Strait of Hormuz: 'ಮುಲಾಜೇ ಇಲ್ಲ, ಅನುಮತಿ ಇಲ್ದೇ ಬಂದ್ರೆ ಹೊಡೆದುರುಳಿಸ್ತೀವಿ'; Iran ಎಚ್ಚರಿಕೆ
ಒಂದೆಡೆ ಲೆಬೆನಾನ್ ಮೇಲೆ ಇಸ್ರೇಲ್ ಸೇನೆ ಇನ್ನಿಲ್ಲದಂತೆ ದಾಳಿ ಮಾಡುತ್ತಿದ್ದು ಕೇವಲ 10 ನಿಮಿಷಗಳ ಅವಧಿಯಲ್ಲಿ 100ಕ್ಕೂ ಕ್ಷಿಪಣಿ ಸಿಡಿಸಿ ಭಾರಿ ಅನಾಹುತವನ್ನೇ ಮಾಡಿದೆ.

ಟೆಹ್ರಾನ್: ಕದನ ವಿರಾಮ ಘೋಷಣೆಯಾಗಿದೆ ಎಂದು ಇಡೀ ಜಗತ್ತು ಖುಷಿ ಪಡ್ತಿದ್ರೆ... ಅದ್ಯಾಕೋ ಇರಾನ್ ಯುದ್ಧ ಸದ್ಯಕ್ಕಂತೂ ನಿಲ್ಲುವ ಲಕ್ಷಣಗಳೇ ಕಾಣ್ತಿಲ್ಲ..
ಹೌದು.. ಅಮೆರಿಕ-ಇಸ್ರೇಲ್ ಮತ್ತು ಇರಾನ್ ಯುದ್ಧಕ್ಕೆ ಕದನ ವಿರಾಮ ಘೋಷಣೆಯಾದ ಮೇಲೂ ಮಧ್ಯಪ್ರಾಚ್ಯದಲ್ಲಿ ಕ್ಷಿಪಣಿ ಮತ್ತು ಬಾಂಬ್ ಗಳ ಸದ್ದು ಕಡಿಮೆಯಾಗ್ತಿಲ್ಲ, ಒಂದೆಡೆ ಲೆಬೆನಾನ್ ಮೇಲೆ ಇಸ್ರೇಲ್ ಸೇನೆ ಇನ್ನಿಲ್ಲದಂತೆ ದಾಳಿ ಮಾಡುತ್ತಿದ್ದು ಕೇವಲ 10 ನಿಮಿಷಗಳ ಅವಧಿಯಲ್ಲಿ 100ಕ್ಕೂ ಕ್ಷಿಪಣಿ ಸಿಡಿಸಿ ಭಾರಿ ಅನಾಹುತವನ್ನೇ ಮಾಡಿದೆ. ಈ ದಾಳಿಯಲ್ಲಿ ಕನಿಷ್ಟ 250 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗ್ತಿದೆ.
ಇದರ ನಡುವೆಯೇ ಬುಧವಾರ, ಇರಾನ್ ನೌಕಾಪಡೆಯು ಹಾರ್ಮುಜ್ ಜಲಸಂಧಿಯ ಬಳಿಯ ಹಡಗುಗಳಿಗೆ ಟೆಹ್ರಾನ್‌ನ ಅನುಮತಿ ಇನ್ನೂ ಅಗತ್ಯವಿದೆ ಎಂದು ತಿಳಿಸಿ ಜಗತ್ತಿಗೆ ಮತ್ತೊಂದು ಶಾಕ್ ನೀಡಿದೆ.
ವಾಲ್ ಸ್ಟ್ರೀಟ್ ಜರ್ನಲ್‌ನ ವರದಿಯ ಪ್ರಕಾರ, ಅನುಮತಿಯಿಲ್ಲದೆ ಹಾರ್ಮುಜ್ ಜಲಸಂಧಿ ಮೂಲಕ ಹಾದುಹೋಗಲು ಪ್ರಯತ್ನಿಸುವ ಯಾವುದೇ ಹಡಗನ್ನು ಇರಾನ್ ಸೇನೆ ಹೊಡೆದುರುಳಿಸಲಿದೆ ಎಂದು ಇರಾನ್ ನೌಕಾಪಡೆಯು ರೇಡಿಯೋ ಮೂಲಕ ಹಡಗುಗಳಿಗೆ ಎಚ್ಚರಿಕೆ ನೀಡಿದೆ ಎಂದು ವರದಿ ಮಾಡಿದೆ.
