ವಿದೇಶ

ಪೆಟ್ರೋಲ್ ದರ ಮತ್ತೆ ಗಗನಕ್ಕೆ; ಲೀಟರ್ ಗೆ 458 ರೂ, ಡೀಸೆಲ್ 520 ರೂ ಗೆ ಏರಿಕೆ; ಸಂಯಮ ವಹಿಸಿ ಎಂದ ಮಾಜಿ ಕ್ರಿಕೆಟಿಗ!

ಈಗಾಗಲೇ ಪಾಕಿಸ್ತಾನದಲ್ಲಿ ಇಂಧನ ದರ ದುಬಾರಿಯಾಗಿದ್ದು, ಇದೀಗ ಇರಾನ್ ಯುದ್ಧದ ನಡುವೆ ಮತ್ತೆ ದರ ದುಬಾರಿಯಾಗಿದೆ.

ಪೆಟ್ರೋಲ್ ದರ ಮತ್ತೆ ಗಗನಕ್ಕೆ; ಲೀಟರ್ ಗೆ 458 ರೂ, ಡೀಸೆಲ್ 520 ರೂ ಗೆ ಏರಿಕೆ; ಸಂಯಮ ವಹಿಸಿ ಎಂದ ಮಾಜಿ ಕ್ರಿಕೆಟಿಗ!
ಪೆಟ್ರೋಲ್ ಡೀಸೆಲ್ ದರ ಏರಿಕೆ (ಸಾಂದರ್ಭಿಕ ಚಿತ್ರ)
Published On :

ಲಾಹೋರ್: ಇರಾನ್ ಯುದ್ಧದ ನಡುವೆಯೇ ಜಾಗತಿಕವಾಗಿ ಇಂಧನ ಪೂರೈಕೆ ಮೇಲೆ ಗಂಭೀರ ಪರಿಣಾಮಗಳು ಎದುರಾಗುತ್ತಿದ್ದು, ನೆರೆಯ ಪಾಕಿಸ್ತಾನದಲ್ಲಿ ತೈಲೋತ್ಪನ್ನಗಳ ದರಗಳು ಗಗನಕ್ಕೇರಿವೆ.

ಈಗಾಗಲೇ ಪಾಕಿಸ್ತಾನದಲ್ಲಿ ಇಂಧನ ದರ ದುಬಾರಿಯಾಗಿದ್ದು, ಇದೀಗ ಇರಾನ್ ಯುದ್ಧದ ನಡುವೆ ಮತ್ತೆ ದರ ದುಬಾರಿಯಾಗಿದೆ. ಮೂಲಗಳ ಪ್ರಕಾರ ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ ಶೇ.42.7 ರಷ್ಟು ಅಂದರೆ 137.24 ರೂ ಏರಿಕೆಯಾಗಿ 458.40 ರೂಗೆ ಹೆಚ್ಚಳವಾಗಿದೆ.

ಅಂತೆಯೇ ಡೀಸೆಲ್ ದರದಲ್ಲಿ ಕೂಡ ಶೇ.54.9ರಷ್ಟು ಅಂದರೆ 184.49ರೂ ಏರಿಕೆಯಾಗಿ 520.35 pkrಗೆ ಹೆಚ್ಚಳವಾಗಿದೆ.

ಈಗಾಗಲೇ ದಿನಬಳಕೆ ವಸ್ತುಗಳ ದರ ಏರಿಕೆಯಿಂದಾಗಿ ಹೈರಾಣಾಗಿರುವ ಪಾಕಿಸ್ತಾನದಲ್ಲಿ ಮತ್ತೆ ತೈಲೋತ್ಪನ್ನಗಳ ದರ ಏರಿಕೆ ಗಾಯದ ಮೇಲೆ ಬರೆಯಂತಾಗಿದೆ. ಇದು ಮತ್ತೆ ದಿನಬಳಕೆ ವಸ್ತುಗಳ ದರ ಏರಿಕೆಗೆ ಕಾರಣವಾಗುವ ಸಾಧ್ಯತೆ ಇದೆ.

ಸಂಯಮ ವಹಿಸಿ ಎಂದ ಶಾಹಿದ್ ಅಫ್ರಿದಿ

ಇನ್ನು ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ವಿಚಾರವಾಗಿ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಪಾಕ್ ಮಾಜಿ ಕ್ರಿಕೆಟಿಗ ಶಾಹಿಗ್ ಆಫ್ರಿದಿ, 'ಜಾಗತಿಕ ಇಂಧನ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಷ್ಟ್ರೀಯ ಏಕತೆಯ ಮಹತ್ವವನ್ನು ಒತ್ತಿ ಹೇಳುತ್ತಾ, ಸರ್ಕಾರವನ್ನು ಬೆಂಬಲಿಸುವಂತೆ ನಾಗರಿಕರಿಗೆ ಕರೆ ನೀಡಿದ್ದಾರೆ.

'ಯುದ್ಧದ ಕಾರಣದಿಂದಾಗಿ, ಜಗತ್ತು ಈಗ ಇಂಧನ ಬಿಕ್ಕಟ್ಟು ಎದುರಿಸುತ್ತಿದೆ. ದೇವರ ಕೃಪೆ ಪಾಕಿಸ್ತಾನ ಇನ್ನೂ ಅನೇಕ ದೇಶಗಳಿಗಿಂತ ಉತ್ತಮ ಸ್ಥಿತಿಯಲ್ಲಿದೆ. ಸರ್ಕಾರವನ್ನು ಬೆಂಬಲಿಸುವುದು ಮತ್ತು ಅವರಿಗೆ ಬೆಂಬಲ ನೀಡುವುದು ಅತ್ಯಂತ ಮುಖ್ಯವಾದ ವಿಷಯ.

ಪಾಕಿಸ್ತಾನಿಗಳಾಗಿ, ದೇಶದ ಪ್ರಗತಿಗೆ ಯಾವುದೇ ಅಡ್ಡಿಯಾಗದಂತೆ ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ಅನುಸರಿಸಲು ನಾವು ಪ್ರಯತ್ನಿಸಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.