ವಿದೇಶ

ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ: ನಾಲ್ವರು ಸಾವು, 10 ಮಂದಿಗೆ ಗಾಯ

ಬಲಿಯಾದವರಲ್ಲಿ ಮಕ್ಕಳು ಮತ್ತು ವಯಸ್ಕರು ಸೇರಿದ್ದಾರೆ ಎಂದು ಸ್ಯಾನ್ ಜೋಕ್ವಿನ್ ಕೌಂಟಿ ಶೆರಿಫ್ ಕಚೇರಿಯ ವಕ್ತಾರ ಹೀದರ್ ಬ್ರೆಂಟ್ ಹೇಳಿದ್ದಾರೆ. ಕುಟುಂಬವನ್ನು ಟಾರ್ಗೆಟ್ ಮಾಡಿ ನಡೆದ ದಾಳಿ

ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ: ನಾಲ್ವರು ಸಾವು, 10 ಮಂದಿಗೆ ಗಾಯ
Published On :

ಕ್ಯಾಲಿಫೋರ್ನಿಯಾ: ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ ನಡೆದಿದೆ. ಸ್ಟಾಕ್ಟನ್‌ನ ಬ್ಯಾಂಕ್ವೆಟ್ ಹಾಲ್ ವೊಂದರಲ್ಲಿ ಸೇರಿದ ಕುಟುಂಬವೊಂದರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಜನರು ಸಾವನ್ನಪ್ಪಿದ್ದು, 10 ಜನರು ಗಾಯಗೊಂಡಿದ್ದಾರೆ ಎಂದು ಶೆರಿಫ್ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಬಲಿಯಾದವರಲ್ಲಿ ಮಕ್ಕಳು ಮತ್ತು ವಯಸ್ಕರು ಸೇರಿದ್ದಾರೆ ಎಂದು ಸ್ಯಾನ್ ಜೋಕ್ವಿನ್ ಕೌಂಟಿ ಶೆರಿಫ್ ಕಚೇರಿಯ ವಕ್ತಾರ ಹೀದರ್ ಬ್ರೆಂಟ್ ಹೇಳಿದ್ದಾರೆ. ಕುಟುಂಬವನ್ನು ಟಾರ್ಗೆಟ್ ಮಾಡಿ ನಡೆದ ದಾಳಿ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಶಂಕಿತ ಶೂಟರ್ ಪರಾರಿಯಾಗಿದ್ದಾನೆ. ಆತನನ್ನು ಹುಡುಕಲಾಗುತ್ತಿದೆ. ಶಂಕಿತನ ಬಗ್ಗೆ ಯಾವುದೇ ಮಾಹಿತಿ ಇದ್ದರೆ, ತಕ್ಷಣ ಸಂಪರ್ಕಿಸಿ ಎಂದು ಸ್ಯಾನ್ ಜೋಕ್ವಿನ್ ಕೌಂಟಿ ಜಿಲ್ಲಾ ಅಟಾರ್ನಿ ರಾನ್ ಫ್ರೀಟಾಸ್ ತಿಳಿಸಿದ್ದಾರೆ.

ಔತಣಕೂಟಕ್ಕೆ ಸೇರಿದ ಕುಟುಂಬವೊಂದರ ಮೇಲೆ ಶನಿವಾರ ಸಂಜೆ 6 ಗಂಟೆಗೂ ಮುನ್ನಾ ಗುಂಡಿನ ದಾಳಿ ನಡೆದಿದೆ. ಸ್ಟಾಕ್ಟನ್ ನಗರವು ಸ್ಯಾಕ್ರಮೆಂಟೊದಿಂದ ದಕ್ಷಿಣಕ್ಕೆ ಸುಮಾರು 40 ಮೈಲಿ (64 ಕಿಲೋಮೀಟರ್) ದೂರದಲ್ಲಿದ್ದು, 320,000 ಜನಸಂಖ್ಯೆಯನ್ನು ಹೊಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.