ಸಾಧನೆ

ದೀರ್ಘಾಯುಷ್ಯದ ಹಂಬಲ

ದೀರ್ಘಾಯುಷ್ಯದ ಹಂಬಲ
Published On :

ಸಾವನ್ನು ಮುಂದೂಡಲು ಮನುಷ್ಯ ಎಲ್ಲ ಕಾಲದಲ್ಲೂ ಪ್ರಯತ್ನಿಸುತ್ತಲೇ ಬಂದಿದ್ದಾನೆ. ಭಾರತೀಯ ವೇದ-ಪುರಾಣಗಳಲ್ಲಿ ಋಷಿ-ಮುನಿಗಳು ಗಡ್ಡೆ-ಗೆಣಸುಗಳನ್ನು ತಿಂದು, ಕಠೋರ ಅನುಷ್ಠಾನಗಳನ್ನು ಮಾಡುತ್ತಾ ಸಹಸ್ರಾರು ವರ್ಷ ಜೀವಿಸಿದ್ದರ ಉಲ್ಲೇಖ ಬರುತ್ತದೆ. ಸಪ್ತ ಋಷಿಗಳಂತೂ ಅತ್ಯಂತ ದೀರ್ಘಾಯುಷಿಗಳು ಎನ್ನಲಾಗುತ್ತದೆ. ಇನ್ನು ಹನುಮಂತ-ಅಶ್ವತ್ಥಾಮರು ಚಿರಂಜೀವಿ ವರ ಪಡೆದವರು. ಅಮರತ್ವದ ಹಂಬಲ ಮನುಷ್ಯರಿಗಷ್ಟೇ ಅಲ್ಲ, ದೇವತೆಗಳಿಗೂ ಇತ್ತು. ಅದಕ್ಕೆಂದೇ ಸಮುದ್ರ ಮಥನ ಮಾಡಿ ಅಮೃತ ಪಡೆದು ಸಾವನ್ನು ಗೆದ್ದರು ಎಂದು ಪುರಾಣ ಹೇಳುತ್ತದೆ.
ಇಂಥ ಅಮೃತದ ಹುಡುಕಾಟದಲ್ಲಿ ಇಂದಿನ ಮನುಕುಲವೂ ತೊಡಗಿಕೊಂಡಿದೆ. ವೈದ್ಯಕೀಯ ಜಗತ್ತು ಇಂದು ಅಗಾಧ ಸಾಧನೆ ಮಾಡಿದ್ದರೂ ಸಾವನ್ನು ಜಯಿಸುವ ಔಷಧ ಮಾತ್ರ ಇನ್ನೂ ಮರೀಚಿಕೆಯಾಗಿಯೇ ಇದೆ. 'ಹುಟ್ಟಿದ ಮನುಷ್ಯ ಸಾಯಲೇಬೇಕು' ಎಂಬ ನಾಣ್ಣುಡಿ ಮಾತ್ರ ಬದಲಾಗಿಲ್ಲ.
ಆದಾಗ್ಯೂ ಇಂದಿನ ಸಮಾಜದಲ್ಲಿ ಕೆಲವು ದೀರ್ಘಾಯುಷಿಗಳು ಕಂಡುಬರುತ್ತಾರೆ. ಯಾವುದೇ ಕಾಯಿಲೆ-ಕಸಾಲೆಗಳಿಲ್ಲದ ಇವರು ನೂರು ವರ್ಷ ಪೂರ್ಣಗೊಳಿಸಿದರೂ ಚಟುವಟಿಕೆಯ ಜೀವನದಲ್ಲಿರುತ್ತಾರೆ. ದೀರ್ಘಾಯುಷಿಗಳಾದ ತಂದೆ-ತಾಯಿಯರಿಗೆ ಹುಟ್ಟಿದ ಮಕ್ಕಳು ದೀರ್ಘಾಯುಷ್ಯವನ್ನು ಪಡೆಯುತ್ತಾರೆ ಎನ್ನುವುದು ವೈಜ್ಞಾನಿಕ ಸತ್ಯ. ಇಂಥ ಹಲವು ದೀರ್ಘಾಯುಷಿಗಳ ಜೀವನಶೈಲಿ ಆಧರಿಸಿ ಈ ಕೆಳಗಿನ ಟಿಪ್ಸ್ ರೂಪಿಸಲಾಗಿದೆ.

  • ಪ್ರತಿದಿನ ಒಂದು ಗಂಟೆ ವಾಕಿಂಗ್ ಇಲ್ಲವೇ ಯೋಗಾಸನ ಮಾಡಿ.
