ವಿದೇಶ

ನಂಬಿಕೆಯೇ ಭಾರತದ ಬಲಿಷ್ಠ ಕರೆನ್ಸಿ: ಮಲೇಷ್ಯಾದಲ್ಲಿ ಪ್ರಧಾನಿ ಮೋದಿ

ದ್ವೀಪ ರಾಷ್ಟ್ರದಲ್ಲಿ ಹೊಸ ಕಾನ್ಸುಲೇಟ್ ಹಾಗೂ ವಿದ್ಯಾರ್ಥಿಗಳು ಭಾರತದಲ್ಲಿ ಅಧ್ಯಯನ ಮಾಡಲು ಅನುವು ಮಾಡಿಕೊಡಲು ತಿರುವಳ್ಳುವರ್ ವಿದ್ಯಾರ್ಥಿವೇತನವನ್ನು ಪ್ರಧಾನಿ ಮೋದಿ ಘೋಷಿಸಿದರು.

ನಂಬಿಕೆಯೇ ಭಾರತದ ಬಲಿಷ್ಠ ಕರೆನ್ಸಿ: ಮಲೇಷ್ಯಾದಲ್ಲಿ ಪ್ರಧಾನಿ ಮೋದಿ
ಮಲೇಷ್ಯಾದಲ್ಲಿ ಪ್ರಧಾನಿ ಮೋದಿ
Published On :

ಕೌಲಾಲಂಪುರ: ಭಾರತವನ್ನು "ಅಭಿವೃದ್ಧಿಗೆ ವಿಶ್ವಾಸಾರ್ಹ ಪಾಲುದಾರ" ಎಂದು ನೋಡಲಾಗುತ್ತಿದೆ ಮತ್ತು ಇದು ಯುಕೆ, ಯುಎಸ್ಎ ಮತ್ತು ಇಯು ಸೇರಿದಂತೆ ವಿವಿಧ ದೇಶಗಳೊಂದಿಗೆ ಮಾಡಿಕೊಂಡಿರುವ ಇತ್ತೀಚಿನ ವ್ಯಾಪಾರ ಒಪ್ಪಂದಗಳಲ್ಲಿ ಪ್ರತಿಫಲಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.

ಇಂದು ಮಲೇಷ್ಯಾದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋದಿ, ಭಾರತೀಯ ವಲಸಿಗರು ಭಾರತ ಮತ್ತು ಮಲೇಷ್ಯಾ ನಡುವೆ ಜೀವಂತ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. ಅಲ್ಲದೆ ದ್ವೀಪ ರಾಷ್ಟ್ರದಲ್ಲಿ ಹೊಸ ಕಾನ್ಸುಲೇಟ್ ಹಾಗೂ ವಿದ್ಯಾರ್ಥಿಗಳು ಭಾರತದಲ್ಲಿ ಅಧ್ಯಯನ ಮಾಡಲು ಅನುವು ಮಾಡಿಕೊಡಲು ತಿರುವಳ್ಳುವರ್ ವಿದ್ಯಾರ್ಥಿವೇತನವನ್ನು ಪ್ರಧಾನಿ ಮೋದಿ ಘೋಷಿಸಿದರು.

ಎರಡು ದಿನಗಳ ಮಲೇಷ್ಯಾ ಭೇಟಿಗಾಗಿ ಇಂದು ಕೌಲಾಲಂಪುರಕ್ಕೆ ಆಗಮಿಸಿದ ಪ್ರಧಾನಿ ಮೋದಿ, ಭಾರತ ವಿವಿಧ ದೇಶಗಳೊಂದಿಗೆ ಮಾಡಿಕೊಂಡ ವ್ಯಾಪಾರ ಒಪ್ಪಂದಗಳನ್ನು ಉಲ್ಲೇಖಿಸಿದರು ಮತ್ತು ಭಾರತವನ್ನು "ಅಭಿವೃದ್ಧಿಗೆ ವಿಶ್ವಾಸಾರ್ಹ ಪಾಲುದಾರ" ಎಂದು ನೋಡಲಾಗುತ್ತಿದೆ ಎಂದರು.

