ವಿದೇಶ

ಅಲಿ ಖಮೇನಿ ಅಂತ್ಯಕ್ರಿಯೆಯಲ್ಲಿ ನಿಗೂಢ ಮಾಸ್ಕ್ ಮ್ಯಾನ್! ಕೊನೆಗೂ ಗುರುತು ಬಹಿರಂಗ

ಈ ವರ್ಷದ ಆರಂಭದಲ್ಲಿ ಅಮೆರಿಕ ಮತ್ತು ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಖಮೇನಿ ಸಾವನ್ನಪ್ಪಿದ್ದರು. ಅವರ ಅಂತ್ಯಕ್ರಿಯೆ ವೇಳೆಯಲ್ಲಿ ಕಪ್ಪು ಮುಖವಾಡ ಮತ್ತು ಕಪ್ಪು ಬೇಸ್‌ಬಾಲ್ ಕ್ಯಾಪ್ ಧರಿಸಿದ ವ್ಯಕ್ತಿಯೊಬ್ಬರು ಮುಂದಿನ ಸಾಲಿನಲ್ಲಿ ಕುಳಿತಿರುವುದು ಕಂಡುಬಂದಿದೆ.

ಅಲಿ ಖಮೇನಿ ಅಂತ್ಯಕ್ರಿಯೆಯಲ್ಲಿ ನಿಗೂಢ ಮಾಸ್ಕ್ ಮ್ಯಾನ್! ಕೊನೆಗೂ ಗುರುತು ಬಹಿರಂಗ
ನಿಗೂಢ ಮಾಸ್ಕ್ ಮ್ಯಾನ್
Published On :

ಟೆಹ್ರಾನ್: ಇರಾನ್‌ನ ದಿವಂಗತ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ನಿಗೂಢ ಮಾಸ್ಕ್ ಮ್ಯಾನ್ ಒಬ್ಬರು ಕಂಡುಬಂದಿದ್ದರು. ಯಾರಿದು ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇರಾನಿನ ಮಾಧ್ಯಮವೊಂದು ಕಡೆಗೂ ಇವರನ್ನು ಗುರುತಿಸಿದ್ದು, ದಿವಂಗತ ನಾಯಕನ ಹಿರಿಯ ಮೊಮ್ಮಗ ಎಂದು ಹೇಳಿದೆ.

ಈ ವರ್ಷದ ಆರಂಭದಲ್ಲಿ ಅಮೆರಿಕ ಮತ್ತು ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಖಮೇನಿ ಸಾವನ್ನಪ್ಪಿದ್ದರು. ಅವರ ಅಂತ್ಯಕ್ರಿಯೆ ವೇಳೆಯಲ್ಲಿ ಕಪ್ಪು ಮುಖವಾಡ ಮತ್ತು ಕಪ್ಪು ಬೇಸ್‌ಬಾಲ್ ಕ್ಯಾಪ್ ಧರಿಸಿದ ವ್ಯಕ್ತಿಯೊಬ್ಬರು ಮುಂದಿನ ಸಾಲಿನಲ್ಲಿ ಕುಳಿತಿರುವುದು ಕಂಡುಬಂದಿದೆ.

ಇವರು ಖಮೇನಿ ಅವರ ಮಗ ಮೊಜ್ತಬಾ ಖಮೇನಿ ಇರಬಹುದು ಎಂಬ ಊಹಾಪೋಹ ಸಾಕಷ್ಟು ಹಬ್ಬಿತ್ತು. ಆದಾಗ್ಯೂ, ನಿಜವಾಗಿಯೂ ಅವರು ಮೊಜ್ತಬಾ ಖಮೇನಿ ಅಲ್ಲ, ಅಲಿ ಖಮೇನಿ ಅವರ ಮೊಮ್ಮಗ ಮೊಹಮ್ಮದ್ ಜಾವದ್ ಎಂದು ಇರಾನಿನ ಸುದ್ದಿ ಸಂಸ್ಥೆ ಇರಾನ್ ಇಂಟರ್ ನ್ಯಾಷನಲ್ ವರದಿ ಮಾಡಿದೆ.

