ಆರ್ಥಿಕ ಬಿಕ್ಕಟ್ಟಿನಿಂದ ಪಾಕ್ ತತ್ತರ; ಮತ್ತೆ ಅಮೆರಿಕದ ಮುಂದೆ ಸಾಲಕ್ಕಾಗಿ ಕೈಚಾಚಿದ ಪಾಕಿಸ್ತಾನ!
ಅಂತರರಾಷ್ಟ್ರೀಯ ಹಣಕಾಸು ನಿಧಿ (IMF)ಯ ಬೇಲ್ಔಟ್ ಕಾರ್ಯಕ್ರಮದ ಹೊರತಾಗಿಯೂ, ಪಾಕಿಸ್ತಾನವು ದಶಕಗಳಲ್ಲೇ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿಗೆ ತುತ್ತಾಗಿದೆ.

ವಾಷಿಂಗ್ಟನ್: ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಪಾಕಿಸ್ತಾನವು ತನ್ನ ದುರ್ಬಲ ಆರ್ಥಿಕತೆಯನ್ನು ಬಲಪಡಿಸಲು 10 ಶತಕೋಟಿ ಡಾಲರ್ ಸಾಲ ನೀಡುವಂತೆ ಮತ್ತೆ ವಿಶ್ವದ ದೊಡ್ಡಣ ಅಮೆರಿಕದ ಮುಂದೈ ಕೈಚಾಚಿದೆ ಎಂದು ವರದಿಯಾಗಿದೆ.
ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ಗೆ ಪಾಕಿಸ್ತಾನ ಸಲ್ಲಿಸಿದ ಮನವಿಯಲ್ಲಿ, ಇಸ್ಲಾಮಾಬಾದ್, ವಾಷಿಂಗ್ಟನ್ನೊಂದಿಗೆ ಐದು ವರ್ಷಗಳ ಅವಧಿಗೆ 10 ಶತಕೋಟಿ ಡಾಲರ್ಗಳ 'ದ್ವಿಪಕ್ಷೀಯ ವಿನಿಮಯ ಸ್ಥಿರೀಕರಣ ಬೆಂಬಲ ಸೌಲಭ್ಯ' ಒದಗಿಸುವಂತೆ ಕೇಳಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಅಂತರರಾಷ್ಟ್ರೀಯ ಹಣಕಾಸು ನಿಧಿ (IMF)ಯ ಬೇಲ್ಔಟ್ ಕಾರ್ಯಕ್ರಮದ ಹೊರತಾಗಿಯೂ, ಪಾಕಿಸ್ತಾನವು ದಶಕಗಳಲ್ಲೇ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿಗೆ ತುತ್ತಾಗಿದೆ. ಹೀಗಾಗಿ, ಸಾಲಕ್ಕಾಗಿ ಅಮೆರಿಕ ಬಳಿ ಕೈಚಾಚಿದೆ.
ಅಮೆರಿಕ-ಇರಾನ್ ಯುದ್ಧ ನಿಲ್ಲಿಸಲು ಆರಂಭವಾದ ಶಾಂತಿ ಒಪ್ಪಂದ ಮಾತುಕತೆ ವೇಳೆ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿತ್ತು. ಇದು ತನ್ನ ರಾಜತಾಂತ್ರಿಕ ಪ್ರೊಫೈಲ್ ಅನ್ನು ಹೆಚ್ಚಿಸಿದೆ. ಹೀಗಾಗಿ ಪಾಕಿಸ್ತಾನ ಈಗ ವಾಷಿಂಗ್ಟನ್ ಮತ್ತು ಇತರ ಪಾಲುದಾರರಿಂದ ಆರ್ಥಿಕ ಲಾಭಗಳನ್ನು ಪಡೆಯಬಹುದು ಎಂಬ ನಿರೀಕ್ಷೆಯಲ್ಲಿದೆ.
ಒಂದು ಅಮೆರಿಕ ಪಾಕಿಸ್ತಾನ ಕೋರಿರುವ ಸಾಲಕ್ಕೆ ಅನುಮೋದನೆ ನೀಡಿದರೆ, ಈ ಸೌಲಭ್ಯವು ನಗದು ಕೊರತೆಯಿಂದ ಬಳಲುತ್ತಿರುವ ದಕ್ಷಿಣ ಏಷ್ಯಾದ ಆರ್ಥಿಕತೆಗೆ ಜೀವಸೆಲೆಯಾಗಬಹುದು. ಪಾಕಿಸ್ತಾನವು ತನ್ನ ಅಂತರರಾಷ್ಟ್ರೀಯ ಹಣಕಾಸು ನಿಧಿ ಕಾರ್ಯಕ್ರಮಕ್ಕೆ ಅನುಗುಣವಾಗಿ ಬಿಗಿಯಾದ ಹಣಕಾಸು ಮತ್ತು ವಿತ್ತೀಯ ನೀತಿಗಳನ್ನು ಕೈಗೊಂಡರೂ, ಇದು ಪಾಕಿಸ್ತಾನದ ಮೀಸಲನ್ನು ಬಲಪಡಿಸುತ್ತದೆ. ರೂಪಾಯಿ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಬಹುಪಕ್ಷೀಯ ಹಣಕಾಸಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