"ನಂಬಿಕೆಯೇ ಭಾರತದ ಪ್ರಬಲ ಕರೆನ್ಸಿಯಾಗಿದೆ" ಎಂದು ಯುಕೆ, ಯುಎಇ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಓಮನ್, ಇಯು ಮತ್ತು ಯುಎಸ್ ಜೊತೆಗಿನ ವ್ಯಾಪಾರ ಒಪ್ಪಂದಗಳನ್ನು ಪ್ರಧಾನಿ ಮೋದಿ ಉಲ್ಲೇಖಿಸಿದರು.

ಮಲೇಷ್ಯಾ ವಿಶ್ವದ ಎರಡನೇ ಅತಿದೊಡ್ಡ ಭಾರತೀಯ ಮೂಲದ ಸಮುದಾಯವನ್ನು ಹೊಂದಿದೆ. ಭಾರತೀಯ ಮತ್ತು ಮಲೇಷಿಯಾದ ಹೃದಯಗಳನ್ನು ಸಂಪರ್ಕಿಸುವ ಬಹಳಷ್ಟು ವಿಷಯಗಳಿವೆ. ನೀವು ನಮ್ಮನ್ನು ಸಂಪರ್ಕಿಸುವ ಜೀವಂತ ಸೇತುವೆ ಎಂದು ಮೋದಿ ಹೇಳಿದರು.

ಭಾರತೀಯ ಮೂಲದ ಸುಮಾರು ಮೂರು ಮಿಲಿಯನ್ ಜನರು ಮಲೇಷ್ಯಾದಲ್ಲಿ ವಾಸಿಸುತ್ತಿದ್ದಾರೆ. ಅವರಲ್ಲಿ ಬಹುಪಾಲು ತಮಿಳು ಮೂಲದವರು. ಹೀಗಾಗಿ, ತಮಿಳು ಭಾಷೆಯ ಕುರಿತು ತಮ್ಮ ಭಾಷಣದಲ್ಲಿ ಮಾತನಾಡಿದ ಮೋದಿ, “ತಮಿಳು ಜಗತ್ತಿಗೆ ಭಾರತ ನೀಡಿದ ಕೊಡುಗೆ. ತಮಿಳು ಸಾಹಿತ್ಯ ಶಾಶ್ವತ ಮತ್ತು ಜಗತ್ತಿಗೆ ದೊಡ್ಡ ಕೊಡುಗೆ ನೀಡಿದೆ. ಭಾರತದ ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್, ಕೇಂದ್ರ ಸಚಿವರಾದ ಎಸ್ ಜೈಶಂಕರ್ ಮತ್ತು ನಿರ್ಮಲಾ ಸೀತಾರಾಮನ್ ಅವರಂತಹ ತಮಿಳು ಸಮುದಾಯದ ನಾಯಕರು ತಮ್ಮ ಪ್ರತಿಭೆಯಿಂದ ಮಾನವೀಯತೆಗೆ ಸೇವೆ ಸಲ್ಲಿಸಿದ್ದಾರೆ ಎಂದರು.

ಇದಕ್ಕು ಮುನ್ನ ಕೌಲಾಲಂಪುರಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ 80 ಕ್ಕೂ ಹೆಚ್ಚು ನೃತ್ಯಗಾರರು ಭರತನಾಟ್ಯ, ಕಥಕ್, ಕಥಕ್ಕಳಿ, ಕೂಚಿಪುಡಿ, ಯಕ್ಷಗಾನ, ಲಾವಣಿ ಮತ್ತು ಓಡಿಸಿ ಸೇರಿದಂತೆ ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ನೃತ್ಯಗಳನ್ನು ಪ್ರದರ್ಶಿಸುವ ಮೂಲಕ ಅದ್ಧೂರಿ ಸ್ವಾಗತ ನೀಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.