ವಿದೇಶ

ಭಾರತದಲ್ಲಿ LNG, LPG ಪೂರೈಕೆಯಲ್ಲಿ ಕೊರತೆ: ಕತಾರ್ ಇಂಧನ ಸಚಿವರೊಂದಿಗೆ ಹರ್ದೀಪ್ ಸಿಂಗ್ ಪುರಿ ಚರ್ಚೆ; ಇಂಧನ ಸಂಕಷ್ಟಕ್ಕೆ ಮುಕ್ತಿ ಸಿಗುತ್ತಾ?

ಕತಾರ್ ಭಾರತಕ್ಕೆ ವಿಶ್ವಾಸಾರ್ಹ ಇಂಧನ ಪೂರೈಕೆದಾರ ರಾಷ್ಟ್ರವಾಗಿ ಇರಲಿದೆ ಎಂದು ಅವರು ಭರವಸೆ ನೀಡಿದ್ದಾರೆ. ಅಲ್ಲದೇ, ಪಶ್ಚಿಮ ಏಷ್ಯಾದ ಉದ್ವಿಗ್ನತೆಯ ನಡುವೆ ಜಾಗತಿಕ ಮಾರುಕಟ್ಟೆಗಳಲ್ಲಿ ಸ್ಥಿರತೆಗಾಗಿ ಕರೆ ನೀಡಿದ್ದಾರೆ.

ಭಾರತದಲ್ಲಿ  LNG, LPG ಪೂರೈಕೆಯಲ್ಲಿ ಕೊರತೆ: ಕತಾರ್ ಇಂಧನ ಸಚಿವರೊಂದಿಗೆ ಹರ್ದೀಪ್ ಸಿಂಗ್ ಪುರಿ ಚರ್ಚೆ; ಇಂಧನ ಸಂಕಷ್ಟಕ್ಕೆ ಮುಕ್ತಿ ಸಿಗುತ್ತಾ?
ಕತಾರ್ ಇಂಧನ ಸಚಿವರೊಂದಿಗೆ ಹರ್ದೀಪ್ ಸಿಂಗ್ ಪುರಿ ಮಾತುಕತೆ
Published On :

ದೋಹಾ: ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಭಾರತದಲ್ಲಿ ದ್ರವೀಕೃತ ನೈಸರ್ಗಿಕ ಅನಿಲ (LNG) ಪೂರೈಕೆ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕತಾರ್ ಗೆ ಭೇಟಿ ನೀಡಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ, ಅಲ್ಲಿನ ಇಂಧನ ಸಚಿವ ಸಾದ್ ಶೆರಿದಾ ಅಲ್-ಕಾಬಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಈ ವೇಳೆ ಕತಾರ್ ಭಾರತಕ್ಕೆ ವಿಶ್ವಾಸಾರ್ಹ ಇಂಧನ ಪೂರೈಕೆದಾರ ರಾಷ್ಟ್ರವಾಗಿ ಇರಲಿದೆ ಎಂದು ಅವರು ಭರವಸೆ ನೀಡಿದ್ದಾರೆ. ಅಲ್ಲದೇ, ಪಶ್ಚಿಮ ಏಷ್ಯಾದ ಉದ್ವಿಗ್ನತೆಯ ನಡುವೆ ಜಾಗತಿಕ ಮಾರುಕಟ್ಟೆಗಳಲ್ಲಿ ಸ್ಥಿರತೆಗಾಗಿ ಕರೆ ನೀಡಿದ್ದಾರೆ.

ಗಲ್ಫ್ ರಾಷ್ಟ್ರದಲ್ಲಿನ ಉದ್ವಿಗ್ನತೆ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಕತಾರ್ ನಾಯಕರಿಗೆ ಕಳುಹಿಸಿರುವ ಸಂದೇಶದೊಂದಿಗೆ ಹರ್ದೀಪ್ ಸಿಂಗ್ ಪುರಿ ನಿನ್ನೆಯಿಂದ ಎರಡು ದಿನ ಕತಾರ್ ಪ್ರವಾಸದಲ್ಲಿದ್ದಾರೆ ಎಂದು ಭಾರತದ ಸರ್ಕಾರ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.

ಉಭಯ ರಾಷ್ಟ್ರಗಳ ಮುಖಂಡರು ಏಪ್ರಿಲ್ 8 ರಂದು ಘೋಷಣೆಯಾದ ಎರಡು ವಾರಗಳ ಕದನ ವಿರಾಮವನ್ನು ಸ್ವಾಗತಿಸಿದ್ದು, ಜಾಗತಿಕ ಇಂಧನ ಪೂರೈಕೆಯಲ್ಲಿನ ಅಡಚಣೆ ನಿವಾರಣೆ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.

ಸುಗಮ ಪೂರೈಕೆ ಖಾತ್ರಿ ಮತ್ತು ಅಡೆತಡೆಯಿಲ್ಲದ ಹಡಗುಗಳ ಸಂಚಾರದ ಪ್ರಾಮುಖ್ಯತೆಯನ್ನು ಅವರು ಒತ್ತಾಯಿಸಿದ್ದಾರೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ನಡುವೆ ಇಂಧನ ಪೂರೈಕೆಯನ್ನು ಭದ್ರಪಡಿಸಿಕೊಳ್ಳಲು ಭಾರತ ಪ್ರಯತ್ನಿಸುತ್ತಿರುವಾಗ ಹರ್ದೀಪ್ ಸಿಂಗ್ ಪುರಿ ಭೇಟಿ ನೀಡಿದ್ದಾರೆ. ಕತಾರ್ ಭಾರತದ ಏಕೈಕ-ಅತಿದೊಡ್ಡ LNG ಮತ್ತು LPG ಪೂರೈಕೆದಾರ ರಾಷ್ಟ್ರವಾಗಿದ್ದು, ಕ್ರಮವಾಗಿ ಶೇ. 45 ರಷ್ಟು LNG ಮತ್ತು ಶೇ.20 ರಷ್ಟು LPG ಇಂಧನ ಒದಗಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.