ಸೌದಿ ವಾಯುನೆಲೆ ಮೇಲೆ ಕ್ಷಿಪಣಿ, ಡ್ರೋನ್ ದಾಳಿ: ಅಮೆರಿಕದ AWACS ವಿಮಾನ ಹೊಡೆದುರುಳಿಸಿದ್ದೇವೆ ಎಂದ ಇರಾನ್!
ಇರಾನ್‌ನ ಪ್ರೆಸ್ ಟಿವಿ ಹೊಸದಾಗಿ ಬಿಡುಗಡೆ ಮಾಡಿರುವ ಫೋಟೋಗಳಲ್ಲಿ ಮುಂಭಾಗದ ತುದಿ ಹಾನಿಗೊಳಗಾಗಿರುವ ವಿಮಾನವನ್ನು ತೋರಿಸುತ್ತದೆ. ಆರು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು 29 ಡ್ರೋನ್ ಗಳೊಂದಿಗೆ ದಾಳಿಯಾಗಿರುವುದಾಗಿ ವರದಿಯಾಗಿದೆ.

ಟೆಹರಾನ್: ಸೌದಿ ಅರೇಬಿಯಾದಲ್ಲಿರುವ ಅಮೆರಿಕದ ವಾಯು ನೆಲೆಯ ಮೇಲಿನ ಕ್ಷಿಪಣಿ ಮತ್ತು ಡ್ರೋನ್ ದಾಳಿ ವೇಳೆ ಅಮೆರಿಕದ ವಿಮಾನವೊಂದನ್ನು ಗಣನೀಯ ಪ್ರಮಾಣದಲ್ಲಿ ಹಾನಿಗೊಳಿಸಿರುವುದಾಗಿ ಇರಾನ್ ಹೇಳಿದೆ.
ಪ್ರಿನ್ಸ್ ಸುಲ್ತಾನ್ ವಾಯುನೆಲೆ ಮೇಲೆ ದಾಳಿಯ ವರದಿಯಾಗಿದ್ದು, ಅಲ್ಲಿ ಈಗ ಡ್ರೋನ್ ದಾಳಿಯಿಂದ ಹಾನಿಗೊಳಗಾಗಿರುವ E‑3 AWACS ಕಮಾಂಡ್ ಮತ್ತು ಕಂಟ್ರೋಲ್ ವಿಮಾನವನ್ನು ಇತರ ಯುಎಸ್ ಮಿಲಿಟರಿ ಸಲಕರಣೆಗಳೊಂದಿಗೆ ನಿಲ್ಲಿಸಲಾಗಿದೆ.
ಇರಾನ್‌ನ ಪ್ರೆಸ್ ಟಿವಿ ಹೊಸದಾಗಿ ಬಿಡುಗಡೆ ಮಾಡಿರುವ ಫೋಟೋಗಳಲ್ಲಿ ಮುಂಭಾಗದ ತುದಿ ಹಾನಿಗೊಳಗಾಗಿರುವ ವಿಮಾನವನ್ನು ತೋರಿಸುತ್ತದೆ. ಆರು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು 29 ಡ್ರೋನ್ ಗಳೊಂದಿಗೆ ದಾಳಿಯಾಗಿರುವುದಾಗಿ ವರದಿಯಾಗಿದೆ.
ಅಮೆರಿಕದ 10 ಸಿಬ್ಬಂದಿ ಗಾಯಗೊಂಡಿದ್ದಾರೆ, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಅಮೆರಿಕದ ವಾಯುನೆಲೆ ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ.
ದಾಳಿಯಲ್ಲಿ ಇಂಧನ ತುಂಬುವ ಬಹು ವಿಮಾನಗಳು ಹಾನಿಗೊಳಗಾಗಿವೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ. US ಸೆಂಟ್ರಲ್ ಕಮಾಂಡ್ (CENTCOM) ಘಟನೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇರಾನ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC)ಡ್ರೋನ್‌ಗಳ ಜೊತೆಗೆ ದೂರಗಾಮಿ ಕ್ಷಿಪಣಿ ಬಳಸಿದೆ ಎಂದು ಪ್ರೆಸ್ ಟಿವಿ ವರದಿ ಮಾಡಿದೆ.
ಅಮೆರಿಕದ MQ-9 ಡ್ರೋನ್ ಮತ್ತು F-16 ಜೆಟ್ ಅನ್ನು ಹೊಡೆದುರುಳಿಸಿರುವುದಾಗಿ ಇರಾನ್ ಹೇಳಿದೆ. ಫೆಬ್ರವರಿ 28 ರಂದು US ಮತ್ತು ಇಸ್ರೇಲ್, ಇರಾನ್‌ನ ಮೇಲೆ ಯುದ್ಧವನ್ನು ಪ್ರಾರಂಭಿಸಿದ ನಂತರ ಸೌದಿ ಅರೇಬಿಯಾದ ಈ ವಾಯುನೆಲೆ ಮೇಲೆ ಇರಾನ್ ಪದೇ ಪದೇ ದಾಳಿ ಮಾಡುತ್ತಿದೆ.

ಅಮೆರಿಕದ ಪಡೆಗಳು ಇಲ್ಲಿಗೆ ಬಂದರೆ ಆಕ್ರಮಣಕಾರಿ ದಾಳಿಗೆ ನಾವು ಸಿದ್ಧ: ಇರಾನ್ ಸಂಸತ್ತಿನ ಸ್ಪೀಕರ್ ಎಚ್ಚರಿಕೆ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


