ರಷ್ಯಾದ ತೈಲ ಖರೀದಿಸುವಂತೆ ಭಾರತ ಸೇರಿದಂತೆ ಜಗತ್ತಿಗೆ ಅಮೆರಿಕ ಬೇಡಿಕೊಳ್ಳುತ್ತಿದೆ; ಇದು 'ಚಿಂತಾಜನಕ': ಇರಾನ್ ಸಚಿವ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೆಹ್ರಾನ್ ಮೇಲೆ ತನ್ನ ಪರಮಾಣು ಕಾರ್ಯಕ್ರಮದ ಕುರಿತು ಹೊಸ ಒಪ್ಪಂದಕ್ಕೆ ಒಪ್ಪಿಕೊಳ್ಳಲು ಒತ್ತಡ ಹೇರಿದ ನಂತರ ಫೆಬ್ರುವರಿ 28 ರಿಂದ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆಸಿದವು.

ದುಬೈ: ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳದಂತೆ ಭಾರತಕ್ಕೆ ಬೆದರಿಸಿದ್ದ ಅಮೆರಿಕ, ಇರಾನ್ ಜೊತೆ ಯುದ್ಧ ಮಾಡಿದ ಎರಡು ವಾರಗಳ ನಂತರ, ಇದೀಗ ಮಾಸ್ಕೋದಿಂದ ಕಚ್ಚಾ ತೈಲವನ್ನು ಖರೀದಿಸುವಂತೆ ಭಾರತ ಸೇರಿದಂತೆ ಜಗತ್ತಿಗೆ ಬೇಡಿಕೊಳ್ಳುತ್ತಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಹೇಳಿದ್ದಾರೆ.
'ಹಲವು ತಿಂಗಳುಗಳಿಂದ ಅಮೆರಿಕವು ರಷ್ಯಾದಿಂದ ತೈಲ ಆಮದುಗಳನ್ನು ನಿಲ್ಲಿಸುವಂತೆ ಭಾರತಕ್ಕೆ ಬೆದರಿಕೆಯೊಡ್ಡಿತ್ತು' ಎಂದು ಅರಘ್ಚಿ ಶುಕ್ರವಾರ ಸಾಮಾಜಿಕ ಮಾಧ್ಯಮ ವೇದಿಕೆ Xನಲ್ಲಿ ಪೋಸ್ಟ್ ಮಾಡಿದ್ದಾರೆ.
'ಇರಾನ್ ಜೊತೆಗಿನ ಎರಡು ವಾರಗಳ ಯುದ್ಧದ ನಂತರ, ಶ್ವೇತಭವನವು ಈಗ ಭಾರತ ಸೇರಿದಂತೆ ಜಗತ್ತಿನ ಇತರ ರಾಷ್ಟ್ರಗಳನ್ನು ರಷ್ಯಾದಿಂದಲೇ ಕಚ್ಚಾ ತೈಲ ಖರೀದಿಸುವಂತೆ ಬೇಡಿಕೊಳ್ಳುತ್ತಿದೆ' ಎಂದು ಅವರು ಹೇಳಿದರು.
ಮಾರ್ಚ್ 5 ರಂದು, ಅಮೆರಿಕ ಭಾರತಕ್ಕೆ 30 ದಿನಗಳ ವಿನಾಯಿತಿ ನೀಡಿತು. ಉಕ್ರೇನ್‌ನಲ್ಲಿನ ಯುದ್ಧದ ಕಾರಣದಿಂದಾಗಿ ಅಮೆರಿಕವು ರಷ್ಯಾದ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿದ್ದರೂ ಸಹ, ಈ ವಿನಾಯಿತಿಯು ಭಾರತವು ರಷ್ಯಾದ ತೈಲವನ್ನು ಖರೀದಿಸುವುದನ್ನು ಮುಂದುವರಿಸಲು ಅನುವು ಮಾಡಿಕೊಟ್ಟಿತ್ತು.
ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಬಗ್ಗೆ ಯುರೋಪಿನ ನಿಲುವನ್ನು ಟೀಕಿಸಿದ ಸಚಿವರು, ಇರಾನ್ ಮೇಲಿನ ಯುದ್ಧವು 'ಕಾನೂನುಬಾಹಿರ'ವಾಗಿದೆ. ಇರಾನ್ ಮೇಲಿನ ಕಾನೂನುಬಾಹಿರ ಯುದ್ಧವನ್ನು ಬೆಂಬಲಿಸುವುದರಿಂದ ರಷ್ಯಾದ ವಿರುದ್ಧ ಅಮೆರಿಕದ ಬೆಂಬಲ ಸಿಗುತ್ತದೆ ಎಂದು ಯುರೋಪ್ ಭಾವಿಸಿದೆ ಎಂದು ಹೇಳಿದರು.
ರಷ್ಯಾದ ಕಚ್ಚಾ ತೈಲ ಖರೀದಿ ಬಗ್ಗೆ ಟ್ರಂಪ್ ಆಡಳಿತದ ಸದ್ಯದ ನಿಲುವನ್ನು ಅವರು 'ಕರುಣಾಜನಕ' ಎಂದು ಕರೆದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟೆಹ್ರಾನ್ ಮೇಲೆ ತನ್ನ ಪರಮಾಣು ಕಾರ್ಯಕ್ರಮದ ಕುರಿತು ಹೊಸ ಒಪ್ಪಂದಕ್ಕೆ ಒಪ್ಪಿಕೊಳ್ಳಲು ಒತ್ತಡ ಹೇರಿದ ನಂತರ ಫೆಬ್ರುವರಿ 28 ರಿಂದ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆಸಿದವು. ಇದರಿಂದ ಪ್ರತೀಕಾರಕ್ಕೆ ಇರಾನ್ ಮುಂದಾಯಿತು. ಆಗ ಇಡೀ ಗಲ್ಫ್ ಪ್ರದೇಶಕ್ಕೆ ಯುದ್ಧದ ಕಿಡಿ ಹಬ್ಬಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



