ವಿದೇಶ

ಕಾಬೂಲ್ ಮೇಲೆ ಪಾಕ್ ಸೇನೆ ವೈಮಾನಿಕ ದಾಳಿ, 400 ಜನರ ಹತ್ಯೆ: ರಶೀದ್ ಖಾನ್ ಸೇರಿದಂತೆ ಅಫ್ಘಾನ್ ಕ್ರಿಕೆಟಿಗರ ಆಕ್ರೋಶ

ಸ್ಥಳೀಯ ಕಾಲಮಾನ ರಾತ್ರಿ 9 ಗಂಟೆಗೆ ಮಾದಕವಸ್ತು ಪುನರ್ವಸತಿ ಆಸ್ಪತ್ರೆಯ ಮೇಲೆ ವಾಯುದಾಳಿ ನಡೆಸಲಾಗಿದ್ದು, 2,000 ಹಾಸಿಗೆಗಳ ಸೌಲಭ್ಯದ ಬೃಹತ್ ಆಸ್ಪತ್ರೆ ನಾಶವಾಗಿದೆ ಎಂದು ಅಫ್ಘಾನಿಸ್ತಾನದ ಉಪ ಸರ್ಕಾರದ ವಕ್ತಾರ ಹಮ್ದುಲ್ಲಾ ಫಿಟ್ರತ್ ಹೇಳಿದ್ದಾರೆ.

ಕಾಬೂಲ್ ಮೇಲೆ ಪಾಕ್ ಸೇನೆ ವೈಮಾನಿಕ ದಾಳಿ, 400 ಜನರ ಹತ್ಯೆ: ರಶೀದ್ ಖಾನ್ ಸೇರಿದಂತೆ ಅಫ್ಘಾನ್ ಕ್ರಿಕೆಟಿಗರ ಆಕ್ರೋಶ
ರಶೀದ್ ಖಾನ್
Published On :

ಕಾಬೂಲ್: ಮಂಗಳವಾರ ಮುಂಜಾನೆ ಪಾಕಿಸ್ತಾನದಿಂದ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ನಡೆದ ಅತ್ಯಂತ ಭೀಕರ ವೈಮಾನಿಕ ದಾಳಿಯಲ್ಲಿ, 400 ಜನರು ಸಾವನ್ನಪ್ಪಿದ್ದಾರೆ ಮತ್ತು 250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಸ್ಥಳೀಯ ಕಾಲಮಾನ ರಾತ್ರಿ 9 ಗಂಟೆಗೆ ಮಾದಕವಸ್ತು ಪುನರ್ವಸತಿ ಆಸ್ಪತ್ರೆಯ ಮೇಲೆ ವಾಯುದಾಳಿ ನಡೆಸಲಾಗಿದ್ದು, 2,000 ಹಾಸಿಗೆಗಳ ಸೌಲಭ್ಯದ ಬೃಹತ್ ಆಸ್ಪತ್ರೆ ನಾಶವಾಗಿದೆ ಎಂದು ಅಫ್ಘಾನಿಸ್ತಾನದ ಉಪ ಸರ್ಕಾರದ ವಕ್ತಾರ ಹಮ್ದುಲ್ಲಾ ಫಿಟ್ರತ್ ಹೇಳಿದ್ದಾರೆ.

ಆದರೆ, ಈ ಆರೋಪಗಳನ್ನು ಪಾಕಿಸ್ತಾನ ನಿರಾಕರಿಸಿದೆ. ಕಾಬೂಲ್‌ನಲ್ಲಿ ಯಾವುದೇ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಹೇಳಿದೆ.

ಕಾಬೂಲ್ ನಲ್ಲಿ ವೈಮಾನಿಕ ದಾಳಿಯಲ್ಲಿ ಅಪಾರ ಪ್ರಮಾಣದಲ್ಲಿ ನಾಗರಿಕರ ಸಾವು ನೋವುಗಳ ಬಗ್ಗೆ ಅಪ್ಘನ್ ಕ್ರಿಕೆಟರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಶೀದ್ ಖಾನ್, ಉದ್ದೇಶಪೂರ್ವಕವಾಗಿ ಅಥವಾ ತಪ್ಪಾಗಿ ನಾಗರಿಕರ ಮನೆಗಳು, ಶಿಕ್ಷಣ ಸಂಸ್ಥೆಗಳು ಅಥವಾ ಆಸ್ಪತ್ರೆಗಳನ್ನು ಟಾರ್ಗೆಟ್ ಮಾಡುವುದು ಯುದ್ಧಾಪರಾಧವಾಗಿದೆ ಎಂದು ಕಿಡಿಕಾರಿದ್ದಾರೆ.

