ಉಕ್ರೇನ್ ರಾಜಧಾನಿ ಕೈವ್ ನಲ್ಲಿ ರಷ್ಯಾ ದಾಳಿ: ಮಗು ಸೇರಿದಂತೆ ಮೂವರು ಸಾವು!
ರಾಜಧಾನಿಯ ಸಮೀಪವಿರುವ ಬೊರಿಸ್ಪಿಲ್ ಜಿಲ್ಲೆಯ ಮೂರು ಸ್ಥಳಗಳಲ್ಲಿ ರಷ್ಯಾದ ದಾಳಿಗಳು ನಡೆದಿವೆ ಎಂದು ಕೀವ್ ಪ್ರಾದೇಶಿಕ ಆಡಳಿತದ ಮುಖ್ಯಸ್ಥ ಟೈಮೂರ್ ಟ್ಕಾಚೆಂಕೊ ತಿಳಿಸಿದ್ದಾರೆ.

ಕೈವ್: ಉಕ್ರೇನ್ ದೇಶದ ರಾಜಧಾನಿ ಕೈವ್ ಸುತ್ತಮುತ್ತಲಿನ ಪ್ರದೇಶದಲ್ಲಿ ರಷ್ಯಾ ಶನಿವಾರ ನಡೆಸಿದ ದಾಳಿಯಲ್ಲಿ ಮಗುವೊಂದೂ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜಧಾನಿಯ ಸಮೀಪವಿರುವ ಬೊರಿಸ್ಪಿಲ್ ಜಿಲ್ಲೆಯ ಮೂರು ಸ್ಥಳಗಳಲ್ಲಿ ರಷ್ಯಾದ ದಾಳಿಗಳು ನಡೆದಿವೆ ಎಂದು ಕೀವ್ ಪ್ರಾದೇಶಿಕ ಆಡಳಿತದ ಮುಖ್ಯಸ್ಥ ಟೈಮೂರ್ ಟ್ಕಾಚೆಂಕೊ ತಿಳಿಸಿದ್ದಾರೆ.
ಈ ದಾಳಿಯಲ್ಲಿ ಇನ್ನೂ ಮೂವರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು. ವಾಯು ದಾಳಿಯ ಎಚ್ಚರಿಕೆಯ ನಂತರ, ರಾಜಧಾನಿಯ ಎರಡು ಜಿಲ್ಲೆಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಮೇಯರ್ ವಿಟಾಲಿ ಕ್ಲಿಟ್ಷ್ಕೊ ತಿಳಿಸಿದ್ದಾರೆ.
ನಗರದ ಮಧ್ಯಭಾಗವನ್ನೇ ನಡುಗಿಸಿದ ಹಲವಾರು ಪ್ರಬಲ ಸ್ಫೋಟಗಳ ಶಬ್ದವನ್ನು ರಾಯಿಟರ್ಸ್‌ನ ಪ್ರತ್ಯಕ್ಷದರ್ಶಿಗಳು ಕೇಳಿಸಿಕೊಂಡಿದ್ದಾರೆ. ರಷ್ಯಾದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವಿರುವ ವಾಯು ರಕ್ಷಣಾ ವ್ಯವಸ್ಥೆಗಳ ತೀವ್ರ ಕೊರತೆಯನ್ನು ಉಕ್ರೇನ್ ಎದುರಿಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


