ಅಧ್ಯಾತ್ಮದಿಂದ ಮನಶ್ಶಾಂತಿ

ನನಗೆ ವಯಸ್ಸಾಗಿದೆ, ನಾನು ಮಾಡುವ ಕೆಲಸಗಳೆಲ್ಲ ಮುಗಿದಿವೆ, ಇನ್ನು ಯಾವುದೂ ಬಾಕಿ ಇಲ್ಲ. ಜೀವನದ ಕೊನೆಯ ಘಟಕ್ಕೆ ಬಂದಿದ್ದೇನೆ ಎಂದು ಉತ್ಸಾಹ ಕಳೆದುಕೊಂಡು ಮಾನಸಿಕ ಕ್ಲೇಷಕ್ಕೊಳಗಾಗುವುದು, ಅನಾರೋಗ್ಯದ ಕಾರಣದಿಂದ ಕೆಟ್ಟ ಯೋಚನೆಗಳನ್ನು ಮಾಡುವುದು, ನಕಾರಾತ್ಮಕವಾಗಿ ವಿಚಾರ ಮಾಡುವವರ ಜತೆ ಭಾಗಿಯಾಗುವುದು ಒಂದು ಗುಂಪು. ವಯಸ್ಸಾಗುವುದು ಸಹಜ. ಜೀವನದ ಎಲ್ಲ ಹಂತಗಳನ್ನೂ ದಾಟಿದ್ದಾಯಿತು. ಇನ್ನು ಉಳಿದಿರುವುದು ದೇವರ ಪೂಜೆ, ಜಪ ತಪ. ಅಧ್ಯಾತ್ಮದಿಂದ ಮನಶ್ಶಾಂತಿ ಹೊಂದಬೇಕು ಎಂಬ ನಿಲುವು ಹೊಂದಿರುವವರದು ಇನ್ನೊಂದು ಗುಂಪು. ಈ ಎರಡನೇ ಗುಂಪಿನವರಲ್ಲಿ ವೃದ್ಧಾಪ್ಯದ ನೆಮ್ಮದಿಯ ಬದುಕಿನ ಗುಟ್ಟು ಅಡಗಿದೆ.
ಕೆಲಸ, ಮದುವೆ, ಹೆಂಡತಿ-ಮಕ್ಕಳು, ಬಂಧುಬಳಗ, ಸ್ನೇಹಿತರು ಹೀಗೆ ಆತ್ಮೀಯರುಗಳ ಜತೆ ಕಳೆದಿರುತ್ತಾರೆ. ಆದರೆ ಬದುಕಿನ ಪಯಣದ ಕೊನೆಯ ದಿನಗಳನ್ನು ಮಾತ್ರ ಒಂಟಿಯಾಗಿ ಕಳೆಯಬೇಕಾಗಿಬರುವುದೇ ಹೆಚ್ಚು. ಈ ಒಂಟಿತನವನ್ನು ನೀಗಲು ಹೆಚ್ಚಿನ ವೃದ್ಧರು ದೇವರ ನಾಮಸಂಕೀರ್ತನೆ ಮಾಡುತ್ತ ದೇವರ ಮೊರೆಹೋಗುತ್ತಾರೆ, ಯಾತ್ರೆಗಳನ್ನು ಕೈಗೊಳ್ಳುತ್ತಾರೆ. ಜೀವದ ಬಗ್ಗೆ ಸವಿ ನೆನಪುಗಳನ್ನು ಮೆಲುಕು ಹಾಕುವುದು ಕೂಡ ಒಳ್ಳೆಯ ಹವ್ಯಾಸ. ಅದನ್ನು ಬೇರೆಯವರಲ್ಲಿ ಹೇಳಿಕೊಳ್ಳುವುದು ಹೆಚ್ಚಿನ ಸಂತೋಷಕ್ಕೆ ಕಾರಣವಾಗುವುದು. ಸಂಜೆಯ ವೇಳೆಯಲ್ಲಿ ಸರಳ ವ್ಯಾಯಾಮ ಕೂಡ ಮನಸ್ಸು ಉಲ್ಲಸಿತವಾಗಿಟ್ಟುಕೊಳ್ಳಲು ಸಹಾಯಕ.
ಮನಶಾಂತಿಗಾಗಿ ಹೀಗೆ ಮಾಡಬಹುದು..
- ಪೂಜೆ, ಜಪತಪದಲ್ಲಿ ತೊಡಗಿಸಿಕೊಳ್ಳುವುದು.
- ಹೆಚ್ಚಿನ ಸಮಯವನ್ನು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು.
- ಭಜನೆಯಲ್ಲಿ ಪಾಲ್ಗೊಳ್ಳುವುದು.
- ಪುರಾಣ ಪುಣ್ಯಕಥೆಗಳ ಶ್ರವಣ, ಪುಸ್ತಕಗಳನ್ನು ಓದುವುದು.
- ಧ್ಯಾನ, ಲಘು ವ್ಯಾಯಾಮ ಮಾಡುವುದು.
- ಮಕ್ಕಳು, ಮೊಮ್ಮಕ್ಕಳ ಜತೆ, ಪರಿಸರದೊಂದಿಗೆ ಹೆಚ್ಚಿನ ಒಡನಾಟ.
- ಸಕಾರಾತ್ಮಕ ಚಿಂತನೆ.
- ಮಂಜು ದಾಸ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