"ಜಲಸಂಧಿಯ ಮೂಲಕ ಹಾದುಹೋಗಲು ನೀವು ಇರಾನಿನ ಸೆಪಾ ನೌಕಾಪಡೆಯಿಂದ ಅನುಮತಿ ಪಡೆಯಬೇಕು. ಯಾವುದೇ ಹಡಗು ಅನುಮತಿಯಿಲ್ಲದೆ ಸಾಗಲು ಪ್ರಯತ್ನಿಸಿದರೆ, ಅದನ್ನು ನಾಶಪಡಿಸಲಾಗುತ್ತದೆ ಎಂದು ನೌಕೆಗಳಿಗೆ ಎಚ್ಚರಿಕೆ ರವಾನೆ ಮಾಡಲಾಗಿದೆ.
ನಿನ್ನೆಯಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ಸಂಪೂರ್ಣ, ತಕ್ಷಣದ ಮತ್ತು ಸುರಕ್ಷಿತ" ರೀತಿಯಲ್ಲಿ ಜಲಸಂಧಿಯನ್ನು ತೆರೆದರೆ ಮಾತ್ರ ಇಸ್ಲಾಮಿಕ್ ಗಣರಾಜ್ಯದ ಮೇಲಿನ ದಾಳಿಯನ್ನು ಎರಡು ವಾರಗಳವರೆಗೆ ಸ್ಥಗಿತಗೊಳಿಸಲು ಒಪ್ಪಿಕೊಂಡಿದ್ದೇನೆ ಎಂದು ಹೇಳಿದ ನಂತರ ಇರಾನ್ ನಿಂದ ಈ ಎಚ್ಚರಿಕೆ ಸಂದೇಶ ಬಂದಿದೆ.
ಹಾರ್ಮುಜ್ ನಲ್ಲಿ ಟ್ರಾಫಿಕ್ ಜಾಮ್
ಇನ್ನು ಇರಾನ್ ಯುದ್ಧದ ಹಿನ್ನಲೆಯಲ್ಲಿ ಹಾರ್ಮುಜ್ ಜಲಸಂಧಿಯಲ್ಲಿ ಹೆಚ್ಚಿನ ಹಡಗುಗಳು ನಿಂತಿವೆ. ಇರಾನ್ ಇನ್ನೂ ಹಾರ್ಮುಜ್ ಜಲಸಂಧಿಯ ಮೇಲೆ ಪ್ರಭಾವ ಬೀರಲು ಉದ್ದೇಶಿಸಿದೆ ಮತ್ತು ಯುದ್ಧವಿಮಾನಗಳು ಇನ್ನೂ ಪರ್ಷಿಯನ್ ಕೊಲ್ಲಿಯ ಮೇಲೆ ಇವೆ ಎಂದು ಸಿಬ್ಬಂದಿ ಹಂಚಿಕೊಂಡ ಫೋಟೋಗಳು ಮತ್ತು ವೀಡಿಯೊಗಳ ಪ್ರಕಾರ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಇರಾನ್ ಮತ್ತು ಒಮನ್ ನಡುವೆ ಕೇವಲ 34 ಕಿಲೋಮೀಟರ್ (21 ಮೈಲುಗಳು) ಅಗಲವಿರುವ ಈ ಜಲಸಂಧಿಯು ಕೊಲ್ಲಿಯಿಂದ ಹಿಂದೂ ಮಹಾಸಾಗರಕ್ಕೆ ಸಾಗಣೆಯನ್ನು ಒದಗಿಸುತ್ತದೆ ಮತ್ತು ಇದು ವಿಶ್ವದ ತೈಲ ಪೂರೈಕೆಯ ಐದನೇ ಒಂದು ಭಾಗ ಮತ್ತು ರಸಗೊಬ್ಬರ ಸೇರಿದಂತೆ ಇತರ ಪ್ರಮುಖ ಸರಕುಗಳಿಗೆ ಪ್ರಮುಖ ಮಾರ್ಗವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



