ಒಮಾನ್ ಮಧ್ಯಸ್ಥಿಕೆ: ಈ ಬಗ್ಗೆ ಇರಾನ್ ಹೇಳಿದ್ದೇನು?
ವಾಲ್ ಸ್ಟ್ರೀಟ್ ಜರ್ನಲ್ ನ್ನು ಉಲ್ಲೇಖಿಸಿ ಅಲ್ ಜಜೀರಾ ಬ್ರೇಕಿಂಗ್ ವರದಿ ಮಾಡಿದ್ದಕ್ಕೆ ಪ್ರತಿಕ್ರಿಯೆಯಾಗಿ ಅವರು ಈ ಹೇಳಿಕೆ ನೀಡಿದ್ದಾರೆ.

ನವದೆಹಲಿ: ಶನಿವಾರ ಇಸ್ರೇಲ್-ಅಮೆರಿಕಾ ದಾಳಿಯಲ್ಲಿ ಅಯತೊಲ್ಲಾ ಖಮೇನಿ ಹತ್ಯೆಯ ನಂತರ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವಂತೆ, ಇರಾನ್‌ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಅಲಿ ಲಾರಿಜಾನಿ ಸೋಮವಾರ ಇರಾನ್ ಅಮೆರಿಕದೊಂದಿಗೆ ಮಾತುಕತೆ ನಡೆಸುವುದಿಲ್ಲ ಎಂದು ದೃಢವಾಗಿ ನಿರಾಕರಿಸಿದರು.
ವಾಲ್ ಸ್ಟ್ರೀಟ್ ಜರ್ನಲ್ ನ್ನು ಉಲ್ಲೇಖಿಸಿ ಅಲ್ ಜಜೀರಾ ಬ್ರೇಕಿಂಗ್ ವರದಿ ಮಾಡಿದ್ದಕ್ಕೆ ಪ್ರತಿಕ್ರಿಯೆಯಾಗಿ ಅವರು ಈ ಹೇಳಿಕೆ ನೀಡಿದ್ದಾರೆ. ಅಲ್ಲಿ ಲಾರಿಜಾನಿ ಒಮಾನ್ ಮೂಲಕ ಮಧ್ಯವರ್ತಿಯಾಗಿ ಅಮೆರಿಕದೊಂದಿಗೆ ಮಾತುಕತೆಗಳನ್ನು ಪುನರಾರಂಭಿಸಲು ಸಿದ್ಧರಾಗಿದ್ದಾರೆ ಎಂದು ವರದಿ ಮಾಡಿದೆ.
ಅಲ್ ಜಜೀರಾ ತನ್ನ ಪೋಸ್ಟ್‌ನಲ್ಲಿ "ಅಧಿಕಾರಿಗಳ ಕುರಿತು ವಾಲ್ ಸ್ಟ್ರೀಟ್ ಜರ್ನಲ್" ಎಂಬ ಶೀರ್ಷಿಕೆಯಡಿ, "ವಾಷಿಂಗ್ಟನ್‌ನೊಂದಿಗೆ ಮಾತುಕತೆಗಳನ್ನು ಪುನರಾರಂಭಿಸಲು ಲಾರಿಜಾನಿ ಮಾಡಿದ ಪ್ರಯತ್ನ ಒಮಾನ್ ಸುಲ್ತಾನರ ಮಧ್ಯವರ್ತಿಗಳ ಮೂಲಕ ಚರ್ಚಿಸಲ್ಪಟ್ಟಿದೆ" ಎಂದು ವರದಿ ಮಾಡಿದೆ.
ಅಮೆರಿಕ ಅಧ್ಯಕ್ಷರ ವಿರುದ್ಧದ ಮತ್ತೊಂದು ತೀಕ್ಷ್ಣವಾದ ಹೇಳಿಕೆ ನೀಡಿರುವ ಲಾರಿಜಾನಿ ಟ್ರಂಪ್ ಪ್ರದೇಶವನ್ನು ಅವ್ಯವಸ್ಥೆಗೆ ತಳ್ಳಿದ್ದಕ್ಕಾಗಿ ಟೀಕಾ ಪ್ರಹಾರ ನಡೆಸಿದ್ದಾರೆ ಮತ್ತು ಅಮೆರಿಕನ್ ಸೈನಿಕರ ಸಂಖ್ಯೆಯಲ್ಲಿ ಹೆಚ್ಚಳದ ಬಗ್ಗೆ ಸುಳಿವು ನೀಡಿದರು. 'ಇಸ್ರೇಲ್-ಮೊದಲು' ಕಾರ್ಯಸೂಚಿಯನ್ನು ಮುಂದಿಟ್ಟಿದ್ದಕ್ಕಾಗಿ ಅಮೆರಿಕದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು ಮತ್ತು ಇರಾನ್ ಆಕ್ರಮಣವನ್ನು ಪ್ರಾರಂಭಿಸಲಿಲ್ಲ ಎಂದು ಒತ್ತಿಹೇಳಿದ್ದಾರೆ.
"ತನ್ನ ಭ್ರಮೆಯ ಕ್ರಿಯೆಗಳಿಂದ, ಆತ ತನ್ನ ಸ್ವಯಂ ನಿರ್ಮಿತ "ಅಮೇರಿಕಾ ಮೊದಲು" ಎಂಬ ಘೋಷಣೆಯನ್ನು "ಇಸ್ರೇಲ್ ಮೊದಲು" ಎಂಬುದಾಗಿ ಪರಿವರ್ತಿಸಿದ್ದಾರೆ ಮತ್ತು ಇಸ್ರೇಲ್‌ನ ಅಧಿಕಾರದ ಹಸಿವಿನ ಮಹತ್ವಾಕಾಂಕ್ಷೆಗಳಿಗಾಗಿ ಅಮೇರಿಕನ್ ಸೈನಿಕರನ್ನು ಬಲಿ ಕೊಟ್ಟಿದ್ದಾರೆ. ಹೊಸ ಕಟ್ಟುಕಥೆಗಳೊಂದಿಗೆ, ತನ್ನದೇ ಆದ ವ್ಯಕ್ತಿತ್ವವನ್ನು ಹತ್ಯೆ ಮಾಡುವ ವೆಚ್ಚವನ್ನು ಅಮೇರಿಕನ್ ಸೈನಿಕರು ಮತ್ತು ಕುಟುಂಬಗಳ ಮೇಲೆ ಹೇರುತ್ತಿದೆ. ಇಂದು, ಇರಾನ್ ರಾಷ್ಟ್ರ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದೆ. ಇರಾನ್‌ನ ಸಶಸ್ತ್ರ ಪಡೆಗಳು ಮೊದಲು ಆಕ್ರಮಣವನ್ನು ಪ್ರಾರಂಭಿಸಲಿಲ್ಲ ಎಂದು ಲಾರಿಜಾನಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



