ವಿದೇಶ

ಅಮೆರಿಕದಲ್ಲಿ ಹಿಂದೂಗಳೇ ಹೆಚ್ಚಿನ ಸುಶಿಕ್ಷಿತ ಸಮುದಾಯ! ಥಿಂಕ್ ಟ್ಯಾಂಕ್ Pew ಅಧ್ಯಯನ

ಅಮೆರಿಕದ ಪ್ರಮುಖ ಸಮುದಾಯಗಳ ಶೈಕ್ಷಣಿಕ ಸಾಧನೆಯನ್ನು ಪ್ಯೂ ರಿಸರ್ಚ್ ಸೆಂಟರ್‌ ಪರೀಕ್ಷಿಸಿದ್ದು, ಹಿಂದೂಗಳೇ ಹೆಚ್ಚಿನ ಸುಶಿಕ್ಷಿತ ಸಮುದಾಯವಾಗಿದೆ.

ಅಮೆರಿಕದಲ್ಲಿ ಹಿಂದೂಗಳೇ ಹೆಚ್ಚಿನ ಸುಶಿಕ್ಷಿತ ಸಮುದಾಯ! ಥಿಂಕ್ ಟ್ಯಾಂಕ್ Pew ಅಧ್ಯಯನ
ಡೊನಾಲ್ಡ್ ಟ್ರಂಪ್ ಸಾಂದರ್ಭಿಕ ಚಿತ್ರ
Published On :

ವಾಷಿಂಗ್ಟನ್: ಅಮೆರಿಕದಲ್ಲಿ ಹಿಂದೂಗಳೇ ಹೆಚ್ಚಿನ ಸುಶಿಕ್ಷಿತ ಸಮುದಾಯ (most highly educated religious) ಎಂದು ಅಮೆರಿಕ ಮೂಲದ ಥಿಂಕ್ ಟ್ಯಾಂಕ್ Pew ರಿಸರ್ಚ್ ಸೆಂಟರ್ ಹೇಳಿದೆ.

ಅಮೆರಿಕದ ಪ್ರಮುಖ ಸಮುದಾಯಗಳ ಶೈಕ್ಷಣಿಕ ಸಾಧನೆಯನ್ನು ಪ್ಯೂ ರಿಸರ್ಚ್ ಸೆಂಟರ್‌ ಪರೀಕ್ಷಿಸಿದ್ದು, ಹಿಂದೂಗಳೇ ಹೆಚ್ಚಿನ ಸುಶಿಕ್ಷಿತ ಸಮುದಾಯವಾಗಿದೆ. ತದನಂತರ ಯಹೂದಿಗಳಿದ್ದಾರೆ. 2023-24 ರ ಧರ್ಮಗಳ ಸ್ವರೂಪ ಅಧ್ಯಯನ (Religious Landscape Study) ಅಮೆರಿಕದಲ್ಲಿನ ಧರ್ಮಗಳು ಮತ್ತು ಸಾರ್ವಜನಿಕ ಜೀವನದ ಸಮಗ್ರ ಅಧ್ಯಯನಗಳಲ್ಲಿ ಒಂದಾಗಿದೆ.

ಅಮೆರಿಕದಲ್ಲಿನ ಒಟ್ಟು ಶೇ. 35 ರಷ್ಟು ಯುವಜನಾಂಗಕ್ಕೆ ಹೋಲಿಸಿದರೆ, 10 ಮಂದಿ ಹಿಂದೂಗಳಲ್ಲಿ ಏಳು ಮಂದಿ (ಶೇ.70) ಮತ್ತು ಶೇ. 65 ರಷ್ಟು ಮಂದಿ ಯಹೂದಿಗಳು ಸ್ನಾತಕೋತ್ತರ ಪದವಿ ಅಥವಾ ಅತ್ಯುನ್ನತ ಶಿಕ್ಷಣವನ್ನು ಹೊಂದಿದ್ದಾರೆ ಎಂದು ಫೆಬ್ರವರಿ 19 ರಂದು ಪ್ರಕಟವಾದ ಅಧ್ಯಯನದಲ್ಲಿ ಹೇಳಲಾಗಿದೆ.

ಉನ್ನತ ಶಿಕ್ಷಣದಲ್ಲಿ ಇತರ ಗುಂಪುಗಳಾದ ಮುಸ್ಲಿಮರು, ಬೌದ್ಧರು ಮತ್ತು ಆರ್ಥೊಡಾಕ್ಸ್ ಕ್ರಿಶ್ಚಿಯನ್ನರು ಸರಾಸರಿಗಿಂತ ಸ್ವಲ್ವ ಮೇಲಿದ್ದಾರೆ. ಬ್ಯಾಚುಲರ್ ಡಿಗ್ರಿ ಹೊಂದಿರುವ 10 ಮಂದಿ ಯುವಕರಲ್ಲಿ ತಲಾ ನಾಲ್ವರು ಈ ಸಮುದಾಯದವರು ಇದ್ದಾರೆ.

ಮೇನ್‌ಲೈನ್ ಪ್ರೊಟೆಸ್ಟಂಟ್ ಕ್ರಿಶ್ಚಿಯನ್ನರು ಕೂಡಾ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿರುವುದು ಕಂಡುಬಂದಿದೆ. ಇದಕ್ಕೆ ವ್ಯತಿರಿಕ್ತವಾಗಿ ಇವಾಂಜೆಲಿಕಲ್ ಪ್ರೊಟೆಸ್ಟೆಂಟ್‌ಗಳು, ಕ್ಯಾಥೊಲಿಕ್‌ಗಳು ಮತ್ತು ಬ್ಲಾಕ್ ಪ್ರೊಟೆಸ್ಟಂಟ್ ಚರ್ಚ್‌ಗಳ ಸದಸ್ಯರಲ್ಲಿ ಕಾಲೇಜು ಪದವೀಧರರ ಪಾಲು ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಾಗಿದೆ ಎಂದು ಅಧ್ಯಯನವು ಹೇಳಿದೆ.

ಪ್ಯೂ ಪ್ರಕಾರ, ಒಟ್ಟಾರೆ US ವಯಸ್ಕರಲ್ಲಿ 10 ಜನರಲ್ಲಿ ನಾಲ್ವರು ಸ್ನಾತಕೋತ್ತರ ಪದವಿ ಅಥವಾ ಹೆಚ್ಚಿನ ಶಿಕ್ಷಣ ಹೊಂದಿದವರಾಗಿದ್ದಾರೆ. ಇದು ಧಾರ್ಮಿಕ ಸಮುದಾಯಗಳ ನಡುವಿನ ವ್ಯಾಪಕ ಶೈಕ್ಷಣಿಕ ಅಂತರವನ್ನು ಒತ್ತಿಹೇಳುತ್ತದೆ. ವಲಸೆ ಮತ್ತು ಜನಸಂಖ್ಯಾ ಮಾದರಿಗಳು ಈ ವ್ಯತ್ಯಾಸಗಳನ್ನು ವಿವರಿಸಲು ನೆರವಾಗಿದೆ. ವಿಶೇಷವಾಗಿ ಹಿಂದೂಗಳು, ಮುಸ್ಲಿಮರು ಮತ್ತು ಬೌದ್ಧರಲ್ಲಿ ಹೆಚ್ಚಿನವರು ಉನ್ನತ ಶಿಕ್ಷಣ ಅಥವಾ ಕೌಶಲ್ಯ ಕೆಲಸದಿಂದ ಅಮೆರಿಕಕ್ಕೆ ಬಂದವರಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.