ಇರಾನ್ ಶಾಲೆ ಸ್ಫೋಟದಲ್ಲಿ 165 ವಿದ್ಯಾರ್ಥಿನಿಯರನ್ನು ಕೊಂದದ್ದು ಅಮೆರಿಕ! ತನಿಖೆ ವೇಳೆ ಬಹಿರಂಗ!
ದಕ್ಷಿಣ ಹಾರ್ಮೋಜ್ಗಾನ್ ಪ್ರಾಂತ್ಯದ ಮಿನಾಬ್ ನಗರದ ರೆವಲ್ಯೂಷನರಿ ಗಾರ್ಡ್ ಬೇಸ್‌ನ ಪಕ್ಕದಲ್ಲಿರುವ ಶಾಲೆ ಮೇಲೆ ಸ್ಫೋಟ ನಡೆದಿತ್ತು

ಜೆರುಸಲೇಂ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪ್ರಾರಂಭದಲ್ಲಿ ಇರಾನ್ ನ ಶಾಲೆಯೊಂದರ ಮೇಲೆ ನಡೆದ ಸ್ಫೋಟದಲ್ಲಿ 165ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಬಲಿಯಾದುದ್ದಕ್ಕೆ ಇರಾನ್ ಕಾರಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ವಿಡಿಯೋವೊಂದನ್ನು ತನಿಖಾ ತಂಡ ಬೆಲ್ಲಿಂಗ್‌ಕ್ಯಾಟ್ ಬಿಡುಗಡೆ ಮಾಡಿದೆ.
ಫೆ. 28 ರಂದು ನಡೆದ ವೈಮಾನಿಕ ದಾಳಿಗೆ ಅಮೆರಿಕವೇ ಕಾರಣ ಎಂದು ಹೇಳಿದೆ. ಅಂದು ದಕ್ಷಿಣ ಹಾರ್ಮೋಜ್ಗಾನ್ ಪ್ರಾಂತ್ಯದ ಮಿನಾಬ್ ನಗರದ ರೆವಲ್ಯೂಷನರಿ ಗಾರ್ಡ್ ಬೇಸ್‌ನ ಪಕ್ಕದಲ್ಲಿರುವ ಶಾಲೆ ಮೇಲೆ ಸ್ಫೋಟ ನಡೆದಿತ್ತು. ದಿ ಅಸೋಸಿಯೇಟೆಡ್ ಪ್ರೆಸ್ ಸಂದರ್ಶಿಸಿದ ತಜ್ಞರು, ಉಪಗ್ರಹ ಚಿತ್ರ ವಿಶ್ಲೇಷಣೆಯನ್ನು ಉಲ್ಲೇಖಿಸಿ, ಕಾಂಪೌಂಡ್ ಮೇಲೆ ಹಾಕಿದ ಬಾಂಬ್ ಗಳು ಶಾಲೆಗೆ ಬಡಿದಿರಬಹುದು ಎಂದು ಹೇಳುತ್ತಾರೆ.
ಶಾಲೆ ಮೇಲಿನ ದಾಳಿಯ ಮೂರು ಸೆಕೆಂಡ್‌ಗಳ ವಿಡಿಯೋವನ್ನು ಬೆಲ್ಲಿಂಗ್‌ಕ್ಯಾಟ್ ಹಂಚಿಕೊಂಡಿದ್ದು, ಇದನ್ನು ಇರಾನ್‌ನ ಮೆಹರ್ ಸುದ್ದಿ ಸಂಸ್ಥೆಯು ಶೇರ್ ಮಾಡಿಕೊಂಡಿದೆ. ಕಟ್ಟಡವೊಂದರ ಮೇಲೆ ಯುದ್ಧಸಾಮಗ್ರಿ ಬೀಳುತ್ತಿರುವುದನ್ನು ವೀಡಿಯೊದಲ್ಲಿ ನೋಡಬಹುದಾಗಿದೆ.
ಬೆಲ್ಲಿಂಗ್‌ಕ್ಯಾಟ್ ಸಂಶೋಧಕರಾದ ಟ್ರೆವರ್ ಬಾಲ್ ಅವರು ವೀಡಿಯೊವನ್ನು ಶಾಲೆಯ ಸಮೀಪವಿರುವ ಪ್ರದೇಶಕ್ಕೆ ಜಿಯೋಲೊಕೇಟ್ ಮಾಡಿದ್ದಾರೆ, AP ಕೂಡ ಇದೇ ರೀತಿ ಮಾಡಿದೆ.
ಇದು ಟೊಮಾಹಾಕ್ ಕ್ರೂಸ್ ಕ್ಷಿಪಣಿ ದಾಳಿ ಎಂದು ಬಾಲ್ ಗುರುತಿಸಿದ್ದಾರೆ. ಇದನ್ನು ಅಮೆರಿಕ ಮಾತ್ರ ಹೊಂದಿದೆ. ಅಮೆರಿಕ ಬಳಸಿದ ಯುದ್ದೋಪಕರಣಗಳಿಗೆ ಇದು ಮೊದಲ ಸಾಕ್ಷಿಯಾಗಿದೆ. US ಸೆಂಟ್ರಲ್ ಕಮಾಂಡ್ ಈ ಯುದ್ಧದಲ್ಲಿ ಟೊಮಾಹಾಕ್ ಕ್ಷಿಪಣಿಗಳನ್ನು ಬಳಸಿರುವುದನ್ನು ಒಪ್ಪಿಕೊಂಡಿದೆ.
USS ಅಬ್ರಹಾಂ ಲಿಂಕನ್ ಏರ್‌ಕ್ರಾಫ್ಟ್ ಕ್ಯಾರಿಯರ್ ಗುಂಪಿನ ಭಾಗವಾದ USS ಸ್ಪ್ರೂನ್ಸ್‌ನ ( USS Spruance) ಫೋಟೋವನ್ನು ಸಹ ಬಿಡುಗಡೆ ಮಾಡಿದೆ. ಇದು ಶಾಲೆಯ ಆವರಣದೊಳಗೆ ಇದೆ. ಫೆಬ್ರವರಿ 28 ರಂದು ಅಮೆರಿಕ ಟೊಮಾಹಾಕ್ ಕ್ಷಿಪಣಿಯನ್ನು ಹಾರಿಸಿತು.

ಅಮೆರಿಕ-ಇಸ್ರೇಲ್ ದಾಳಿಗೆ 165 ಇರಾನ್ ಶಾಲಾ ಬಾಲಕಿಯರು ಬಲಿ: ಅಂತಿಮ ಯಾತ್ರೆಯಲ್ಲಿ ಜನಸಾಗರ, ತೀವ್ರ ಆಕ್ರೋಶ! Video
ಶಾಲೆ ಮೇಲಿನ ದಾಳಿ ಕುರಿತು ಶನಿವಾರ ಪ್ರತಿಕ್ರಿಯಿಸಿದ ಡೊನಾಲ್ಡ್ ಟ್ರಂಪ್, ಇರಾನ್ ಶಾಲೆ ಮೇಲೆ ನಾವು ದಾಳಿ ಮಾಡಿಲ್ಲ. ಅದಕ್ಕೆ ಇರಾನ್ ಕಾರಣ ಎಂದು ಹೇಳಿದ್ದರು. ಈ ಕುರಿತು ಯುಎಸ್ ತನಿಖೆ ನಡೆಸುತ್ತಿದೆ ಎಂದು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಕೂಡಾ ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


