನಸ್ಸು ಯೌವನದಲ್ಲಿದ್ದಷ್ಟೂ ವಯಸ್ಸು ಕಡಿಮೆಯಾದಂತೆನಿಸುವುದು. ಮನಸ್ಸಿಗೆ ವಯಸ್ಸಾಗದಂತೆ ನೋಡಿಕೊಳ್ಳುವ ಬಗ್ಗೆ ಹೆಚ್ಚಿನ ಗಮನಹರಿಸಿ, ವಯಸ್ಸನ್ನು ಕೊಂಚ ದೂರವಿರಿಸಬಹುದು.
ಮಕ್ಕಳೊಂದಿಗೆ ಒಡನಾಟ
ಚಿಕ್ಕ ಮಕ್ಕಳೊಂದಿಗೆ, ಮೊಮ್ಮಕ್ಕಳೊಂದಿಗೆ ಹೆಚ್ಚಿನ ಒಡನಾಟವಿರಲಿ. ಮಕ್ಕಳೊಂದಿಗೆ ಆಟವಾಡುವುದು, ಕತೆ ಹೇಳುವುದರಿಂದ ಸದಾ ಲವಲವಿಕೆಯಿಂದಿರಬಹುದು. ಒಂದು ವೇಳೆ ಮೊಮ್ಮಕ್ಕಳೊಂದಿಗೆ ಸಮಯ ಕಳೆಯುವ ಅವಕಾಶ ಮನೆಯಲ್ಲಿಲ್ಲದಿದ್ದರೆ, ಮಕ್ಕಳಿರುವ ಆಶ್ರಮಗಳಿಗೆ ಭೇಟಿ ನೀಡಿ. ಅವರಿಗೆ ಸಣ್ಣಪುಟ್ಟ ಗಿಫ್ಟ್‌ಗಳನ್ನು ನೀಡಿ. ಇದರಿಂದ 'ವಯಸ್ಸಾಗಿದೆ' ಎಂಬ ಭಾವ ಕಾಡುವುದಿಲ್ಲ.
ದಿನಚರಿ
ಪ್ರತಿದಿನ ಪ್ರಶಾಂತ ವಾತಾವರಣ ಇರುವ ಪ್ರದೇಶಗಳಲ್ಲಿ ಸುತ್ತಾಡಿ. ಖುಷಿಯ ಸಂಗತಿಗಳನ್ನು ಬರೆದಿಡಿ. ಹಿತಮಿತ ಆಹಾರವನ್ನು ಹಂಚಿ ಊಟ ಮಾಡಿ. ಸದಾ ಖುಷಿಯಿಂದಿರಿ.
ಇಷ್ಟವಾದ ಸಂಗೀತ ಆಲಿಸಿ
ಇಷ್ಟವಾದ ಸಂಗೀತ ಕೇಳುವುದರಿಂದ ಕೂಡ ಖುಷಿ ಸಿಗುತ್ತದೆ. ಎಷ್ಟೋ ಮನಸ್ಸಿನ ಕಾಯಿಲೆಗಳಿಗೆ ಸಂಗೀತ ಚಿಕಿತ್ಸೆ ಹೆಚ್ಚು ಪರಿಣಾಮಕಾರಿ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ. ಮನಸ್ಸಿನ ದುಗುಡ, ಗೊಂದಲ, ಖಿನ್ನತೆಗಳು ಸಂಗೀತ ಆಲಿಸುವುದರಿಂದ ನಿವಾರಣೆಯಾಗುತ್ತವೆ.
ಪ್ರಾಣಿ ಪ್ರೀತಿ
ಸಾಕುಪ್ರಾಣಿಗಳೊಂದಿಗೆ ಸಮಯ ಕಳೆಯುವುದರಿಂದ ಕೂಡ ಸಂತೋಷ ಪಡಬಹುದು. ದನಕರುಗಳಿದ್ದರೆ ಅವುಗಳ ಆರೈಕೆ, ನಾಯಿ, ಬೆಕ್ಕು, ಹಕ್ಕಿಪಕ್ಷಿಗಳಿದ್ದರೆ ಅವುಗಳ ಜತೆ ಒಂದಿಷ್ಟು ಹೊತ್ತು ಕಳೆಯುವುದರಿಂದ ಮನಸ್ಸು ಉಲ್ಲಸಿತವಾಗಿರುತ್ತದೆ. ನೀವು ರೈತರಾಗಿದ್ದರಂತೂ ಹಳ್ಳಿ ಪರಿಸರದಲ್ಲಿ ಒಡಾಡಲು ಸಾಕಷ್ಟು ಸ್ಥಳಗಳಿರುತ್ತವೆ. ಗದ್ದೆ ತೋಟಗಳ ಮಧ್ಯೆ ಓಡಾಡುವುದು, ಗಿಡಗಳನ್ನು ನೆಡುವುದು, ಅವುಗಳ ಆರೈಕೆಯಲ್ಲಿ ಸಮಯವನ್ನು ಹೆಚ್ಚು ಉಲ್ಲಸಿತವಾಗಿ ಕಳೆಯಬಹುದು. ಇದಕ್ಕೆ ಮೊದಲು ಬದುಕಿನ ಜಂಜಾಟವನ್ನು ತಲೆಯಿಂದ ಕಿತ್ತುಹಾಕಿ ನಿರಾಳರಾಗಿ.
- ಮಂಜುನಾಥ್ ಎಲ್.ಕೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