  • ಪ್ರತಿದಿನ ಮೂರ್ನಾಲ್ಕು ಚಮಚ ಎಳ್ಳೆಣ್ಣೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ ಇಡೀ ಮೈಗೆ ಹಚ್ಚಿ ಮಾಲೀಶ್ ಮಾಡಿಕೊಳ್ಳಿ. ನಂತರ ಬಿಸಿನೀರಿನಿಂದ ಸ್ನಾನ ಮಾಡಿ. ಪ್ರತಿದಿನ ಎಣ್ಣೆಹಚ್ಚಿ ಸ್ನಾನ ಮಾಡುವುದು ಕಷ್ಟವಾದರೆ, ಬರೀ ಕೈಗಳಿಂದಲೇ ತಲೆಯಿಂದ ಕಾಲಿನವರೆಗೆ ಅರ್ಧಗಂಟೆ ಮಸಾಜ್ ಮಾಡಿಕೊಳ್ಳಿ ಅಥವಾ ಸಹಾಯಕರಿಂದ ಮಾಡಿಸಿಕೊಳ್ಳಿ.
  • ಆಹಾರ ಸೇವನೆಯ ಪ್ರಮಾಣವನ್ನು ಕಡಿಮೆ ಮಾಡಿ. ಕಟ್ಟುನಿಟ್ಟಾಗಿ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ. ಪ್ರತಿದಿನ ತರಕಾರಿ/ಮೀನು/ಮೊಟ್ಟೆ ಅಥವಾ ಮಾಂಸ ಸೇವಿಸಿ.
  • ಬೆಳಗಿನ ಉಪಾಹಾರಕ್ಕೆ ಇಡ್ಲಿ, ದೋಸೆಗಳು ಉತ್ತಮ. ಏಕೆಂದರೆ ಇವು ಆರೋಗ್ಯಕರ, ಸುಲಭವಾಗಿ ಪಚನವಾಗುತ್ತವೆ. ಜ್ಯೂಸ್‌ಗಳಲ್ಲಿ ಪೇರಲಹಣ್ಣಿನ ಜ್ಯೂಸ್ ಉತ್ತಮ. ಇದರಲ್ಲಿ ಉಳಿದೆಲ್ಲಾ ಹಣ್ಣುಗಳಿಗಿಂತ ಹೆಚ್ಚು ಆ್ಯಂಟಿ ಆಕ್ಸಿಡೆಂಟ್ಸ್ ಇರುತ್ತದೆ. ರಾತ್ರಿ ಊಟಕ್ಕೆ ಕುಳಿತುಕೊಳ್ಳುವ ಮೊದಲು 'ಹೆಚ್ಚು ತಿನ್ನಬೇಡ' ಎಂದು ನಿಮಗೆ ನೀವೇ ಹೇಳಿಕೊಳ್ಳಿ. ರಾತ್ರಿ ಆದಷ್ಟು ಕಡಿಮೆ ತಿನ್ನುವುದು ಒಳ್ಳೆಯದು, (ಉಪವಾಸ ಮಲಗಬಾರದು). ಒಬ್ಬರೇ ಕುಳಿತು ಮೌನವಾಗಿ ಊಟ ಮಾಡುವುದು ಸೂಕ್ತ.
  • ಮಲಬದ್ಧತೆಗೆ ಅವಕಾಶ ಮಾಡಿಕೊಡಬೇಡಿ. ಪ್ರತಿದಿನ ತ್ರಿಫಲಾಚೂರ್ಣ ಸೇವಿಸುವುದರಿಂದ ಏನೂ ಅಪಾಯವಿಲ್ಲ. Don't become a martyr to constipation. ನಾರಿನಂಶ ಹೆಚ್ಚಾಗಿರುವ ತರಕಾರಿ, ಹಣ್ಣುಗಳನ್ನು ಸೇವಿಸಿ. ಪ್ರತಿದಿನ ಮಜ್ಜಿಗೆ, ಜ್ಯೂಸ್‌ನಂತಹ ದ್ರವಗಳ ಸೇವನೆಯಲ್ಲದೇ, ಎರಡು ಲೀಟರ್ ನೀರು ಕುಡಿಯಿರಿ. ಬೆಳಗ್ಗೆ ಎದ್ದ ಕೂಡಲೇ ಅರ್ಧ ಲೀಟರ್ ಬೆಚ್ಚಗಿನ ನೀರನ್ನು ಕುಡಿಯಿರಿ.
