ಮೀಸೆ ಮಾವ

75 ವರ್ಷವಾದರೂ ಆ ಅಜ್ಜನ ಮೀಸೆ ಮಣ್ಣಾಗಿಲ್ಲ. ಇಳಿವಯಸ್ಸಿನಲ್ಲೂ ಮೀಸೆ ಮೂಲಕವೇ ಸಾಹಸ ಕೆಲಸ ಮಾಡುತ್ತ ಎಲ್ಲರ ಮನ ಗೆದ್ದಿರುವವರು ಯಲ್ಲಪ್ಪ ಕರಿಯಪ್ಪ ನೆರ್ತಿ.
ಗದಗ ತಾಲೂಕಿನ ಕುರ್ತಕೋಟಿ ಗ್ರಾಮದ ಯಲ್ಲಪ್ಪ ಜೀವನದುದ್ದಕ್ಕೂ ತಮ್ಮ ಮೀಸೆಯನ್ನು ಅತಿಯಾಗಿ ಪ್ರೀತಿಸುತ್ತಾ, ಅದರ ಮೂಲಕವೇ ತಮ್ಮನ್ನು ಗುರುತಿಸಿಕೊಂಡು, ನಂತರ ಮೀಸೆಯಿಂದಲೇ ಹಲವಾರು ಸಾಹಸ ಕಾರ್ಯಗಳಲ್ಲಿ ತೊಡಗಿಕೊಂಡವರು. ಇವರೊಂದಿಗೆ ಬಾಜಿ ಕಟ್ಟುವವರು ಹುಶಾರಾಗಿರಬೇಕು.
18 ಕೆಜಿ ಭಾರ ಎತ್ತುತ್ತಾರೆ
ಕೃಷಿ ಕುಟುಂಬದಿಂದ ಬಂದಿರುವ ಯಲ್ಲಪ್ಪ ಇಂದಿಗೂ ನಂಬಿರುವುದು ಕೃಷಿಯನ್ನೇ. ಅವರು ಹೆಚ್ಚಿನ ವಿದ್ಯಾಭ್ಯಾಸ ಪಡೆದಿಲ್ಲ. ಕೃಷಿ ಚಟುವಟಿಕೆಗಳೊಂದಿಗೆ ಮೊದಲಿನಿಂದಲೂ ಸಾಹಸ ಕ್ರೀಡೆಗಳಲ್ಲಿ ಆಸಕ್ತಿ. ಅದೇ ಅವರಿಗೆ ಪ್ರೇರಣೆಯೂ ಆಗಿದೆ. ಅಂದಿನ ಗೆಳೆಯರು ಇವರ ಮೀಸೆ ಪ್ರೀತಿಯನ್ನು ಲಘುವಾಗಿ ಪರಿಗಣಿಸಿ ಟೀಕಿಸುತ್ತಿದ್ದರಂತೆ. ಇದನ್ನೇ ಸವಾಲಾಗಿ ತೆಗೆದುಕೊಂಡು ಅದೇ ಮೀಸೆಯ ಮೂಲಕವೇ 18 ಕೆಜಿ ಭಾರದ ಅಡುಗೆ ಅನಿಲ ಸಿಲಿಂಡರ್ (ತುಂಬಿದ) ಹಾಗೂ ಅದಕ್ಕೆ ಸಮಾನ ಭಾರದ ವಸ್ತು ಎತ್ತುವುದನ್ನು ರೂಢಿಸಿಕೊಂಡರು. ಈಗಲೂ ಹಾಗೆ ಎತ್ತುವ ಮೂಲಕ ಯುವಕರನ್ನು ನಾಚಿಸುತ್ತಾರೆ.
ಯಲ್ಲಪ್ಪಜ್ಜ ಅವಕಾಶ ಸಿಕ್ಕಲ್ಲೆಲ್ಲ ತನ್ನ ಪ್ರತಿಭೆ ತೋರಿಸುವ ಮಲ್ಲ. 25 ವರ್ಷಗಳಿಂದ ಈ ರೀತಿ ಮೀಸೆಯ ಸಾಹಸ ಮಾಡುತ್ತಿದ್ದಾರೆ. ಇಲ್ಲಿಯವರೆಗೆ 150ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾರೆ.
ಬಡವನ ಕಲೆ ಬಡವನಲ್ಲಿಯೇ ಉಳಿದು ಹೋಗಬಾರದು. ಈ ಸಾಹಸ ಮಾಡಲು ವಿಶೇಷ ತಾಳ್ಮೆ ಬೇಕು.
-ಯಲ್ಲಪ್ಪ ನೆರ್ತಿ
-ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


