ಶಾಂತಿ ಮಾತುಕತೆ ವಿಫಲ: ಅಮೆರಿಕ ಟೆಹ್ರಾನ್‌ನ ವಿಶ್ವಾಸ ಗಳಿಸಲು ಸಾಧ್ಯವಾಗಲಿಲ್ಲ; ಇರಾನ್ ಸ್ಪೀಕರ್
ಅಮೆರಿಕದೊಂದಿಗೆ ನಡೆದ ಯುದ್ಧ ವಿರಾಮ ಮಾತುಕತೆಗಳು ವಿಫಲವಾದ ಬೆನ್ನಲ್ಲೇ ಇರಾನ್ ಸಂಸತ್ ಸಭಾಪತಿ ಮೊಹಮ್ಮದ್ ಬಾಗರ್ ಘಾಲಿಬಾಫ್ ಅವರು, ಈ ಚರ್ಚೆಗಳ ವೇಳೆ ವಾಷಿಂಗ್ಟನ್ ಟೆಹ್ರಾನ್‌ನ ವಿಶ್ವಾಸವನ್ನು ಗಳಿಸಲು ವಿಫಲವಾಗಿದೆ ಎಂದು ತಿಳಿಸಿದ್ದಾರೆ.

ಟೆಹ್ರಾನ್: ಅಮೆರಿಕದೊಂದಿಗೆ ನಡೆದ ಯುದ್ಧ ವಿರಾಮ ಮಾತುಕತೆಗಳು ವಿಫಲವಾದ ಬೆನ್ನಲ್ಲೇ ಇರಾನ್ ಸಂಸತ್ ಸಭಾಪತಿ ಮೊಹಮ್ಮದ್ ಬಾಗರ್ ಘಾಲಿಬಾಫ್ ಅವರು, ಈ ಚರ್ಚೆಗಳ ವೇಳೆ ವಾಷಿಂಗ್ಟನ್ ಟೆಹ್ರಾನ್‌ನ ವಿಶ್ವಾಸವನ್ನು ಗಳಿಸಲು ವಿಫಲವಾಗಿದೆ ಎಂದು ತಿಳಿಸಿದ್ದಾರೆ.
ಅಮೆರಿಕದ ಪ್ರತಿನಿಧಿಗಳೊಂದಿಗೆ ನಡೆದ ಶಾಂತಿ ಮಾತುಕತೆಯಲ್ಲಿ ಭಾಗವಹಿಸಿದ್ದ ಘಾಲಿಬಾಫ್, ಇರಾನಿ ಪ್ರತಿನಿಧಿ ಮಂಡಳಿಯ ನನ್ನ ಸಹೋದ್ಯೋಗಿಗಳು ರಚನಾತ್ಮಕ ಸಲಹೆಗಳನ್ನು ಮುಂದಿಟ್ಟರೂ, ಅಂತಿಮವಾಗಿ ಈ ಸುತ್ತಿನ ಮಾತುಕತೆಯಲ್ಲಿ ಎದುರಾಳಿ ಪಕ್ಷ ಇರಾನಿ ಪ್ರತಿನಿಧಿ ಮಂಡಳಿಯ ವಿಶ್ವಾಸವನ್ನು ಸಂಪಾದಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಎರಡೂ ದೇಶಗಳ ನಿಯೋಗಗಳ ನಡುವೆ 21 ಗಂಟೆಗಳ ನಿರ್ಣಾಯಕ ಮಾತುಕತೆಯ ನಂತರ ಪಶ್ಚಿಮ ಏಷ್ಯಾ ಸಂಘರ್ಷವನ್ನು ಕೊನೆಗೊಳಿಸಲು ಅಮೆರಿಕ ಮತ್ತು ಇರಾನ್ ಒಪ್ಪಂದ ಮಾಡಿಕೊಳ್ಳಲು ವಿಫಲವಾದವು. ಆದಾಗ್ಯೂ, ತಕ್ಷಣದ ಯುದ್ಧಕ್ಕೆ ಮರಳುವ ಸಾಧ್ಯತೆಗಳಿಲ್ಲ. ಮಾತುಕತೆಯ ನಂತರ ಯುಎಸ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪಾಕಿಸ್ತಾನವನ್ನು ತೊರೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



