ವಿದೇಶ

'ನೀವು ಇಂಡಿಯಾದವರಾ?': ಭಾರತೀಯ ಪತ್ರಕರ್ತನಿಗೆ ಟ್ರಂಪ್ ಪ್ರಶ್ನೆ; ಭಾರೀ ವಿವಾದ

ಬಹಳ ವರ್ಷಗಳ ಕಾಲ ಭಾರತ ಅಮೆರಿಕಾದ ಮೇಲೆ ಹೆಚ್ಚಿನ ಸುಂಕ ವಿಧಿಸಿ ಲಾಭ ಪಡೆದುಕೊಂಡಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಭಾರತ ಜೊತೆಗಿನ ವ್ಯಾಪಾರದಿಂದ ಅಮೆರಿಕಾ ಸಾಕಷ್ಟು ಲಾಭ ಪಡೆಯುತ್ತಿದೆ.

'ನೀವು ಇಂಡಿಯಾದವರಾ?': ಭಾರತೀಯ ಪತ್ರಕರ್ತನಿಗೆ ಟ್ರಂಪ್ ಪ್ರಶ್ನೆ; ಭಾರೀ ವಿವಾದ
ಡೊನಾಲ್ಡ್ ಟ್ರಂಪ್
Published On :

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಅವರು ಮತ್ತೊಮ್ಮೆ ತಮ್ಮ ಹೇಳಿಕೆಯಿಂದ ವಿವಾದಕ್ಕೆ ಗುರಿಯಾಗಿದ್ದಾರೆ.

ಶ್ವೇತಭವನದಲ್ಲಿ ನಡೆದ ಮಾಧ್ಯಮ ಸಂವಾದದ ವೇಳೆ ಭಾರತೀಯ ಮೂಲದ ಪತ್ರಕರ್ತನಿಗೆ “ನೀವು ಇಂಡಿಯಾದವರಾ?” ಎಂದು ಟ್ರಂಪ್ ಪ್ರಶ್ನಿಸಿದ್ದು, ಟ್ರಂಪ್ ಅವರ ವರ್ತನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ.

ಶುಕ್ರವಾರ ನಡೆದ ಮಾಧ್ಯಮ ಸಂವಾದದಲ್ಲಿ ಪತ್ರಕರ್ತನು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಇರುವ ಸಂಬಂಧದ ಬಗ್ಗೆ ಪ್ರಶ್ನೆ ಕೇಳಲು ಶುರು ಮಾಡುತ್ತಿದ್ದಂತೆ ಟ್ರಂಪ್ ಅವರು ಅಚಾನಕ್‌ ಆಗಿ, “ನೀವು ಇಂಡಿಯಾದವರಾ? ಹೌದಾ? ನಾನು ನೀವು ಜರ್ಮನಿಯಿಂದ ಬಂದಿರಬಹುದು ಎಂದುಕೊಂಡೆ ಎಂದು ಹೇಳಿದರು.

ಪತ್ರಕರ್ತನು ತಾನು ಭಾರತೀಯನೆಂದು ಸ್ಪಷ್ಟಪಡಿಸಿದ ಬಳಿಕ ಟ್ರಂಪ್, ನಾನು ತಮಾಷೆ ಮಾಡುತ್ತಿದ್ದೆ. ನೀವು ನೋಡಲು ಸಿನಿಮಾ ನಟರ ಆಯ್ಕೆ ಮಾಡಿದವರಂತೆ ಕಾಣುತ್ತೀರಿ ಎಂದು ಹೇಳಿದರು.

ಬಳಿಕ ಪ್ರಧಾನಿ ಮೋದಿಯವರ ಕುರಿತು ಮಾತನಾಡಿದ ಟ್ರಂಪ್, ಪ್ರಧಾನಿ ಮೋದಿ ತಮ್ಮ “ಉತ್ತಮ ಸ್ನೇಹಿತ”, ನಮ್ಮಿಬ್ಬರ ನಡುವೆ ಉತ್ತಮ ಸಂಬಂಧ ಇದೆ ಎಂದು ಹೇಳಿದರು.

ಭಾರತ-ಅಮೆರಿಕಾ ವ್ಯಾಪಾರ ಒಪ್ಪಂದದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಟ್ರಂಪ್, ಬಹಳ ವರ್ಷಗಳ ಕಾಲ ಭಾರತ ಅಮೆರಿಕಾದ ಮೇಲೆ ಹೆಚ್ಚಿನ ಸುಂಕ ವಿಧಿಸಿ ಲಾಭ ಪಡೆದುಕೊಂಡಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಭಾರತ ಜೊತೆಗಿನ ವ್ಯಾಪಾರದಿಂದ ಅಮೆರಿಕಾ ಸಾಕಷ್ಟು ಲಾಭ ಪಡೆಯುತ್ತಿದೆ. ಆದರೂ ನಾವು ಒಪ್ಪಂದಕ್ಕೆ ಬರುತ್ತೇವೆ ಎಂದು ಹೇಳಿದರು.

ಟ್ರಂಪ್ ಆಡಳಿತವು ಇತ್ತೀಚೆಗೆ ಭಾರತ ಸೇರಿ 60 ದೇಶಗಳಿಂದ ಆಗಮಿಸುವ ವಸ್ತುಗಳ ಮೇಲೆ ಹೆಚ್ಚುವರಿ 12.5 ಶೇಕಡಾ ಸುಂಕ ವಿಧಿಸುವ ಪ್ರಸ್ತಾಪ ಮಾಡಿತ್ತು. ಇದರ ನಡುವೆಯೇ ಭಾರತ ಮತ್ತು ಅಮೆರಿಕಾ ನಡುವಿನ ವ್ಯಾಪಾರ ಮಾತುಕತೆಗಳು ವೇಗ ಪಡೆದುಕೊಂಡಿವೆ.

ಭಾರತದಲ್ಲಿನ ಅಮೆರಿಕಾ ರಾಯಭಾರಿ ಸರ್ಜಿಯೋ ಗಾರ್ ಮಾತುಕತೆಗಳು ಅಂತಿಮ ಹಂತದಲ್ಲಿವೆ ಎಂದು ಹೇಳಿದ್ದಾರೆ.

ಇದೇ ವೇಳೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಕೂಡ ಬಹುತೇಕ ವಿಷಯಗಳಲ್ಲಿ ಒಪ್ಪಂದವಾಗಿದ್ದು, ಕೆಲವೊಂದು ಅಂಶಗಳ ಬಗ್ಗೆ ಮಾತ್ರ ಚರ್ಚೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ಈ ನಡುವೆ ಟ್ರಂಪ್ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದನ್ನು ಹಾಸ್ಯವಾಗಿ ತೆಗೆದುಕೊಂಡರೆ, ಇನ್ನೂ ಕೆಲವರು “ಅತ್ಯುನ್ನತ ಮಟ್ಟದ ಜಾತೀಯತೆ” ಎಂದು ಟೀಕಿಸಿದ್ದಾರೆ.

ಅಮೆರಿಕ ಜನರು ಜೋಕರ್‌ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಇಂತಹ ಹೇಳಿಕೆಗಳು ಆಶ್ಚರ್ಯಕರವಲ್ಲ,” ಎಂದು ಪ್ರತಿಕ್ರಿಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.