ವಿದೇಶ

'ನ್ಯೂಕ್ಲಿಯರ್ ಬಾಂಬ್' ಹೊಂದುವಂತಿಲ್ಲ, ಕೂಡಲೇ ಹಾರ್ಮುಜ್ ಜಲಸಂಧಿ ಓಪನ್ ಮಾಡ್ಬೇಕು: ಇರಾನ್ ಗೆ ಟ್ರಂಪ್ ಷರತ್ತು!

ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಯನ್ನು ಇರಾನ್ ಶಾಶ್ವತವಾಗಿ ತ್ಯಜಿಸಬೇಕು ಮತ್ತು ಜಾಗತಿಕ ಇಂಧನ ಸಾಗಣೆಗೆ ಯಾವುದೇ ಅಡ್ಡಿಯಾಗದಂತೆ ಹಾರ್ಮುಜ್ ಜಲಸಂಧಿಯನ್ನು ತಕ್ಷಣವೇ ಪುನಃ ತೆರೆಯುವುದನ್ನು ಖಾತ್ರಿಪಡಿಸಬೇಕು ಎಂದು ಟ್ರಂಪ್ ಹೇಳಿದ್ದಾರೆ.

'ನ್ಯೂಕ್ಲಿಯರ್ ಬಾಂಬ್' ಹೊಂದುವಂತಿಲ್ಲ, ಕೂಡಲೇ ಹಾರ್ಮುಜ್ ಜಲಸಂಧಿ ಓಪನ್ ಮಾಡ್ಬೇಕು: ಇರಾನ್ ಗೆ ಟ್ರಂಪ್ ಷರತ್ತು!
ಡೊನಾಲ್ಡ್ ಟ್ರಂಪ್
Published On :

ವಾಷಿಂಗ್ಟನ್: ಇರಾನ್ ಜೊತೆಗಿನ ಪ್ರಸ್ತಾವಿತ ಒಪ್ಪಂದದ ಪ್ರಮುಖ ಷರತ್ತುಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ವಿವರಿಸಿದ್ದಾರೆ.

ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಯನ್ನು ಇರಾನ್ ಶಾಶ್ವತವಾಗಿ ತ್ಯಜಿಸಬೇಕು ಮತ್ತು ಜಾಗತಿಕ ಇಂಧನ ಸಾಗಣೆಗೆ ಯಾವುದೇ ಅಡ್ಡಿಯಾಗದಂತೆ ಹಾರ್ಮುಜ್ ಜಲಸಂಧಿಯನ್ನು ತಕ್ಷಣವೇ ಪುನಃ ತೆರೆಯುವುದನ್ನು ಖಾತ್ರಿಪಡಿಸಬೇಕು ಎಂದು ಹೇಳಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಮಾಧ್ಯಮ ಸೋಶಿಯಲ್ ಟ್ರುಥ್ ನಲ್ಲಿ ಟ್ರಂಪ್ ಪೋಸ್ಟ್ ಮಾಡಿದ್ದು,ಈ ಒಪ್ಪಂದದ ಕುರಿತು ಅಮೆರಿಕ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಹಂತದಲ್ಲಿದೆ. ಕಾರ್ಯತಂತ್ರದ ಜಲಮಾರ್ಗದಲ್ಲಿ ಉಳಿದಿರುವ ಸಮುದ್ರ ಗಣಿಗಳನ್ನು(ಸಮುದ್ರ ತಳದಲ್ಲಿ ಅಡಗಿರುವ ಸ್ಫೋಟಕಗಳನ್ನು) ತೆಗೆದುಹಾಕುವುದು ಮತ್ತು ಅಂತಾರಾಷ್ಟ್ರೀಯ ಮೇಲ್ವಿಚಾರಣೆಯಲ್ಲಿ ಇರಾನ್‌ನ ಪರಮಾಣು ಸಾಮಗ್ರಿಗಳನ್ನು ನಾಶಪಡಿಸುವುದು ಕೂಡಾ ಷರತ್ತಿನಲ್ಲಿದೆ ಎಂದು ಅವರು ತಿಳಿಸಿದ್ದಾರೆ.

ಟ್ರಂಪ್ ಅವರ ಪ್ರಮುಖ ಷರತ್ತುಗಳು: ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರ ಹೊಂದುವುದಿಲ್ಲಎದು ಖಾತರಿಪಡಿಸಬೇಕು ಮತ್ತು ಎರಡೂ ದಿಕ್ಕುಗಳಲ್ಲಿ ಅನಿಯಂತ್ರಿತ ಕಡಲ ಸಂಚಾರಕ್ಕಾಗಿ ಹಾರ್ಮುಜ್ ಜಲಸಂಧಿಯನ್ನು ತಕ್ಷಣವೇ ಮತ್ತೆ ತೆರೆಯಬೇಕು. ಜಲಮಾರ್ಗದಲ್ಲಿ ಇರುವ ಯಾವುದೇ ಸಮುದ್ರ ಗಣಿಗಳನ್ನು ತೆಗೆದುಹಾಕಲಾಗುವುದು ಅಥವಾ ಸ್ಫೋಟಿಸಲಾಗುವುದು. ಅಮೆರಿಕದ ನೌಕಾ ದಿಗ್ಬಂಧನದಿಂದ ವಿಳಂಬವಾದ ಹಡಗುಗಳು ತಮ್ಮ ಪ್ರಯಾಣವನ್ನು ಪುನರಾರಂಭಿಸಲು ಅನುಮತಿಸಲಾಗುವುದು ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.

ಹಾರ್ಮುಜ್ ಜಲಸಂಧಿಯು ವಿಶ್ವದ ಪ್ರಮುಖ ಹಡಗು ಮಾರ್ಗಗಳಲ್ಲಿ ಒಂದಾಗಿದ್ದು, ಜಾಗತಿಕ ತೈಲ ಪೂರೈಕೆಯಲ್ಲಿ ಗಮನಾರ್ಹ ಕೊಡುಗೆಯನ್ನು ನೀಡುತ್ತಿದೆ.

ಪ್ರಸ್ತಾವಿತ ಒಪ್ಪಂದದ ಹಲವಾರು ಅಂಶಗಳನ್ನು ಈಗಾಗಲೇ ಒಪ್ಪಿಕೊಳ್ಳಲಾಗಿದೆ, ಆದಾಗ್ಯೂ "ಮುಂದಿನ ಸೂಚನೆ ಬರುವವರೆಗೂ" ಯಾವುದೇ ಹಣಕಾಸಿನ ವರ್ಗಾವಣೆಗಳು ನಡೆಯುವುದಿಲ್ಲ. ಯುನೈಟೆಡ್ ಸ್ಟೇಟ್ಸ್, ಇರಾನ್ ಮತ್ತು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA) ಒಳಗೊಂಡ ಜಂಟಿ ಪ್ರಕ್ರಿಯೆಯ ಅಡಿಯಲ್ಲಿ ಇರಾನಿನ ಪರಮಾಣು ಸೌಲಭ್ಯಗಳನ್ನು ಪತ್ತೆ ಹಚ್ಚಿ ನಾಶಪಡಿಸಲಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.