ಇರಾನ್-ಇಸ್ರೇಲ್ ಯುದ್ಧ: ಹಾರ್ಮುಜ್ ಜಲಸಂಧಿಯಲ್ಲಿ ಮೂರು ಹಡಗುಗಳ ಮೇಲೆ ದಾಳಿ
ಇರಾನ್ ಯುದ್ಧ ವಿರಾಮ ವಿಸ್ತರಣೆಯನ್ನು ಒಪ್ಪಿಕೊಂಡಿದ್ದರೂ, ಯುದ್ಧ ಅಂತ್ಯಗೊಳಿಸಲು ನಡೆಯುವ ಹೊಸ ಮಾತುಕತೆಯಲ್ಲಿ ಭಾಗವಹಿಸಲು ತಯಾರಿದೆ ಎಂದು ಸ್ಪಷ್ಟಪಡಿಸಿಲ್ಲ ಎಂದು ರಾಜ್ಯ ಟಿವಿ ವರದಿ ಮಾಡಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇರಾನ್‌ನೊಂದಿಗೆ ಇರುವ ಯುದ್ಧ ವಿರಾಮವನ್ನು ಅಮೆರಿಕ ಅನಿರ್ದಿಷ್ಟಾವಧಿಗೆ ವಿಸ್ತರಿಸುತ್ತಿದೆ ಎಂದು ತಿಳಿಸಿದ್ದಾರೆ. ಹೊಸ ಶಾಂತಿ ಮಾತುಕತೆಗಳ ಸುತ್ತು ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪಾಕಿಸ್ತಾನ ಎರಡನೇ ಸುತ್ತಿನ ಮಾತುಕತೆಗಳನ್ನು ಆಯೋಜಿಸಲು ಯೋಜನೆ ಮಾಡಿಕೊಂಡಿದ್ದರೂ, ಇರಾನ್ ಮಾತುಕತೆಗಳನ್ನು ಪುನರಾರಂಭಿಸುವ ಪ್ರಯತ್ನಗಳನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ, ಅಮೆರಿಕ ಉಪಾಧ್ಯಕ್ಷ ಜೆ.ಡಿ. ವೆನ್ಸ್ ಅವರ ಇಸ್ಲಾಮಾಬಾದ್ ಪ್ರವಾಸವನ್ನು ರದ್ದುಗೊಳಿಸಲಾಗಿದೆ.
ಇರಾನ್ ಯುದ್ಧ ವಿರಾಮ ವಿಸ್ತರಣೆಯನ್ನು ಒಪ್ಪಿಕೊಂಡಿದ್ದರೂ, ಯುದ್ಧ ಅಂತ್ಯಗೊಳಿಸಲು ನಡೆಯುವ ಹೊಸ ಮಾತುಕತೆಯಲ್ಲಿ ಭಾಗವಹಿಸಲು ತಯಾರಿದೆ ಎಂದು ಸ್ಪಷ್ಟಪಡಿಸಿಲ್ಲ ಎಂದು ರಾಜ್ಯ ಟಿವಿ ವರದಿ ಮಾಡಿದೆ.
ಈ ಮಧ್ಯೆ, ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ರೆವಲ್ಯೂಶನರಿ ಗಾರ್ಡ್ ಮೂರನೇ ಹಡಗನ್ನು ದಾಳಿ ಮಾಡಿದೆ ಎಂದು ವರದಿ ಮಾಡಿವೆ. ಇದು ಯುದ್ಧ ಅಂತ್ಯಗೊಳಿಸುವ ಪ್ರಯತ್ನಗಳ ಬಗ್ಗೆ ಅನುಮಾನ ಮೂಡಿಸಿದೆ. Nour News, Fars ಮತ್ತು Mehr ಸುದ್ದಿ ಸಂಸ್ಥೆಗಳ ಪ್ರಕಾರ, ‘ಯೂಫೋರಿಯಾ’ ಎಂಬ ಹಡಗಿನ ಮೇಲೆ ದಾಳಿ ನಡೆದಿದೆ. ದಾಳಿಯ ಬಳಿಕ ಹಡಗು ಇರಾನ್ ಕರಾವಳಿಯಲ್ಲಿ ಸಿಲುಕಿಕೊಂಡಿದೆ ಎಂದು ತಿಳಿದುಬಂದಿದೆ.
ಇದರ ಜೊತೆಗೆ, ಈ ದಾಳಿಗೆ ಒಳಗಾದ ಇತರ ಎರಡು ಹಡಗುಗಳನ್ನು ರೆವಲ್ಯೂಶನರಿ ಗಾರ್ಡ್ ವಶಪಡಿಸಿಕೊಂಡಿದೆ ಎಂದು ಇರಾನ್ ರಾಜ್ಯ ಟಿವಿ ಪ್ರತ್ಯೇಕವಾಗಿ ವರದಿ ಮಾಡಿದೆ.
ಒಮಾನ್‌ನ ಈಶಾನ್ಯಕ್ಕೆ ಸಂಚರಿಸುತ್ತಿದ್ದ ಲೈಬೀರಿಯನ್ ಧ್ವಜವನ್ನು ಹೊಂದಿರುವ ಹಡಗು ಈ ದಾಳಿಗೆ ಗುರಿಯಾಗಿದೆ. ಹಡಗಿನ ಕ್ಯಾಪ್ಟನ್ ನೀಡಿರುವ ಮಾಹಿತಿ ಪ್ರಕಾರ, ಐಆರ್‌ಜಿಸಿಯ ಗನ್‌ಬೋಟ್ ಅತಿ ವೇಗವಾಗಿ ಹಡಗಿನ ಸಮೀಪಕ್ಕೆ ಬಂದಿತ್ತು. ಅಷ್ಟರಲ್ಲಿ ಗನ್‌ಬೋಟ್‌ನಲ್ಲಿದ್ದ ಮೂವರು ವ್ಯಕ್ತಿಗಳು ಹಡಗಿನ ಸೇತುವೆಯ (Bridge) ಭಾಗವನ್ನು ಗುರಿಯಾಗಿಸಿಕೊಂಡು ಮನಬಂದಂತೆ ಗುಂಡು ಹಾರಿಸಿದರು. ದಾಳಿಯ ಬೆನ್ನಲ್ಲೇ ಒಂದು ಹಡಗಿನಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತ್ತು.
ಗುಂಡಿನ ದಾಳಿ ನಡೆದರೂ ಮತ್ತು ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡರೂ, ಮೂರೂ ಹಡಗುಗಳಲ್ಲಿರುವ ಸಿಬ್ಬಂದಿ ವರ್ಗಕ್ಕೆ ಯಾವುದೇ ಅಪಾಯ ಸಂಭವಿಸಿಲ್ಲ. ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಮತ್ತು ಹಡಗುಗಳಿಗೆ ಯಾವುದೇ ಗಮನಾರ್ಹ ಹಾನಿಯಾಗಿಲ್ಲ ಎಂದು ಯುನೈಟೆಡ್ ಕಿಂಗ್‌ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ (UKMTO) ದೃಢಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



