ಮಾಲಿ ರಕ್ಷಣಾ ಸಚಿವ ಸಾಡಿಯೋ ಕಾಮಾರಾ ಗುಂಡಿಕ್ಕಿ ಹತ್ಯೆ
2020 ಮತ್ತು 2021ರಲ್ಲಿ ಸೇನೆ ತಿರುಗಿಬಿದ್ದ ನಂತರ ಅಧಿಕಾರಕ್ಕೆ ಬಂದ ಸೈನಿಕ ಸರ್ಕಾರದಲ್ಲಿ ಕಾಮಾರಾ ಪ್ರಮುಖ ಪಾತ್ರವಹಿಸಿದ್ದರು.

ಮಾಲಿಯ ರಕ್ಷಣಾ ಸಚಿವ ಜನರಲ್ ಸಾಡಿಯೋ ಕಾಮಾರಾ ದೇಶದಾದ್ಯಂತ ಸೈನಿಕ ತಾಣಗಳ ಮೇಲೆ ನಡೆದ ಸಂಯೋಜಿತ ದಾಳಿಗಳಲ್ಲಿ ಹತ್ಯೆಯಾಗಿದ್ದಾರೆ ಎಂದು ಸರ್ಕಾರದ ವಕ್ತಾರರು ದೃಢಪಡಿಸಿದ್ದಾರೆ.
ವಕ್ತಾರ ಇಸ್ಸಾ ಉಸ್ಮಾನೆ ಕೂಲಿಬಾಲಿ ನಿನ್ನೆ ನೀಡಿದ ಹೇಳಿಕೆಯಲ್ಲಿ, ದಾಳಿಕೋರರು ಕಾಮಾರಾ ಅವರ ಮನೆಯನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಗ್ಯಾರಿಸನ್ ಪಟ್ಟಣವಾದ ಕಾಟಿಯಲ್ಲಿ ಇರುವ ಕಾಮಾರಾ ಅವರ ನಿವಾಸದ ಮೇಲೆ ಅಲ್‌ಖೈದಾ ಸಂಪರ್ಕಿತ ಸಂಘಟನೆ ಮತ್ತು ಟುವಾರೆಗ್ ಬಂಡುಕೋರರು ಒಂದೇ ಸಮಯದಲ್ಲಿ ದಾಳಿ ನಡೆಸಿದ್ದರು.
2020 ಮತ್ತು 2021ರಲ್ಲಿ ಸೇನೆ ತಿರುಗಿಬಿದ್ದ ನಂತರ ಅಧಿಕಾರಕ್ಕೆ ಬಂದ ಸೈನಿಕ ಸರ್ಕಾರದಲ್ಲಿ ಕಾಮಾರಾ ಪ್ರಮುಖ ಪಾತ್ರವಹಿಸಿದ್ದರು. ಆಡಳಿತ ನಡೆಸುತ್ತಿರುವ ಸೈನಿಕ ನಾಯಕತ್ವದೊಳಗೆ ಅವರು ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲೊಬ್ಬರು ಮತ್ತು ಭವಿಷ್ಯದ ನಾಯಕರಾಗಿ ಕಾಣಿಸಿಕೊಂಡಿದ್ದರು ಎಂದು ಮಾಲಿಯಿಂದ ವರದಿ ಮಾಡುತ್ತಿರುವ ಅಲ್ ಜಝೀರಾ ಪತ್ರಕರ್ತ ನಿಕೋಲಸ್ ಹಕ್ ಹೇಳಿದ್ದಾರೆ.
ಅವರ ಸಾವು ದೇಶದ ಸಶಸ್ತ್ರ ಪಡೆಗಳಿಗೆ ದೊಡ್ಡ ಹೊಡೆತವಾಗಿದೆ. ಹಕ್ ಅವರ ಪ್ರಕಾರ, ದಾಳಿಕೋರರು ಕಾಮಾರಾ ಅವರ ಕಾಟಿಯಲ್ಲಿರುವ ನಿವಾಸದ ಮೇಲೆ ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆಸಿದರು. ಕಾಟಿ ರಾಜಧಾನಿ ಬಮಾಕೋದಿಂದ ಸುಮಾರು 15 ಕಿಮೀ ದೂರದಲ್ಲಿರುವ ಅತ್ಯಂತ ಭದ್ರತಾ ವ್ಯವಸ್ಥೆಯುಳ್ಳ ಸೈನಿಕ ಪಟ್ಟಣವಾಗಿದ್ದು, ಮಧ್ಯಂತರ ಅಧ್ಯಕ್ಷ ಅಸ್ಸಿಮಿ ಗೋಯಿಟಾ ಕೂಡ ಅಲ್ಲಿ ವಾಸಿಸುತ್ತಾರೆ.
AFP ವರದಿ ಪ್ರಕಾರ, ಕಾಮಾರಾ ಅವರ ಎರಡನೇ ಪತ್ನಿ ಮತ್ತು ಇಬ್ಬರು ಮೊಮ್ಮಕ್ಕಳೂ ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಕಾಟಿ ದೇಶದ ಅತ್ಯಂತ ಸುರಕ್ಷಿತ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದ್ದರೂ, ಅಲ್‌ಖೈದಾ ಸಂಪರ್ಕಿತ ಜಮಾಅತ್ ನುಸ್ರತ್ ಅಲ್ ಇಸ್ಲಾಂ ವಲ್ ಮುಸ್ಲಿಮೀನ್ (JNIM) ಹಾಗೂ ಅಜಾವಾದ್ ವಿಮೋಚನಾ ಮುಂಚೂಣಿ (FLA) ಟುವಾರೆಗ್ ಯೋಧರು ದಾಳಿ ನಡೆಸಲು ಯಶಸ್ವಿಯಾದರು ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



