ಇರಾನ್ ನಗು ದೀರ್ಘಕಾಲ ಉಳಿಯಲ್ಲ: ಶಾಂತಿ ಪ್ರಸ್ತಾವನೆ ಮಾತುಕತೆ ನಡುವೆ ಟ್ರಂಪ್ ಎಚ್ಚರಿಕೆ!
ಇರಾನ್ ಈಗ ಮತ್ತೆ ನಮ್ಮ ಗ್ರೇಟ್ ದೇಶವನ್ನು ನೋಡಿ ನಗುತ್ತಿದೆ. ಆದರೆ ಅವರು ಇನ್ನು ಮುಂದೆ ನಗುವುದಿಲ್ಲ ಎಂದು ಹೇಳಿದ್ದಾರೆ.

ವಾಷಿಂಗ್ಟನ್: ಇರಾನ್ ದಶಕಗಳಿಂದ ಆಟವಾಡುತ್ತಿದೆ. ಅಮೆರಿಕವನ್ನು ನೋಡಿ ನಗುತ್ತಿದೆ. ಆದರೆ ಈ ನಗು ಹಾಗೆಯೇ ದೀರ್ಘಕಾಲ ಉಳಿಯಲ್ಲಎಂದು ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ವಾಷಿಂಗ್ಟನ್‌ನ ಇತ್ತೀಚಿನ ಶಾಂತಿ ಪ್ರಸ್ತಾವನೆಗೆ ಟೆಹ್ರಾನ್‌ನ ಪ್ರತಿಕ್ರಿಯೆಯ ವರದಿಗಳ ಬಗ್ಗೆ ನೇರವಾಗಿ ಪ್ರತಿಕ್ರಿಯಿಸದೆ ಈ ರೀತಿ ಹೇಳಿದ್ದಾರೆ. "ಇರಾನ್ 47 ವರ್ಷಗಳಿಂದ ಅಮೆರಿಕ ಮತ್ತು ಉಳಿದ ಪ್ರಪಂಚದೊಂದಿಗೆ ಆಟವಾಡುತ್ತಿದೆ (ವಿಳಂಬ, ವಿಳಂಬ, ವಿಳಂಬ!) ಎಂದು ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ಪ್ಲಾಟ್‌ಫಾರ್ಮ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.
ಇರಾನ್ ಈಗ ಮತ್ತೆ ನಮ್ಮ ಗ್ರೇಟ್ ದೇಶವನ್ನು ನೋಡಿ ನಗುತ್ತಿದೆ. ಆದರೆ ಅವರು ಇನ್ನು ಮುಂದೆ ನಗುವುದಿಲ್ಲ ಎಂದು ಹೇಳಿದ್ದಾರೆ.
ಇತ್ತೀಚಿನ ಕದನ ವಿರಾಮ ಪ್ರಸ್ತಾವನೆಗೆ ಪಾಕಿಸ್ತಾನದ ಮೂಲಕ ಅಮೆರಿಕ ಕಳುಹಿಸಿದ ಪ್ರಸ್ತಾವನೆಗೆ ಇರಾನ್ ತನ್ನ ಪ್ರತಿಕ್ರಿಯೆ ಕಳುಹಿಸಿದ ಕೆಲವೇ ಗಂಟೆಗಳ ನಂತರ ಟ್ರಂಪ್ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಈ ಮಧ್ಯೆ ಇರಾನ್ ಬೆಂಬಲಿತ ಹೆಜ್ಬೊಲ್ಲಾ ಉಗ್ರಗಾಮಿ ಗುಂಪಿನ ವಿರುದ್ಧ ಇಸ್ರೇಲ್ ಹೋರಾಡುತ್ತಿರುವ ಲೆಬನಾನ್ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಯುದ್ಧ ಕೊನೆಗೊಳಿಸಲು ಮತ್ತು ಹಡಗು ಸಾಗಣೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇರಾನ್ ಪ್ರಯತ್ನಿಸುತ್ತದೆ ಎಂದು ಟೆಹ್ರಾನ್ ರಾಜ್ಯ ಟಿವಿ ತಿಳಿಸಿದೆ.
ನಾವು ಎಂದಿಗೂ ಶತ್ರುಗಳಿಗೆ ತಲೆಬಾಗುವುದಿಲ್ಲ, ಮತ್ತು ಸಂಭಾಷಣೆ ಅಥವಾ ಮಾತುಕತೆಯ ಬಗ್ಗೆ ಮಾತನಾಡಿದರೆ, ಅದು ಶರಣಾಗತಿ ಅಥವಾ ಹಿಮ್ಮೆಟ್ಟುವಿಕೆ ಎಂದರ್ಥವಲ್ಲ ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ಅಮೆರಿಕದ ಇತ್ತೀಚಿನ ಪ್ರಸ್ತಾಪದಲ್ಲಿ ಯುದ್ಧವನ್ನು ಕೊನೆಗೊಳಿಸುವ, ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಮತ್ತು ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಹಿಂದಕ್ಕೆ ಪಡೆಯುವ ಒಪ್ಪಂದದ ವಿಷಯವಿದೆ. ಆದರೆ, ತದನಂತರ ಚರ್ಚಿಸುವುದಾಗಿ ಇರಾನ್ ಹೇಳಿದೆ. ಇರಾನ್‌ನ ಉತ್ತರದ ಬಗ್ಗೆ ಶ್ವೇತಭವನವು ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



