ಹೃದಯಂಗಮ

ಆಸಕ್ತಿ, ಪರಿಶ್ರಮ, ನಿಷ್ಠೆ ಇದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಉದಾಹರಣೆ ಬಾಲ ಕಲಾವಿದ ಹೃತಿಕ್ ಶ್ರೀಧರ್. ಸದಾ ಹೊಸತನದ ಹುಡುಕಾಟದಲ್ಲಿರುವ ಈ ಕಿಶೋರ ಎಂದೂ ಪ್ರಚಾರದ ಹಿಂದೆ ಹೋದವನಲ್ಲ.
ವಿಜಯಶ್ರೀ ಸಂಗೀತ ಶಾಲೆಯಲ್ಲಿ ಶಾಸ್ತ್ರೀಯ ಸಂಗೀತ, ಅಭಿನವ ನೃತ್ಯ ಶಾಲೆಯಲ್ಲಿ ಕಥಕ್ ಮತ್ತು ಎಂ.ಸಿ. ಆರ್ಟ್ ಅಕಾಡೆಮಿಯಲ್ಲಿ ಚಿತ್ರಕಲಾ ಕಲಿಕೆ. ಅಬಾಕಸ್ ಪರಿಣತ. ಬಹುಮುಖಿ ಪ್ರತಿಭಾನ್ವಿತನ ಆಸಕ್ತಿಗಳು ಹಲವು. ಕೇಂದ್ರ ಸರಕಾರ ನವದೆಹಲಿಯಲ್ಲಿ ಆಯೋಜಿಸಿದ್ದ ಜಲ ಸಂರಕ್ಷಣೆ ಚಿತ್ರ ಕಾರ್ಯಾಗಾರದಲ್ಲಿ ಭಾಗವಹಿಸಿ 50 ಸಾವಿರ ರುಪಾಯಿ ಪ್ರಶಸ್ತಿ ಗಳಿಸಿದ ರಾಜ್ಯದ ಹೆಮ್ಮೆಯ ಹುಡುಗ.
ರಾಜ್ಯಮಟ್ಟದ ಕಲಾ ಕಮ್ಮಟಗಳಲ್ಲಿ ಭಾಗಿ. 2010ರಲ್ಲಿ 5-10 ವರ್ಷಗಳ ಮಕ್ಕಳಿಗಾಗಿ ನಡೆಸಿದ ಒಲಿಂಪಿಕ್ ಕ್ರೀಡೆಯ ಲೋಗೋ ವಿನ್ಯಾಸ ಸ್ಫಧೆಯಲ್ಲಿ ಭಾಗವಹಿಸಿ ರಾಜ್ಯಪಾಲರಿಂದ ನಗದು ಪ್ರಶಸ್ತಿ ಪಡೆದ ಪ್ರತಿಭಾವಂತ. ಸ್ವಾನಂದಾಶ್ರಮ, ಇಸ್ಕಾನ್, ಆರ್ಟ್ ಆಫ್ ಲಿವಿಂಗ್ ಮುಂತಾದ ಹಲವು ಪ್ರತಿಷ್ಠಿತ ಸಂಸ್ಥೆಗಳಿಂದ ಪುರಸ್ಕೃತ.
ಸಂಪರ್ಕ: 9886779928.
ಪ್ರದರ್ಶನ
ಈ ಉದಯೋನ್ಮುಖ ಕಲಾಕಾರ ರಚಿಸಿರುವ 'ಮಯೂರ ಕೃಷ್ಣ' ವರ್ಣಚಿತ್ರ ಪಾಂಚಜನ್ಯ ಪ್ರತಿಷ್ಠಾನದ ಸಹಯೋಗದಲ್ಲಿ ಬೆಂಗಳೂರಿನ ದೊಡ್ಡಬಳ್ಳಾಪುರರಸ್ತೆ ರಾಜಾನುಕುಂಟೆ ಸಮೀಪದ ಕಾಕೋಳು ವೇಣುಗೋಪಾಲಸ್ವಾಮಿ 80ನೇ ಬ್ರಹ್ಮರಥೋತ್ಸವದ ಪ್ರಯುಕ್ತ ಆಯೋಜಿಸಲಾಗಿರುವ 'ಶ್ರೀಕೃಷ್ಣ ಕಲಾದರ್ಶನ' ಸಮೂಹ ಚಿತ್ರ ಪ್ರದರ್ಶನದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಇಂದು ಪ್ರದರ್ಶನದ ಕೊನೆ ದಿನ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


