ವಿದೇಶ

ಅಜಾಗರೂಕತೆಯಿಂದ ಗಡಿ 'ದಾಟಿದ' ಭಾರತೀಯನನ್ನು ಬಂಧಿಸಿದ ಪಾಕಿಸ್ತಾನ

ಅಸ್ಸಾಂನ 31 ವರ್ಷದ ಭಾರತೀಯ ಪ್ರಜೆ ಬಿಜೆ ಸಿಂಗ್ ಅವರನ್ನು ಆಗಸ್ಟ್ 16 ರಂದು ಭಾರತದ ಬಚನ್ ಸಿಂಗ್ ಪೋಸ್ಟ್ ಎದುರಿನ ಅಜ್ಮಲ್ ಶಹೀದ್ ಪೋಸ್ಟ್ ಬಳಿ ಪಾಕಿಸ್ತಾನ ಪ್ರವೇಶಿಸಿದ್ದಕ್ಕಾಗಿ ಬಂಧಿಸಲಾಗಿದೆ.

ಅಜಾಗರೂಕತೆಯಿಂದ ಗಡಿ 'ದಾಟಿದ' ಭಾರತೀಯನನ್ನು ಬಂಧಿಸಿದ ಪಾಕಿಸ್ತಾನ
ಪಾಕ್- ಭಾರತ ಗಡಿ ಚಿತ್ರ
Published On :

ಲಾಹೋರ್‌: ಪಾಕಿಸ್ತಾನದ ಪಂಜಾಬ್ ಪೊಲೀಸರು, "ಅಜಾಗರೂಕತೆಯಿಂದ" ತಮ್ಮ ದೇಶ ಗಡಿ ದಾಟಿದ ಭಾರತೀಯ ಪ್ರಜೆಯನ್ನು ಬಂಧಿಸಿರುವುದಾಗಿ ಶನಿವಾರ ಹೇಳಿಕೊಂಡಿದ್ದಾರೆ.

ಪಾಕಿಸ್ತಾನ ರೇಂಜರ್‌ಗಳಿಂದ 100 ದಿನಗಳಿಗೂ ಹೆಚ್ಚು ಕಾಲ ಯಾವುದೇ ಕಾನೂನು ವಿಧಿವಿಧಾನಗಳಿಲ್ಲದೆ ಭಾರತೀಯ ಪ್ರಜೆಯನ್ನು ಬಂಧನದಲ್ಲಿರಸಲಾಗಿದೆ.

ಪೊಲೀಸರ ಪ್ರಕಾರ, ಅಸ್ಸಾಂನ 31 ವರ್ಷದ ಭಾರತೀಯ ಪ್ರಜೆ ಬಿಜೆ ಸಿಂಗ್ ಅವರನ್ನು ಆಗಸ್ಟ್ 16 ರಂದು ಭಾರತದ ಬಚನ್ ಸಿಂಗ್ ಪೋಸ್ಟ್ ಎದುರಿನ ಅಜ್ಮಲ್ ಶಹೀದ್ ಪೋಸ್ಟ್ ಬಳಿ ಪಾಕಿಸ್ತಾನ ಪ್ರವೇಶಿಸಿದ್ದಕ್ಕಾಗಿ ಬಂಧಿಸಲಾಗಿದೆ.

ಭಾರತ-ಪಾಕಿಸ್ತಾನ ಗಡಿ ಬಳಿ ರೇಂಜರ್ಸ್ ಸಿಬ್ಬಂದಿ ಅವರನ್ನು ಬಂಧಿಸಿ ಮೂರು ತಿಂಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಂಗ್‌ನಿಂದ ಅನುಮಾನಾಸ್ಪದವಾದ ಯಾವುದೇ ವಸ್ತು ಪತ್ತೆಯಾಗದ ನಂತರ ಈ ವಾರ ಲಾಹೋರ್‌ನಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಕಸೂರ್‌ನಲ್ಲಿರುವ ಸದ್ದಾರ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು ಎಂದು ಅವರು ಹೇಳಿದ್ದಾರೆ.

ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ತಂದೆ ಬರ್ಶನ್ ಸಿಂಗ್ ಅವರೊಂದಿಗೆ ಜಗಳವಾಡಿದ ನಂತರ ಸಿಂಗ್ ಮನೆ ಬಿಟ್ಟು ಹೊರಬಂದಿದ್ದಾರೆ ಎಂದು ವರದಿಯಾಗಿದೆ.

ಅಕ್ರಮವಾಗಿ ಪಾಕಿಸ್ತಾನ ಪ್ರವೇಶಿಸಿದ್ದಕ್ಕಾಗಿ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.