ಮೊಹಮ್ಮದ್ ಜಾವದ್, ಅಲಿ ಖಮೇನಿ ಅವರ ಹಿರಿಯ ಮಗ ಮೊಸ್ತಫಾ ಖಮೇನಿ ಅವರ ಪುತ್ರರಾಗಿದ್ದಾರೆ. ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲಿ ದಾಳಿಯಲ್ಲಿ ಇರಾನಿನ ನಾಯಕ ಸಾವನ್ನಪ್ಪಿದಾಗ ಮೊಹಮ್ಮದ್ ಜಾವದ್ ಮುಖಕ್ಕೆ ತೀವ್ರ ಸುಟ್ಟ ಗಾಯಗಳು ಮತ್ತು ಇತರ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.

ಗಾಯದಿಂದ ಮರೆಮಾಚಲು ಅಂತ್ಯಕ್ರಿಯೆಯಲ್ಲಿ ಅವರು ಭಾಗವಹಿಸಿದಾಗ ಕಪ್ಪು ಮುಖವಾಡ ಧರಿಸಿದ್ದರು ಎಂದು ವರದಿಯಾಗಿದೆ. ದಾಳಿ ನಂತರವೂ ಮೊಜ್ತಬಾ ಖಮೇನಿ ಜೀವಂತವಾಗಿ ಇದ್ದಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಅನುಮಾನಗಳು ಕೇಳಿಬರುತ್ತಿವೆ. ಮೊಜ್ತಬಾ ಗಂಭೀರವಾಗಿ ಗಾಯಗೊಂಡು, ದಾಳಿಯಲ್ಲಿ ತೀವ್ರವಾಗಿ ವಿರೂಪಗೊಂಡಿದ್ದರು ಎಂದು ಅಮೆರಿಕದ ಗುಪ್ತಚರ ವರದಿಗಳನ್ನು ಉಲ್ಲೇಖಿಸಿ, ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಅಮೆರಿಕ ಮತ್ತು ಇಸ್ರೇಲಿ ವೈಮಾನಿಕ ದಾಳಿಗಳು ನಡೆದಾಗ ಮೊಜ್ತಬಾ ಅವರು ತಂದೆಯ ಮನೆಯಲ್ಲೇ ಇದ್ದರು ಎಂದು ವರದಿಯಾಗಿದೆ ಆದರೆ ಅವರು ಬೇರೆ ಕೊಠಡಿಯಲ್ಲಿದ್ದ ಕಾರಣ ಬದುಕುಳಿದಿದ್ದಾರೆ. ಆ ಸಮಯದಲ್ಲಿ,ಮೊಜ್ತಬಾ ಅವರ ಕಾಲುಗಳು, ಕೈ ಮತ್ತು ತೋಳಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಸೈಪ್ರಸ್‌ನಲ್ಲಿರುವ ಇರಾನ್ ರಾಯಭಾರಿ ಅಲಿರೆಜಾ ಸಲಾರಿಯನ್ ಹೇಳಿದ್ದರು.

ದಾಳಿಯ ನಂತರ ಮೊಜ್ತಬಾ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಅಥವಾ ಯಾವುದೇ ಭಾಷಣಗಳನ್ನು ಮಾಡಿಲ್ಲ. ಆಸ್ಟ್ರೇಲಿಯಾದ ಮಾಧ್ಯಮ ವರದಿಗಳ ಪ್ರಕಾರ, ಅವರು ಕೈಬರಹದ ಸಂದೇಶಗಳ ಮೂಲಕ ಇರಾನ್‌ನ ಮಿಲಿಟರಿ ಕಮಾಂಡರ್‌ಗಳು ಮತ್ತು ಹಿರಿಯ ಧರ್ಮಗುರುಗಳೊಂದಿಗೆ ಸಂವಹನದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.