ಮೀನುಗಾರನ ಮುಖಕ್ಕೆ ಅಂಟಿಕೊಂಡ ಅಕ್ಟೋಪಸ್! ಪ್ರಾಣ ಉಳಿಸಿಕೊಳ್ಳಲು ಯುವಕನ ಹರಸಾಹಸ; ಭಯಾನಕ Video ವೈರಲ್
ಜೆಸ್ಸರ್ ಸೆರ್ವಾಂಟೆಸ್ ಎಂಬ ಮೀನುಗಾರ ಕಳೆದ ತಿಂಗಳು ಪೋರ್ಟ್ ಪ್ರಿನ್ಸೆಸಾ ದ್ವೀಪದ ಬಳಿ ಮೀನುಗಾರಿಕೆ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಫಿಲಿಪೈನ್ಸ್ : ಮುಖಕ್ಕೆ ಅಂಟಿಕೊಂಡ ಅಕ್ಟೋಪಸ್ ನಿಂದ ಪ್ರಾಣ ಉಳಿಸಿಕೊಳ್ಳಲು ಯುವಕ ನಡೆಸುವ ಹೋರಾಟದ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಜೆಸ್ಸರ್ ಸೆರ್ವಾಂಟೆಸ್ ಎಂಬ ಮೀನುಗಾರ ಕಳೆದ ತಿಂಗಳು ಪೋರ್ಟ್ ಪ್ರಿನ್ಸೆಸಾ ದ್ವೀಪದ ಬಳಿ ಮೀನುಗಾರಿಕೆ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಜೆಸ್ಸರ್ ಸೆರ್ವಾಂಟೆಸ್ ಸಮುದ್ರದಿಂದ ಆಕ್ಟೋಪಸ್ ಅನ್ನು ಮೇಲಕ್ಕೆ ಎತ್ತಿದ್ದಾರೆ. ತಕ್ಷಣವೇ ಆಕ್ಟೋಪಸ್ ದಾಳಿ ಮಾಡಿದೆ. ಜೆಸ್ಸರ್ ಸೆರ್ವಾಂಟೆಸ್ ಹಿಡಿತದಿಂದ ತಪ್ಪಿಸಿಕೊಂಡು ಅವರ ಮುಖ ಹಾಗೂ ತಲೆಯನ್ನು ಕಾಲುಗಳಿಂದ ಗಟ್ಟಿಯಾಗಿ ಹಿಡಿದುಕೊಂಡಿದೆ.
ಆಕ್ಟೋಪಸ್‌ನ ಹೀರೊತ್ತಿಗೆಗಳು ಅವರ ಚರ್ಮಕ್ಕೆ ಗಟ್ಟಿಯಾಗಿ ಅಂಟಿಕೊಂಡಿವೆ. ಅದನ್ನು ತೆಗೆಯುವುದು ಅತ್ಯಂತ ಕಷ್ಟವಾಗಿತ್ತು. ಒಂದು ಹಂತದಲ್ಲಿ ಅದು ಮೀನುಗಾರನ ಬಾಯಿಯನ್ನೇ ಸಂಪೂರ್ಣವಾಗಿ ಮುಚ್ಚಿದ್ದರಿಂದ, ಉಸಿರಾಡಲು ಸಾಧ್ಯವಾಗದೆ ಪ್ರಾಣಕ್ಕೆ ಅಪಾಯ ಸಂಭವಿಸುವ ಸಾಧ್ಯತೆ ಇತ್ತು.
ಕೊನೆಗೆ ಆಕ್ಟೋಪಸ್ ಹಿಡಿತದಿಂದ ಬಿಡಿಸಿಕೊಳ್ಳಲು ಕಷ್ಟವಾದಾಗ, ಸೆರ್ವಾಂಟೆಸ್ ಬಿದಿರಿನ ತುಂಡನ್ನು ಬಳಸಿದ್ದಾರೆ. ತನ್ನ ಚರ್ಮ ಸಡಿಲಗೊಳಿಸಲು ಮತ್ತು ಅದನ್ನು ತನ್ನ ಮುಖದಿಂದ ಎಳೆಯಲು ಆಕ್ಟೋಪಸ್ ಅನ್ನು ಪದೇ ಪದೆ ಹೊಡೆದಿದ್ದಾರೆ.
ಬಳಿಕ ಆಕ್ಟೋಪಸ್ ತನ್ನ ಹಿಡಿತವನ್ನು ಸಡಿಲಿಸಿದೆ. ತಕ್ಷಣವೇ ಅವರು ಅದನ್ನು ಮತ್ತೆ ಸಮುದ್ರಕ್ಕೆ ಎಸೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಫಿಲಿಪೈನ್ಸ್ ತನ್ನ ಕರಾವಳಿ ನೀರು ಮತ್ತು ಹವಳದ ಬಂಡೆಗಳಲ್ಲಿ ವಿವಿಧ ರೀತಿಯ ಆಕ್ಟೋಪಸ್ ಪ್ರಭೇದಗಳಿಗೆ ನೆಲೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



