ಅಮೆರಿಕ ಸೇನಾಪಡೆಗಳು ನೆಲೆಗೊಂಡಿರುವ ಪ್ರದೇಶಗಳನ್ನು ತೊರೆಯಿರಿ: ಪಶ್ಚಿಮ ಏಷ್ಯಾ ನಾಗರಿಕರಿಗೆ ಇರಾನ್ ಮನವಿ
ತಮ್ಮದೇ ಆದ ಮಿಲಿಟರಿ ನೆಲೆಗಳನ್ನು ರಕ್ಷಿಸಿಕೊಳ್ಳುವ ಧೈರ್ಯ ಮತ್ತು ಸಾಮರ್ಥ್ಯದ ಇಲ್ಲದ ಹೇಡಿತನದ ಅಮೆರಿಕನ್-ಜಿಯೋನಿಸ್ಟ್ ಪಡೆಗಳು, ಇಸ್ಲಾಂ ಹೋರಾಟಗಾರರ ಭಯದಿಂದ ಮುಗ್ಧ ನಾಗರಿಕರನ್ನು ಮಾನವ ಗುರಾಣಿಯಾಗಿ ಬಳಸಲು ಪ್ರಯತ್ನಿಸುತ್ತಿವೆ ಎಂದು ಇರಾನ್ ಕಿಡಿ ಕಾರಿದೆ.

ಟೆಹ್ರಾನ್: ಇರಾನ್‌ನ ಐಆರ್‌ಜಿಸಿ ನೆರೆಯ ಪಶ್ಚಿಮ ಏಷ್ಯಾದ ದೇಶಗಳ ನಾಗರಿಕರಿಗೆ ಹೊಸ ಎಚ್ಚರಿಕೆ ನೀಡಿದೆ. ಪ್ರೆಸ್ ಟಿವಿ ಪೋಸ್ಟ್ ಮಾಡಿದ ಸಂದೇಶದಲ್ಲಿ, ಅಮೆರಿಕ ಸೇನಾಪಡೆಗಳು ನೆಲೆಗೊಂಡಿರುವ ಪ್ರದೇಶಗಳನ್ನು ತಕ್ಷಣ ತೊರೆಯಿರಿ ಎಂದು IRGC ಕೇಳಿಕೊಂಡಿದೆ.
ತಮ್ಮದೇ ಆದ ಮಿಲಿಟರಿ ನೆಲೆಗಳನ್ನು ರಕ್ಷಿಸಿಕೊಳ್ಳುವ ಧೈರ್ಯ ಮತ್ತು ಸಾಮರ್ಥ್ಯದ ಇಲ್ಲದ ಹೇಡಿತನದ ಅಮೆರಿಕನ್-ಜಿಯೋನಿಸ್ಟ್ ಪಡೆಗಳು, ಇಸ್ಲಾಂ ಹೋರಾಟಗಾರರ ಭಯದಿಂದ ಮುಗ್ಧ ನಾಗರಿಕರನ್ನು ಮಾನವ ಗುರಾಣಿಯಾಗಿ ಬಳಸಲು ಪ್ರಯತ್ನಿಸುತ್ತಿವೆ ಎಂದು ಇರಾನ್ ಕಿಡಿ ಕಾರಿದೆ.
"ಇರಾನಿನ ನಾಗರಿಕರನ್ನು ಕೊಂದು ಪ್ರಮುಖ ವ್ಯಕ್ತಿಗಳನ್ನು ಗುರಿಯಾಗಿಸುವ ಅಮೆರಿಕ ಮತ್ತು ಇಸ್ರೇಲಿ ಪಡೆಗಳನ್ನು ನಿರ್ಮೂಲನೆ ಮಾಡುವುದು ನಮ್ಮ ಕರ್ತವ್ಯವಾಗಿರುವುದರಿಂದ, ನಾಗರಿಕರ ಹಾನಿಯನ್ನು ತಪ್ಪಿಸಲು ಯುಎಸ್ ಪಡೆಗಳು ನೆಲೆಗೊಂಡಿರುವ ಪ್ರದೇಶಗಳನ್ನು ತಕ್ಷಣವೇ ತೊರೆಯುವಂತೆ ನಾವು ನಿಮಗೆ ಸಲಹೆ ನೀಡುತ್ತೇವೆ" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗುರುವಾರ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ಸ್ ಕಾರ್ಪ್ಸ್(IRGC) ಕ್ಷಿಪಣಿಗಳು ಮತ್ತು ಡ್ರೋನ್‌ಗಳೊಂದಿಗೆ, ಪಶ್ಚಿಮ ಏಷ್ಯಾದಲ್ಲಿರುವ ಅಮೆರಿಕಾದ ಮಿಲಿಟರಿ ಬೇಸ್‌ಗಳನ್ನು ಮತ್ತು ಇಸ್ರೇಲಿ ಮಿಲಿಟರಿ ಬೇಸ್ ಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಟ್ರೂ ಪ್ರಾಮಿಸ್ 4ರ ವೇವ್ 83 ಅನ್ನು ಕಾರ್ಯಗತಗೊಳಿಸುವುದಾಗಿ ಘೋಷಿಸಿದೆ.
ಇರಾನ್ ಮಾತುಕತೆಗಳಿಗೆ ಹಪಹಪಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ ಬೆನ್ನಲ್ಲೇ, ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಇರಾನ್ ನ IRGC ವಕ್ತಾರ ಲೆಫ್ಟಿನೆಂಟ್ ಕರ್ನಲ್ ಇಬ್ರಾಹಿಂ ಝೋಲ್ಫಾಘರಿ ಅವರು, "ಮಧ್ಯಪ್ರಾಚ್ಯದಲ್ಲಿ ನಿಮ್ಮ ಆರ್ಥಿಕ ಹೂಡಿಕೆಗಳ ಯಾವುದೇ ಕುರುಹು ಇರುವುದಿಲ್ಲ, ಅಲ್ಲದೆ, ನಮ್ಮ ಉದ್ದೇಶ ನೆರವೇರುವವರೆಗೂ ಹಿಂದಿನ ಇಂಧನ ಮತ್ತು ತೈಲ ಬೆಲೆಗಳನ್ನು ನೀವು ನೋಡಲು ಸಾಧ್ಯವಿಲ್ಲ" ಎಂದು ಅಮೆರಿಕಾಗೆ ನೇರವಾಗಿಯೇ ಎಚ್ಚರಿಕೆ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



