ನಿಮ್ಮ ಸಹಿಯನ್ನು ಗೌರವಿಸಿ: ಬೆದರಿಕೆ ಮುಂದುವರೆದರೆ ಮಾತುಕತೆ ಬಂದ್; US ಗೆ ಅರಘ್ಚಿ ಎಚ್ಚರಿಕೆ
ಟೆಹ್ರಾನ್ ಜೊತೆ ಒಪ್ಪಂದ ಮಾಡಿಕೊಳ್ಳದಿದ್ದರೆ "ಕೆಲಸ ಮುಗಿಸುತ್ತೇನೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ ನಂತರ ಈ ಹೇಳಿಕೆಗಳು ಬಂದಿದೆ.

ಇರಾನ್: "ಬೆದರಿಕೆಗಳು ಮುಂದುವರಿದರೆ" ವಾಷಿಂಗ್ಟನ್ ಜೊತೆ ಅಂತಿಮ ಒಪ್ಪಂದದ ಮಾತುಕತೆ ನಡೆಸಲು ಇರಾನ್ ದೃಢವಾಗಿ ನಿರಾಕರಿಸುತ್ತದೆ ಎಂದು ಅಲ್ಲಿನ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಮಂಗಳವಾರ ಅಮೆರಿಕಾಗೆ ಎಚ್ಚರಿಕೆ ನೀಡಿದ್ದಾರೆ.
ಟೆಹ್ರಾನ್ ಜೊತೆ ಒಪ್ಪಂದ ಮಾಡಿಕೊಳ್ಳದಿದ್ದರೆ "ಕೆಲಸ ಮುಗಿಸುತ್ತೇನೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ ನಂತರ ಈ ಹೇಳಿಕೆಗಳು ಬಂದಿದೆ.
X ನಲ್ಲಿನ ಪೋಸ್ಟ್‌ನಲ್ಲಿ ಅರಘ್ಚಿ, ಹತ್ಯೆಗೀಡಾದ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯವರ ಭವ್ಯ ಅಂತ್ಯಕ್ರಿಯೆಯ ಮೆರವಣಿಗೆಯ ದೃಶ್ಯಗಳನ್ನು ಹಂಚಿಕೊಂಡಿದ್ದು ಇರಾನಿನ ಪಡೆಗಳು ಮತ್ತು ಸಾರ್ವಜನಿಕರು ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಹೇಳಿದ್ದಾರೆ.
"ಗ್ರ್ಯಾಂಡ್ ಅಯತೊಲ್ಲಾ ಖಮೇನಿ ಮತ್ತು ಅವರ ಪರಂಪರೆಯನ್ನು ಗೌರವಿಸಲು ಲಕ್ಷಾಂತರ ಹೆಮ್ಮೆಯ ಇರಾನಿಯನ್ನರು ಒಗ್ಗಟ್ಟಿನಿಂದ ಒಟ್ಟುಗೂಡಿದರು. ಅವರಾಗಲಿ ಅಥವಾ ನಮ್ಮ ಧೈರ್ಯಶಾಲಿ ಸಶಸ್ತ್ರ ಪಡೆಗಳಾಗಲಿ ಯಾವುದೇ ಬೆದರಿಕೆಗಳಿಂದ ವಿಚಲಿತರಾಗುವುದಿಲ್ಲ" ಎಂದು ಅವರು ಬರೆದಿದ್ದಾರೆ.

'ಒಪ್ಪಂದ ಮಾಡಿಕೊಳ್ಳಿ, ಇಲ್ಲವೇ ಕೆಲಸ ಮುಗಿಸುತ್ತೇವೆ'; ಖಮೇನಿ ಅಂತ್ಯಕ್ರಿಯೆ ನಡುವೆಯೇ ಇರಾನ್ಗೆ ಟ್ರಂಪ್ ಎಚ್ಚರಿಕೆ
ಇರಾನ್ ಮತ್ತು ಯುಎಸ್ ನಡುವೆ ಸಹಿ ಹಾಕಲಾದ 14 ಅಂಶಗಳ ತಿಳುವಳಿಕೆ ಪತ್ರದ ಪ್ಯಾರಾಗ್ರಾಫ್ 13 ಅನ್ನು ಉಲ್ಲೇಖಿಸಿ, ಬೆದರಿಕೆಗಳು ಮುಂದುವರೆದರೆ ಅಂತಿಮ ಒಪ್ಪಂದದ ಕುರಿತು ಮಾತುಕತೆಗಳನ್ನು ಪ್ರಾರಂಭಿಸಲು ಸಾಧ್ಯವಿಲ್ಲ ಮತ್ತು ಅಮೆರಿಕ ತಾನೇ ಹಾಕಿರುವ ಸಹಿಯನ್ನು ಗೌರವಿಸಬೇಕು" ಎಂದು ಅರಘ್ಚಿ ಕರೆ ನೀಡಿದ್ದಾರೆ.
"ಎಂಒಯುನ ಪ್ಯಾರಾ 13 ಸ್ಪಷ್ಟವಾಗಿದೆ: ಬೆದರಿಕೆಗಳು ಮುಂದುವರಿದರೆ ಅಂತಿಮ ಒಪ್ಪಂದದ ಕುರಿತು ಮಾತುಕತೆಗಳು ಪ್ರಾರಂಭವಾಗುವುದಿಲ್ಲ ನಿಮ್ಮ ಸಹಿಯನ್ನು ಗೌರವಿಸಿ" ಎಂದು ಅರಘ್ಚಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


