ನಿಮ್ಮ ಮನೆ ನಿಮ್ಮದೇ...

ಕೊನೆಗಾಲಕ್ಕೆ ಇರಲೊಂದು ಸೂರು ಬೇಕೆಂಬ ದೂರದೃಷ್ಟಿಯಿಂದ ಹೊಟ್ಟೆ ಬಟ್ಟೆ ಕಟ್ಟಿ, ಉಳಿತಾಯ ಮಾಡಿದ ಹಣದಿಂದ ನಿವೇಶನವೊಂದನ್ನು ಖರೀದಿಸಿ, ರಿಟೈರ್ ಆಗುವುದರೊಳಗೆ ಮನೆಯೊಂದನ್ನು ಕಟ್ಟಿಸುವುದು ಬಹುಶಃ ಎಲ್ಲರ ಆಸೆಯೂ ಆಗಿರುತ್ತದೆ. ಆದರೆ ವಯಸ್ಸಾದ ನಂತರ ತಾವೇ ಕಟ್ಟಿಸಿದ ಮನೆಯಿಂದ ಮಕ್ಕಳು ಹೊರಹಾಕಿದರೆ ಆ ವೃದ್ಧರು ಎಲ್ಲಿಗೆ ತಾನೇ ಹೋಗಬೇಕು? ಇಂಥವರಿಗಾಗಿಯೇ ರಾಷ್ಟ್ರೀಯ ಗೃಹನಿರ್ಮಾಣ ಬ್ಯಾಂಕ್ ಎನ್.ಎಚ್.ಬಿ. ಮರು ಅಡವು ಯೋಜನೆ ಜಾರಿಗೆ ತಂದಿದೆ. ಈ ಬ್ಯಾಂಕ್‌ನಲ್ಲಿ ಹಿರಿಯ ನಾಗರಿಕರು ತಮ್ಮ ಮನೆಯನ್ನು ಅಡವಿಟ್ಟು ಅದೇ ಮನೆಯಲ್ಲಿ ವಾಸ ಮಾಡುತ್ತ, ಬ್ಯಾಂಕಿನಿಂದ ಪಡೆದ ಹಣದಿಂದ ಪೂರ್ಣ ಜೀವಿತಾವಧಿಯವರೆಗೆ ಜೀವನ ನಿರ್ವಹಣೆ ಮಾಡಬಹುದು.
ಹಿರಿಯ ನಾಗರಿಕರು ತಮ್ಮ ಮನೆಗಳಲ್ಲೇ ವಾಸ ಮುಂದುವರಿಸಿ, ತಮ್ಮ ಹೆಸರುಗಳಲ್ಲಿ ನೋಂದಾಯಿತವಾಗಿರುವ ಮನೆಯನ್ನು ಅಡವಿಟ್ಟು ಬ್ಯಾಂಕುಗಳಿಂದ ಅಥವಾ ವಿತ್ತೀಯ ಸಂಸ್ಥೆಗಳಿಂದ ಅವಧಿಯುತ ಸಾಲಗಳನ್ನು ಪಡೆಯುವ ಸೌಲಭ್ಯವಿದೆ. ಅದನ್ನು 'ಮರು ಅಡವು ಸೌಲಭ್ಯ' ಎನ್ನಲಾಗುತ್ತದೆ.
ಮರು ಅಡವು ಸೌಲಭ್ಯವನ್ನು ಹೊಂದಲು ಈ ಕೆಳಗಿನ ಷರತ್ತುಗಳು ಅನ್ವಯವಾಗುತ್ತವೆ.
- ಮನೆ ವಸತಿಯದ್ದೇ ಇರಬೇಕು ಮತ್ತು ನಿಮ್ಮ ಜೀವನಸಂಗಾತಿ ಅದರಲ್ಲಿ ಜೀವಿಸುತ್ತಿರಬೇಕು.
- ಮನೆ ಯಾವುದೇ ಅಡಮಾನಗಳಿಂದ ಮುಕ್ತವಾಗಿರುವ ಸ್ವತ್ತಾಗಿರಬೇಕು.
- ಬಾಳ ಸಂಗತಿಗಳ ಪೈಕಿ ಒಬ್ಬರಿಗೆ ಕನಿಷ್ಠ 60 ವರ್ಷ ಮತ್ತು ಇನ್ನೊಬ್ಬರಿಗೆ ಕನಿಷ್ಠ 55 ವರ್ಷಗಳಾದರೂ ಆಗಿರಬೇಕು.
- ಪಡೆದ ಸಾಲದ ಹಣವನ್ನು ಜೀವನಾವಶ್ಯಕತೆಗಳಿಗಾಗಿ ಮಾತ್ರ ಬಳಸಬೇಕು ಹಾಗೂ ಯಾವುದೇ ಹೂಡಿಕೆಗಳಿಗಾಗಿ ಅಥವಾ ಲಾಭಕೋರತನದ ಉದ್ದೇಶಕ್ಕಾಗಿ ಬಳಸಬಾರದು.
- ಸಾಲದ ಅವಧಿ 10ರಿಂದ 20 ವರ್ಷಗಳವರೆಗೆ ಅಥವಾ ಜೀವಿಸಿರುವ ಬಾಳಸಂಗಾತಿಯ ಸಾವಿನವರೆಗೆ ಇರುತ್ತದೆ. ಸಾಲವನ್ನು ಮಾಲಕರೇ ತಮ್ಮ ಜೀವಿತಾವಧಿಯಲ್ಲಿ ಪಾವತಿಸಬಹುದು ಅಥವಾ ಅನಂತರದಲ್ಲಾದರೆ ಕಾನೂನುಯುತ ವಾರಸುದಾರರು ಸಾಲವನ್ನು ಪಾವತಿಸಿ ಮನೆಯನ್ನು ಪಡೆಯಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