  • ಪ್ರತಿದಿನ ರಾತ್ರಿ ಒಂದು ಗ್ಲಾಸ್ ಹಾಲಿಗೆ ಒಂದು ಚಮಚ ತುಪ್ಪ ಹಾಕಿ ಕುಡಿಯಿರಿ. ನಿಮ್ಮ ದೇಹದ ತೂಕ ಹೆಚ್ಚಿದ್ದರೆ, ಕೊಲೆಸ್ಟರಾಲ್‌ನ ಸಮಸ್ಯೆ ಇದ್ದರೆ, ತುಪ್ಪದ ಬದಲು 2 ಚಮಚ ಹರಳೆಣ್ಣೆಯನ್ನು ಒಂದು ಕಪ್ ಹಾಲಿಗೆ ಹಾಕಿ ಕುಡಿಯಿರಿ. ರಾತ್ರಿ ಒಂದು ಬಾಳೆಹಣ್ಣು ಸೇವಿಸಿ. ಬೆಳಗ್ಗೆ ಹನ್ನೆರಡು ಸೂರ್ಯನಮಸ್ಕಾರ ಮಾಡಿ.
  • ಇವುಗಳಿಂದ ಫಲಿತಾಂಶ ದೊರೆಯದಿದ್ದರೆ, ಪ್ರತಿದಿನ ರಾತ್ರಿ ಒಂದು ಚಮಚ ಸ್ವಾದಿಷ್ಟ ವಿರೇಚನ ಚೂರ್ಣ ಸೇವಿಸಿ. ಇದನ್ನು ಕುಡಿಯಲು ಕಷ್ಟವಾದರೆ ಎನಿಮಾ, ಗ್ಲಿಸರಿನ್ ಸಪೋಸಿಟರಿ ಬಳಸಿ. ಒಟ್ಟಿನಲ್ಲಿ ಮಲಶೋಧನೆ ಮುಖ್ಯ.
  • ಸಿಟ್ಟನ್ನು ದೂರವಿಡಿ. ನಮ್ಮದು 'ಸತ್ಯಮೇವ ಜಯತೇ' ಎಂದು ಉಸುರಿದ ನಾಡು, ಯಾವತ್ತೂ ಸುಳ್ಳು ಹೇಳಬೇಡಿ.
  • ಆರೋಗ್ಯಕರ ಹವ್ಯಾಸಗಳಾದ ಗಿಡಗಳನ್ನು ಬೆಳೆಸುವುದು, ಬಡ ಮಕ್ಕಳಿಗೆ ಪಾಠ ಹೇಳುವುದು ಮುಂತಾದ ಜನೋಪಯೋಗಿ ಕೆಲಸಗಳಲ್ಲಿ ನಿಮ್ಮನ್ನು ಪ್ರತಿಫಲಾಪೇಕ್ಷೆ ಇಲ್ಲದೇ ತೊಡಗಿಸಿಕೊಳ್ಳಿ. ಇದು ಪ್ರಾರ್ಥನೆಗಿಂತ ಶ್ರೇಷ್ಠ.
  • ನಿಮಗೆ ಬೇಕಾಗುವಷ್ಟು ಬ್ಯಾಂಕ್ ಬ್ಯಾಲೆನ್ಸ್ ಇರಲಿ. ಇದು ಕೋಟಿಯಷ್ಟು ಇರಬೇಕಾಗಿಲ್ಲ, ನಿಮ್ಮ ಕೊನೆಗಾಲದ ಅನಾರೋಗ್ಯದ ಚಿಕಿತ್ಸೆಗೆ ಬೇಕಾಗುವಷ್ಟು ಇದ್ದರೆ ಸಾಕು. ಇದು ನೆಮ್ಮದಿ ಮತ್ತು ಭದ್ರತೆ ನೀಡುತ್ತದೆ.
  • ಜೀವನದ ನೋವು-ನಿರಾಶೆ, ಸತ್ತುಹೋದ ಪ್ರೀತಿ-ಪ್ರೇಮಗಳನ್ನು ಮೆಲಕುಹಾಕದೇ, ಸಂತಸದ ಕ್ಷಣಗಳನ್ನಷ್ಟೇ ನೆನೆಯುತ್ತಾ, ಆನಂದಿಸುತ್ತಾ ಪ್ರತಿಕ್ಷಣವನ್ನು ಕಳೆಯಿರಿ. ಸಾವಿನ ಭಯದಲ್ಲಿ ಬದುಕಬೇಡಿ. ಬದುಕುವ ಸುಖದಲ್ಲಿ ಸಾಯುವ ಅವಶ್ಯಕತೆಯೂ ಅಡಕವಾಗಿದೆ ಎಂಬುದನ್ನು ಕಂಡುಕೊಂಡಾಗ ಜೀವನ ಇನ್ನೂ ಸರಳವಾಗುತ್ತದೆ.