ವಿಶೇಷವಾಗಿ ಪವಿತ್ರ ರಂಜಾನ್ ಮಾಸದಲ್ಲಿ ಅಪಾರ ಪ್ರಮಾಣದಲ್ಲಿ ಮನುಷ್ಯರ ಜೀವ ಹಾನಿ, ಅನಾರೋಗ್ಯಕರ ಹಾಗೂ ತೀವ್ರ ದು:ಖಕರವಾಗಿದೆ. ಇದು ಒಡಕು ಮತ್ತು ದ್ವೇಷಕ್ಕೆ ಮಾತ್ರ ಕಾರಣವಾಗುತ್ತದೆ. ಈ ದೌರ್ಜನ್ಯವನ್ನು ಕೂಲಂಕಷವಾಗಿ ತನಿಖೆ ಮಾಡಲು ಮತ್ತು ಅಪರಾಧಿಗಳನ್ನು ಶಿಕ್ಷಿಸಲು ವಿಶ್ವಸಂಸ್ಥೆ ಮತ್ತು ಇತರ ಮಾನವ ಹಕ್ಕುಗಳನ್ನು ಅವರು ಒತ್ತಾಯಿಸಿದ್ದಾರೆ.

ಅಪಾರ ಸಂಖ್ಯೆಯ ಸಾವುನೋವನ್ನು ಅಫ್ಘಾನಿಸ್ತಾನದ ಮಾಜಿ ನಾಯಕ ಮೊಹಮ್ಮದ್ ನಬಿ ಕೂಡಾ ಖಂಡಿಸಿದ್ದಾರೆ. ಪಾಕ್ ಸೇನಾ ಆಡಳಿತ ನಡೆಸಿದ ಬಾಂಬ್ ದಾಳಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕರು ಹತ್ಯೆಯಾಗಿದ್ದಾರೆ. ತಾಯಂದಿರು ತಮ್ಮ ಮಗನಿಗಾಗಿ ಮನೆಯ ಗೇಟ್ ಗಳಲ್ಲಿ ಕಾಯುತ್ತಿದ್ದರು. ರಂಜಾನ್‌ನ 28 ನೇ ರಾತ್ರಿಯಂದು ಅವರ ಜೀವವನ್ನು ಕಸಿದುಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಫ್ಘಾನಿಸ್ತಾನ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್, ದಾಳಿಯನ್ನು ಖಂಡಿಸಿದ್ದಾರ.ೆ. ಪಾಕಿಸ್ತಾನ ಆಸ್ಪತ್ರೆಗಳು ಮತ್ತು ನಾಗರಿಕರ ವಸತಿ ಪ್ರದೇಶಗಳನ್ನು ಗುರಿಯನ್ನಾಗಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ಪ್ರತಿಕ್ರಿಯೆ ಏನು?

ಕಾಬೂಲ್ ಮತ್ತು ನಂಗರ್‌ಹಾರ್‌ನ ಪೂರ್ವ ಪ್ರಾಂತ್ಯದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನಿ ಸೇನೆಯು "ನಿಖರವಾದ ವಾಯುದಾಳಿಗಳನ್ನು ನಡೆಸಿದೆ ಎಂದು ಪಾಕಿಸ್ತಾನದ ಮಾಹಿತಿ ಸಚಿವ ಅತ್ತಾವುಲ್ಲಾ ತರಾರ್ ಹೇಳಿದ್ದಾರೆ.

ಕಾಬೂಲ್‌ನ ಎರಡು ಸ್ಥಳಗಳಲ್ಲಿ "ತಾಂತ್ರಿಕ ಬೆಂಬಲ ಮೂಲಸೌಕರ್ಯ ಮತ್ತು ಯುದ್ಧಸಾಮಗ್ರಿ ಸಂಗ್ರಹಣಾ ಸೌಲಭ್ಯಗಳು ನಾಶವಾಗಿವೆ. ಅಫಘಾನ್ ತಾಲಿಬಾನ್ ಆಡಳಿತವು ತನ್ನ ಬಹು ಭಯೋತ್ಪಾದಕ ಪ್ರಾಕ್ಸಿಗಳನ್ನು ಬೆಂಬಲಿಸಲು ಬಳಸುತ್ತಿರುವ ಮೂಲಸೌಕರ್ಯಗಳ ಮೇಲೆ ನಿಖರವಾಗಿ ದಾಳಿ ಮಾಡಲಾಗಿದೆ ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.