ಬರಾಕ್ ಒಬಾಮಾ ದಂಪತಿಗಳನ್ನು ಕೋತಿಗೆ ಹೋಲಿಸಿದ ಟ್ರಂಪ್: ಆಕ್ರೋಶ ಬೆನ್ನಲ್ಲೇ ಪೋಸ್ಟ್ ಡಿಲೀಟ್; ಕ್ಷಮೆಯಾಚನೆಗೆ ನಕಾರ
ಜನಾಂಗೀಯ ನಿಂದನೆ ಮಾಡುವ ಮೂಲಕ ಟ್ರಂಪ್ ಅವರು ಇದೀಗ ಮತ್ತೆ ಸುದ್ದಿಯಾಗುತ್ತಿದ್ದಾರೆ.

ವಾಷಿಂಗ್ಟನ್: ವಿಶ್ವದ ದೊಡ್ಡಣ್ಣನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸದ್ಯ ಸಾಕಷ್ಟು ಸದ್ದು ಮಾಡುತ್ತಿರುವ ಅಧ್ಯಕ್ಷ, ಮೋಸ್ಟ್ ಡೇಂಜರಸ್ ಪ್ರೆಸಿಡೆಂಟ್.. ಟ್ರಂಪ್ ಅಂದ್ರೆ ಈಗ ಇಡೀ ಜಗತ್ತು ಈಗ ಆತಂಕ, ಅಚ್ಚರಿ, ಭಯದಿಂದ ನೋಡುತ್ತಿದ್ದಾರೆ, ಅದಕ್ಕೆ ಕಾರಣ ಅವರ ನಿರ್ಧಾರ ಹಾಗೂ ನೀಡಿರುತ್ತಿರುವ ಹೇಳಿಕೆ.
ಜನಾಂಗೀಯ ನಿಂದನೆ ಮಾಡುವ ಮೂಲಕ ಟ್ರಂಪ್ ಅವರು ಇದೀಗ ಮತ್ತೆ ಸುದ್ದಿಯಾಗುತ್ತಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಅವರ ಪತ್ನಿ ಮಿಶೆಲ್ ಒಮಾಬಾ ಅವರ ವಿರುದ್ಧ ಟ್ರಂಪ್ ಅವರು ಜನಾಂಗೀಯ ನಿಂದನೆಯ ಪೋಸ್ಟ್ ಹಂಚಿಕೊಂಡಿದ್ದು, ಇದಕ್ಕೆ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿವೆ.
ಟ್ರಂಪ್ ಅವರ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಒಬಾಮಾ ದಂಪತಿಯನ್ನು ಮಂಗಗಳಂತೆ ಚಿತ್ರಿಸಿರುವ ಎಐ ಆಧಾರಿತ ವಿಡಿಯೊವನ್ನು ಪೋಸ್ಟ್ ಮಾಡಲಾಗಿತ್ತು.
ಚುನಾವಣಾ ಪಿತೂರಿ ಸಿದ್ಧಾಂತಗಳ ಕುರಿತಾದ ವಿಡಿಯೊವನ್ನು ಟ್ರಂಪ್ ಹಂಚಿಕೊಂಡಿದ್ದರು. ಅದರಲ್ಲಿ ಒಬಾಮಾ ದಂಪತಿಯ ಮುಖವನ್ನು ಮಂಗಗಳ ದೇಹಕ್ಕೆ ಅಂಟಿಸಿ ತೋರಿಸುವ ಚಿತ್ರಣವೂ ಇತ್ತು. 62 ಸೆಕೆಂಡ್‌ಗಳ ಕ್ಲಿಪ್ 2020ರಲ್ಲಿ ಮತದಾನ ಯಂತ್ರಗಳನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಇದಕ್ಕೆ ತೀವ್ರ ವಿರೋಧ ಹಾಗೂ ಟೀಕೆಗಳು ವ್ಯಕ್ತವಾಗಿವೆ. ವಿರೋಧ ಬೆನ್ನಲ್ಲೇ ಪೋಸ್ಟ್'ನ್ನು ಡಿಲೀಟ್ ಮಾಡಲಾಗಿದೆ.
ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಶ್ವೇತಭವನ ಸ್ಪಷ್ಟೀಕರಣ ನೀಡಿದ್ದು,ಪೋಸ್ಟ್ ಡಿಲೀಟ್ ಮಾಡಿ ಸಿಬ್ಬಂದಿಯನ್ನು ದೂರಿದೆ.
ಡೊನಾಲ್ಡ್ ಟ್ರಂಪ್ ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರಾಕ್ ಒಬಾಮಾ ಮತ್ತು ಅವರ ಪತ್ನಿ ಮಿಶೆಲ್ ಅವರನ್ನು ಕೋತಿಗಳಂತೆ ಚಿತ್ರಿಸುವ ಜನಾಂಗೀಯ ನಿಂದನೆಯ ವಿಡಿಯೊವನ್ನು ಸಿಬ್ಬಂದಿಯೊಬ್ಬರು ತಪ್ಪಾಗಿ ಪೋಸ್ಟ್ ಮಾಡಿದ್ದಾರೆ ಮತ್ತು ಅದನ್ನು ಡಿಲೀಟ್ ಮಾಡಲಾಗಿದೆ ಎಂದು ಶ್ವೇತಭವನ ಶುಕ್ರವಾರ ತಿಳಿಸಿದೆ. ಈ ಮೂಲಕ ವಿವಾದದಂದ ನುಣುಚಿಕೊಳ್ಳುವ ಯತ್ನ ನಡೆಸಲಾಗಿದೆ.
ಕ್ಷಮೆಗೆ ನಕಾರ
ಈ ನಡುವೆ ಪೋಸ್ಟ್ ಸಂಬಂಧ ಪ್ರತಿಕ್ರಿಯೆ ನೀಡಿರುವ ಟ್ರಂಪ್ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಕ್ಷಮೆಯಾಚಿಸಲ್ಲ ಎಂದು ಹೇಳಿದ್ದಾರೆ.
ಶ್ವೇತಭವನ ಈ ವೀಡಿಯೊವನ್ನು ನಂತರ ಡಿಲೀಟ್ ಮಾಡಿದ್ದರು, ಟ್ರಂಪ್ ಅವರ ದುರ್ವರ್ತನೆ ವಿರುದ್ಧ ದೇಶಾದ್ಯಂತ ಮತ್ತಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



