ವಿದೇಶ

Sudan: ವಿನಾಶಕಾರಿ ಭೂಕುಸಿತದಲ್ಲಿ 1,000 ಕ್ಕೂ ಹೆಚ್ಚು ಮಂದಿ ಸಾವು- ಸೇನೆ

ಪ್ರಾಥಮಿಕ ಮಾಹಿತಿ ಪ್ರಕಾರ ಹಳ್ಳಿಯ ನಿವಾಸಿಗಳು ಸಾವನ್ನಪ್ಪಿದ್ದು, ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕೇವಲ ಓರ್ವ ವ್ಯಕ್ತಿ ಮಾತ್ರ ಬದುಕುಳಿದಿದ್ದಾರೆ.

Sudan: ವಿನಾಶಕಾರಿ ಭೂಕುಸಿತದಲ್ಲಿ 1,000 ಕ್ಕೂ ಹೆಚ್ಚು ಮಂದಿ ಸಾವು- ಸೇನೆ
ಭೂ ಕುಸಿತ ಸಂಭವಿಸಿದ ಸ್ಥಳದ ಚಿತ್ರ
Published On :

ಸುಡಾನ್: ಸುಡಾನ್‌ನ ಪಶ್ಚಿಮ ಡಾರ್ಫುರ್ ಪ್ರದೇಶದಲ್ಲಿ ಸಂಭವಿಸಿದ ಭಾರಿ ಭೂಕುಸಿತದಲ್ಲಿ ಇಡೀ ಹಳ್ಳಿಯೇ ನಾಶವಾಗಿದ್ದು, 1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಆ ಪ್ರದೇಶವನ್ನು ನಿಯಂತ್ರಿಸುವ ಬಂಡುಕೋರರ ಗುಂಪು ಸೋಮವಾರ ತಡರಾತ್ರಿ ತಿಳಿಸಿದೆ.

ಭಾರೀ ಮಳೆಯ ನಂತರ ಭಾನುವಾರ ಸಂಭವಿಸಿದ ಈ ದುರಂತದಲ್ಲಿ ಮರ್ರಾ ಪರ್ವತ ಪ್ರದೇಶದಲ್ಲಿರುವ ತಾರಾಸಿನ್ ಗ್ರಾಮ ನಾಶವಾಗಿದೆ ಎಂದು ಸುಡಾನ್ ವಿಮೋಚನಾ ಸೇನೆ (SLM)ಹೇಳಿಕೆಯಲ್ಲಿ ತಿಳಿಸಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ ಹಳ್ಳಿಯ ನಿವಾಸಿಗಳು ಸಾವನ್ನಪ್ಪಿದ್ದು, ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕೇವಲ ಓರ್ವ ವ್ಯಕ್ತಿ ಮಾತ್ರ ಬದುಕುಳಿದಿದ್ದಾರೆ.

ಸಿಟ್ರಸ್ ಉತ್ಪಾದನೆಗೆ ಹೆಸರುವಾಸಿಯಾದ ಪ್ರದೇಶ ವಿನಾಶಕಾರಿ ಭೂ ಕುಸಿತದಿಂದ ನಾಶವಾಗಿದೆ SLM ಹೇಳಿದೆ. ಅವಶೇಷಗಳಡಿ ಸಿಲುಕಿರುವವರ ರಕ್ಷಣೆಗಾಗಿ ವಿಶ್ವಸಂಸ್ಥೆ ಮತ್ತಿತರ ಸಂಸ್ಥೆಗಳಿಗೆ ಮನವಿ ಮಾಡಿದೆ.

ಸೂಡಾನ್ ಸೇನೆ ಮತ್ತು ಕ್ಷಿಪ್ರ ಅರೆಸೈನಿಕ ಪಡೆಗಳ (RSF)ನಡುವಿನ ರಕ್ತಸಿಕ್ತ ಅಂತರ್ಯುದ್ಧದಲ್ಲಿ ಸಿಲುಕಿಕೊಂಡಿದ್ದು, ಇದು ದೇಶವನ್ನು ವಿಶ್ವದ ಅತ್ಯಂತ ಕೆಟ್ಟ ಮಾನವೀಯ ಬಿಕ್ಕಟ್ಟಿನಲ್ಲಿ ಸಿಲುಕಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.