ವಿದೇಶ

West Asia conflict: ಕುವೈತ್ ಸೇನಾ ತಾಣದ ಮೇಲೆ ಡ್ರೋನ್ ದಾಳಿ; ಯುದ್ಧದಲ್ಲಿ ಹಸ್ತಕ್ಷೇಪ ಮಾಡದಿರಿ- ಇತರೆ ರಾಷ್ಟ್ರಗಳಿಗೆ ಇರಾನ್ ಖಡಕ್ ಎಚ್ಚರಿಕೆ

ಅಮೆರಿಕಾ ಸೇನೆ ಬಳಸುವ ತಾಣಗಳು ತಮ್ಮ ಪಕ್ಕದ ದೇಶಗಳಲ್ಲಿದ್ದು, ಅಲ್ಲಿಂದಲೇ ದಾಳಿಗಳು ನಡೆಯುತ್ತಿರುವುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ ಎಂದು ಇರಾನ್ ಹೇಳಿದ್ದು, ನಮ್ಮ ಹಾಗೂ ಅಮೆರಿಕಾ, ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ನೆರೆ ರಾಷ್ಟ್ರಗಳು ಹಸ್ತಕ್ಷೇಪ ಮಾಡಬಾರದು.

West Asia conflict: ಕುವೈತ್ ಸೇನಾ ತಾಣದ ಮೇಲೆ ಡ್ರೋನ್ ದಾಳಿ; ಯುದ್ಧದಲ್ಲಿ ಹಸ್ತಕ್ಷೇಪ ಮಾಡದಿರಿ- ಇತರೆ ರಾಷ್ಟ್ರಗಳಿಗೆ ಇರಾನ್ ಖಡಕ್ ಎಚ್ಚರಿಕೆ
ಮಧ್ಯಾಪ್ರಾಚ್ಯ ಯುದ್ಧ
Published On :

ಟೆಹ್ರಾನ್: ಅಮೆರಿಕಾ-ಇಸ್ರೇಲ್ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಇತರ ದೇಶಗಳು ಹಸ್ತಕ್ಷೇಪ ಮಾಡಬಾರದು ಎಂದು ಇರಾನ್ ಕಠಿಣ ಎಚ್ಚರಿಕೆ ನೀಡಿದೆ.

ಅಮೆರಿಕಾ ಸೇನೆ ಬಳಸುವ ತಾಣಗಳು ತಮ್ಮ ಪಕ್ಕದ ದೇಶಗಳಲ್ಲಿದ್ದು, ಅಲ್ಲಿಂದಲೇ ದಾಳಿಗಳು ನಡೆಯುತ್ತಿರುವುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ ಎಂದು ಇರಾನ್ ಹೇಳಿದ್ದು, ನಮ್ಮ ಹಾಗೂ ಅಮೆರಿಕಾ, ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ನೆರೆ ರಾಷ್ಟ್ರಗಳು ಹಸ್ತಕ್ಷೇಪ ಮಾಡಬಾರದು. ಮಾಡಿದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕಠಿಣ ಸಂದೇಶ ರವಾನಿಸಿದೆ.

ಯುದ್ಧ ಆರಂಭವಾದ ನಂತರ ಹಾರ್ಮೂಜ್ ಸಮುದ್ರ ಮಾರ್ಗ ಮುಚ್ಚಲ್ಪಟ್ಟಿರುವುದರಿಂದ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದೆ.

ಇದರ ಬೆನ್ನಲ್ಲೇ ಹೇಳಿಕೆ ನೀಡಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇತರ ದೇಶಗಳು ಕೂಡ ಅಮೆರಿಕಾ ಜೊತೆ ಸೇರಿ ಪ್ರಮುಖ ಸಮುದ್ರ ಮಾರ್ಗವಾದ ಹಾರ್ಮೂಜ್ ಅನ್ನು ಸುರಕ್ಷಿತವಾಗಿಡಲು ಸಹಕರಿಸಬೇಕು ಎಂದು ಕರೆ ನೀಡಿದ್ದರು.

ಈ ಬೆಳವಣಿಗೆ ಬೆನ್ನಲ್ಲೇ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ನೆರೆ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದಾರೆ. ನಿಮ್ಮ ಪ್ರದೇಶದಲ್ಲಿ ಇರುವ ವಿದೇಶಿ ದಾಳಿಕೋರರನ್ನು ಹೊರಹಾಕಬೇಕು ಎಂದು ಆಗ್ರಹಿಸಿದ್ದಾರೆ.

ಅರಬಿಕ್ ಭಾಷೆಯ ಸುದ್ದಿ ವೇದಿಕೆ Al‑Araby Al‑Jadeed ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, “ಈ ಯುದ್ಧ ಮತ್ತೆ ನಡೆಯದಂತೆ ಖಚಿತವಾದಾಗ ಮತ್ತು ಪರಿಹಾರ ನೀಡಿದಾಗ ಮಾತ್ರ ಯುದ್ಧ ಅಂತ್ಯವಾಗಲಿದೆ ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಇಟಲಿ ವಿದೇಶಾಂಗ ಸಚಿವ ಆಂಟೋನಿಯೊ ತಜಾನಿ ಅವರು, “ನಾವು ಯಾರೊಂದಿಗೂ ಯುದ್ಧದಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಕುವೈತ್ ನಲ್ಲಿರುವ ಅಮೆರಿಕಾ ಮತ್ತು ಇಟಲಿ ಸೈನಿಕರು ಬಳಸುವ ಸೇನಾ ತಾಣದ ಮೇಲೆ ಡ್ರೋನ್ ದಾಳಿ ನಡೆದಿರುವುದಾಗಿ ವರದಿಯಾಗಿದೆ.

ಕುವೈತ್‌ನ ಅಲಿ ಅಲ್ ಸಲೇಮ್ ವಾಯುನೆಲೆಯಲ್ಲಿ ನಡೆದ ಡ್ರೋನ್ ದಾಳಿಯು ಇಟಲಿಗೆ ಸೇರಿದ ಮಾನವರಹಿತ ವಿಮಾನವನ್ನು ನಾಶವಾಗಿದೆ ಎಂದು ಇಟಲಿ ಸೇನೆ ತಿಳಿಸಿದೆ. ಆದರೆ ಈ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.