ಕೊನೆಗೂ 131 ದಿನಗಳ ನಂತರ ಇರಾನ್ ಸರ್ವೋಚ್ಛ ನಾಯಕ ಖಮೇನಿ ಅಂತ್ಯಕ್ರಿಯೆಗೆ ದಿನಾಂಕ ನಿಗದಿ; ಇಲ್ಲಿದೆ ಮಾಹಿತಿ..
ಇಸ್ರೇಲ್ ವಾಯುದಾಳಿ ನಡೆಸಬಹುದು ಎಂಬ ಆತಂಕದಲ್ಲಿ ಇರಾನ್ ಅಂತ್ಯಕ್ರಿಯೆಯನ್ನು ಮುಂದೂಡುತ್ತಾ ಬಂದಿತ್ತು. ಇದೀಗ ಶಾಂತಿ ಒಪ್ಪಂದ ಮಾತುಕತೆಗಳು ನಡೆಯುತ್ತಿರುವುದರಿಂದ ಜೂನ್ 9ಕ್ಕೆ ಅಂತ್ಯಕ್ರಿಯೆಗೆ ದಿನಾಂಕ ಘೋಷಿಸಿದೆ.

ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇಸ್ರೇಲ್ ಜೊತೆ ನಡೆಯುತ್ತಿರುವ ಸಂಘರ್ಷ ಮತ್ತು ಉದ್ವಿಗ್ನತೆಯ ಮಧ್ಯೆ, ಇರಾನ್ ತನ್ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಸರ್ಕಾರಿ ಅಂತ್ಯಕ್ರಿಯೆಯ ಪೂರ್ಣ ವೇಳಾಪಟ್ಟಿಯನ್ನು ಅಧಿಕೃತವಾಗಿ ಘೋಷಿಸಿದೆ. ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಅಂತ್ಯಕ್ರಿಯೆ ಪ್ರಕ್ರಿಯೆಯು ಮುಂದಿನ ತಿಂಗಳು, ಜುಲೈ 4, 2026 ರಂದು ಪ್ರಾರಂಭವಾಗಲಿದ್ದು, ಅವರ ದೇಹವನ್ನು ಈಶಾನ್ಯ ಇರಾನಿನ ನಗರವಾದ ಮಶಾದ್‌ನಲ್ಲಿರುವ ರೆಜಾ ಇಮಾಮ್ ಮಸೀದಿಯಲ್ಲಿ ಜುಲೈ 9, 2026 ರಂದು ಸಮಾಧಿ ಮಾಡುವುದಾಗಿ ಘೋಷಿಸಿದೆ.
ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ 2026ರ ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲಿ ಜಂಟಿ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದು ನಾಲ್ಕು ತಿಂಗಳು ಕಳೆದರೂ ಇನ್ನು ಅಂತ್ಯಕ್ರಿಯೆ ನಡೆಸಿಲ್ಲ. ಇದಕ್ಕೆ ಕಾರಣ ಇಸ್ರೇಲ್ ದಾಳಿಯ ಭೀತಿ. ಕಾರಣ ಸರ್ವೋಚ್ಛ ನಾಯಕನ ಅಂತ್ಯಕ್ರಿಯೆಯಲ್ಲಿ IRGC ಸೇರಿದಂತೆ ದೇಶದ ಉನ್ನತ ಸ್ಥಾನದಲ್ಲಿರುವ ನಾಯಕರು ಭಾಗಿಯಾಗುತ್ತಾರೆ. ಅಂದು ಇಸ್ರೇಲ್ ವಾಯುದಾಳಿ ನಡೆಸಬಹುದು ಎಂಬ ಆತಂಕದಲ್ಲಿ ಇರಾನ್ ಅಂತ್ಯಕ್ರಿಯೆಯನ್ನು ಮುಂದೂಡುತ್ತಾ ಬಂದಿತ್ತು. ಇದೀಗ ಶಾಂತಿ ಒಪ್ಪಂದ ಮಾತುಕತೆಗಳು ನಡೆಯುತ್ತಿರುವುದರಿಂದ ಜೂನ್ 9ಕ್ಕೆ ಅಂತ್ಯಕ್ರಿಯೆಗೆ ದಿನಾಂಕ ಘೋಷಿಸಿದೆ.
ಸಮಿತಿ ಬಿಡುಗಡೆ ಮಾಡಿದ ವೇಳಾಪಟ್ಟಿಯ ಪ್ರಕಾರ, ಜುಲೈ 4 ಮತ್ತು 5, 2026 ರಂದು ಟೆಹ್ರಾನ್‌ನ ಖಮೇನಿ ಮೊಸಲ್ಲಾದಲ್ಲಿ ವಿದಾಯ ಸಮಾರಂಭಗಳು ನಡೆಯಲಿವೆ. ಇದರ ನಂತರ ಜುಲೈ 6 ರಂದು ಟೆಹ್ರಾನ್‌ನಲ್ಲಿ ಅಂತ್ಯಕ್ರಿಯೆ ಮೆರವಣಿಗೆ ನಡೆಯಲಿದೆ. ನಂತರ ಜುಲೈ 7, 2026 ರಂದು ಪವಿತ್ರ ನಗರವಾದ ಕೋಮ್‌ನಲ್ಲಿ ಅಂತ್ಯಕ್ರಿಯೆ ಮೆರವಣಿಗೆ ನಡೆಯಲಿದೆ. ಅಂತಿಮವಾಗಿ, ಜುಲೈ 9, 2026 ರಂದು ಮಶ್ಹದ್‌ನಲ್ಲಿ ಅಂತ್ಯಕ್ರಿಯೆ ಮೆರವಣಿಗೆ ನಡೆಯಲಿದೆ ಮತ್ತು ಶವವನ್ನು ರೆಜಾ ಇಮಾಮ್ ಮಸೀದಿಯಲ್ಲಿ ಸಮಾಧಿ ಮಾಡಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