  • ವಯಸ್ಸಾದಂತೆ ಕೆಲವು ಕರೆಯದೇ ಬರುವ ಅತಿಥಿಗಳೆಂದರೆ, ರೋಗಗಳು. ಪ್ರೀತಿ, ಭರವಸೆ, ವಿಶ್ವಾಸ, ನಗು ಇವುಗಳಿಗೆ ರೋಗದೊಡನೆ ಆಗಮಿಸುವ ಭೀತಿ, ದಿಗಿಲು, ಖಿನ್ನತೆಯನ್ನು ದೂರ ಓಡಿಸುವ ಶಕ್ತಿ ಇದೆ.
  • ಜನರಿಗೆ ನಿಮ್ಮಿಂದಾದ ಸಹಾಯ ಮಾಡಿ. ಹಣವನ್ನು ಸಾಯುವಾಗ ನಮ್ಮೊಂದಿಗೆ ಕೊಂಡೊಯ್ಯುವುದಿಲ್ಲ ಎಂಬ ಪ್ರಜ್ಞೆ ಇದ್ದರೆ ಸಾಕು! ಯಾವುದೇ ನಿರೀಕ್ಷೆ, ಪ್ರತಿಫಲಾಪೇಕ್ಷೆ ಇಲ್ಲದೆ ನಿಮ್ಮಿಂದಾದಷ್ಟು ಹಣವನ್ನು ದಾನ ಮಾಡಿ. ಸಮೀಕ್ಷೆಗಳ ಪ್ರಕಾರ ಶ್ರೀಮಂತಿಕೆಯ ಜೈಲಿನಲ್ಲಿ ಸ್ವತಃ ಬಂಧಿಗಳಾದವರು ಖಿನ್ನತೆಯಿಂದ ಬೇಗನೇ ಸಾಯುತ್ತಾರೆ.
  • ಬೇರೆಯವರನ್ನು ದೂರಬೇಡಿ, ಕ್ಷಮಿಸುವುದನ್ನು ಕಲಿಯಿರಿ. ದ್ವೇಷ ದ್ವೇಷವನ್ನು ಹುಟ್ಟುಹಾಕುತ್ತದೆ. ಇದು ಆರೋಗ್ಯಕ್ಕೆ ಅಪಾಯಕಾರಿ.
  • ವಯಸ್ಸಾದಂತೆ ಜೀವನದಲ್ಲಿ ಪ್ರಿಯ, ಅಪ್ರಿಯವಾದಂತಹ ಬದಲಾವಣೆ, ಘಟನೆಗಳು ಜರುಗುತ್ತಲೇ ಇರುತ್ತವೆ. ಇವು  ಅನಿವಾರ್ಯ. ಈ ಹೊಸ ಜೀವನಕ್ಕೆ ಹೊಂದಿಕೊಳ್ಳುತ್ತಾ ಹೋಗಿ.
  • ನಿಮ್ಮ ಸ್ನೇಹಿತರಿಗೆ, ಮನೆಯವರಿಗೆ ಉಡುಗೊರೆ ಕೊಡುತ್ತಿರಿ. ಇದು ಎಷ್ಟು ರುಪಾಯಿಯದು ಎನ್ನುವುದು ಮುಖ್ಯವಲ್ಲ, ಐಡಿ'ಡ ಛ ಡ್ಟ್ಞಿಜಟಿ ್ಟಜಿ  ಟ್ಟಢಜ. ಹಂಚಿ ಹಗುರವಾಗುವುದರಿಂದ ದೊರೆಯುವ ಆತ್ಮತೃಪ್ತಿ ಬೇರೆ ಯಾವುದರಿಂದಲೂ ಸಿಗಲಾರದು. ಇಲ್ಲಿ ಮನಸ್ಸು ಅರಳುತ್ತದೆ.
  • ನಿಮ್ಮ ಸ್ನೇಹಿತರ, ಸಂಬಂಧಿಗಳ ಯಶಸ್ಸನ್ನು ಕಂಡು ಹೊಟ್ಟೆಕಿಚ್ಚು ಪಡಬೇಡಿ. ಬದಲಾಗಿ ಸಂತೋಷ ಪಡಿ.
  • ಪ್ರತಿ ರಾತ್ರಿ ಮಲಗುವ ಮುನ್ನ ಹದಿನೈದು ನಿಮಿಷ ನಿಮ್ಮ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ. ಉತ್ತಮ ಆರೋಗ್ಯ, ಸಂತಸಮಯ ಜೀವನ ಮತ್ತು ದೀರ್ಘಾಯುಷ್ಯ ನಿಮ್ಮದಾಗುತ್ತದೆ.
- ಡಾ. ಬ್ರಹ್ಮಾನಂದ ನಾಯಕ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.