ವಿದೇಶ

ಮೆಕ್ಸಿಕೋ ಡ್ರಗ್ ಕಾರ್ಟೆಲ್ ಕಿಂಗ್‌ಪಿನ್ 'ಎಲ್ ಮೆಂಚೊ' ಹತ್ಯೆ: ಹಲವು ರಾಜ್ಯಗಳಲ್ಲಿ ಭುಗಿಲೆದ್ದ ಹಿಂಸಾಚಾರ

ಮಾದಕವಸ್ತು ದೊರೆ ನೆಮೆಸಿಯೊ "ಎಲ್ ಮೆಂಚೊ" ಒಸೆಗುರಾನನ್ನು ಕೊಂದಿರುವುದಾಗಿ ಮೆಕ್ಸಿಕನ್ ಸೇನೆ ಭಾನುವಾರ ಘೋಷಿಸಿದೆ.

ಮೆಕ್ಸಿಕೋ ಡ್ರಗ್ ಕಾರ್ಟೆಲ್ ಕಿಂಗ್‌ಪಿನ್ 'ಎಲ್ ಮೆಂಚೊ' ಹತ್ಯೆ: ಹಲವು ರಾಜ್ಯಗಳಲ್ಲಿ ಭುಗಿಲೆದ್ದ ಹಿಂಸಾಚಾರ
ಎಲ್ ಮಂಚೋ
Published On :

ಗ್ವಾಡಲಜರ: ಕುಖ್ಯಾತ ಮಾದಕವಸ್ತು ದೊರೆ ಎಲ್ ಮೆಂಚೊ ನನ್ನು ಮೆಕ್ಸಿಕೋ ಭದ್ರತಾ ಪಡೆಗಳು ಹತ್ಯೆ ಮಾಡಿವೆ ಎಂದು ದೇಶದ ರಾಷ್ಟ್ರೀಯ ರಕ್ಷಣಾ ಸಚಿವಾಲಯ ದೃಢಪಡಿಸಿದೆ.

ಮಾದಕವಸ್ತು ದೊರೆ ನೆಮೆಸಿಯೊ "ಎಲ್ ಮೆಂಚೊ" ಒಸೆಗುರಾನನ್ನು ಕೊಂದಿರುವುದಾಗಿ ಮೆಕ್ಸಿಕನ್ ಸೇನೆ ಭಾನುವಾರ ಘೋಷಿಸಿದೆ.

ಜಲಿಸ್ಕೊ ​​ನ್ಯೂ ಜನರೇಷನ್ ಕಾರ್ಟೆಲ್‌ನ 59 ವರ್ಷದ ಎಲ್ ಮಂಚೋ ಒಸೆಗುರಾ, ಜಲಿಸ್ಕೊ ​​ರಾಜ್ಯದ ಟಪಲ್ಪಾ ಪಟ್ಟಣದಲ್ಲಿ ಸೈನಿಕರೊಂದಿಗಿನ ಘರ್ಷಣೆಯಲ್ಲಿ ಗಾಯಗೊಂಡು ಮೆಕ್ಸಿಕೊ ನಗರಕ್ಕೆ ಕರೆದೊಯ್ಯುವಾಗ ಸಾವನ್ನಪ್ಪಿದರು ಎಂದು ಸೇನೆ ಹೇಳಿಕೆಯಲ್ಲಿ ತಿಳಿಸಿದೆ.

ಅತನಿಗೆ 15 ಮಿಲಿಯನ್ ಯುಎಸ್ ಡಾಲರ್ ಬಹುಮಾನ ಘೋಷಿಸಲಾಗಿತ್ತು. ಕಾರ್ಯಾಚರಣೆಯ ಸುದ್ದಿ ಬಹಿರಂಗವಾದ ನಂತರ ಜಲಿಸ್ಕೊ ​​ಮತ್ತು ಇತರ ರಾಜ್ಯಗಳಲ್ಲಿ ಡ್ರಗ್ ಕಾರ್ಟೆಲ್‌ಗಳಿಂದ ರಸ್ತೆ ತಡೆ ಮತ್ತು ಹಿಂಸಾಚಾರ ಭುಗಿಲೆದ್ದಿದೆ.

ದಾಳಿಗೆ ಪ್ರತೀಕಾರವಾಗಿ ಬಂದೂಕುಧಾರಿಗಳು ಟಪಲ್ಪಾ ಸೇರಿದಂತೆ ಪಶ್ಚಿಮ ಜಲಿಸ್ಕೊ ​​ರಾಜ್ಯದಲ್ಲಿ 20 ಕ್ಕೂ ಹೆಚ್ಚು ರಸ್ತೆಗಳನ್ನು ನಿರ್ಬಂಧಿಸಿ, ಕಾರುಗಳು ಮತ್ತು ಟ್ರಕ್‌ಗಳನ್ನು ಸುಟ್ಟಿದ್ದು ಹಿಂಸಾಚಾರವು ಇತರ ರಾಜ್ಯಗಳಿಗೂ ಹರಡಿದೆ.

ಮೆಕ್ಸಿಕನ್ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ನಾಗರಿಕರನ್ನು ಶಾಂತವಾಗಿರಲು ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರವು ರಾಜ್ಯ ಅಧಿಕಾರಿಗಳೊಂದಿಗೆ ಸಮನ್ವಯದಲ್ಲಿದೆ ಎಂದು ಹೇಳಿದರು. ಮೆಕ್ಸಿಕೊದ ಮಿಲಿಟರಿ ಗುಪ್ತಚರ ಮಾಹಿತಿಯ ಜೊತೆಗೆ, ಯುಎಸ್ ಅಧಿಕಾರಿಗಳ "ಪೂರಕ ಮಾಹಿತಿ"ಯೊಂದಿಗೆ ದಾಳಿ ನಡೆಸಲಾಗಿದೆ ಎಂದು ಭಾನುವಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಒಸೆಗುರಾ ಜೊತೆಗೆ ಆರು ಶಂಕಿತ ಕಾರ್ಟೆಲ್ ಬಂದೂಕುಧಾರಿಗಳು ಸಾವನ್ನಪ್ಪಿದ್ದಾರೆ ಮತ್ತು ಮೂವರು ಸೈನಿಕರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.