ಎರಡನೇ ಅವಧಿಗೆ ಆಸ್ಟ್ರೇಲಿಯಾ ಪ್ರಧಾನಿಯಾಗಿ ಆಂಥೋನಿ ಅಲ್ಬನೀಸ್ ಆಯ್ಕೆ
ವಿರೋಧ ಪಕ್ಷದ ನಾಯಕ ಪೀಟರ್ ಡಟ್ಟನ್ ಶನಿವಾರದ ಚುನಾವಣೆಯಲ್ಲಿ ಸೋಲು ಒಪ್ಪಿಕೊಂಡಿದ್ದು, "ಈ ಪ್ರಚಾರದ ಸಮಯದಲ್ಲಿ ನಾವು ಸಾಕಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಲಿಲ್ಲ ಎಂದಿದ್ದಾರೆ.

ಮೆಲ್ಬೋರ್ನ್: ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಕಳೆದ 21 ವರ್ಷಗಳಲ್ಲಿ ಸತತ ಎರಡನೇ ಮೂರು ವರ್ಷಗಳ ಅವಧಿಗೆ ಭರ್ಜರಿ ಗೆಲುವು ಸಾಧಿಸಿದ ಆಸ್ಟ್ರೇಲಿಯಾದ ಮೊದಲ ಪ್ರಧಾನಿಯಾಗಿದ್ದಾರೆ.
ವಿರೋಧ ಪಕ್ಷದ ನಾಯಕ ಪೀಟರ್ ಡಟ್ಟನ್ ಶನಿವಾರದ ಚುನಾವಣೆಯಲ್ಲಿ ಸೋಲು ಒಪ್ಪಿಕೊಂಡಿದ್ದು, "ಈ ಪ್ರಚಾರದ ಸಮಯದಲ್ಲಿ ನಾವು ಸಾಕಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಲಿಲ್ಲ, ಇಂದು ರಾತ್ರಿ ಅದು ಸ್ಪಷ್ಟವಾಗಿದೆ ಮತ್ತು ಅದನ್ನು ನಾನು ಸಂಪೂರ್ಣ ಸ್ವೀಕರಿಸುತ್ತೇನೆ" ಎಂದು ಹೇಳಿದ್ದಾರೆ.
"ಇದಕ್ಕೂ ಮೊದಲು, ಗೆಲುವು ಸಾಧಿಸಿದ ಪ್ರಧಾನಿ ಅಂಥೋನಿ ಅವರನ್ನು ಅಭಿನಂದಿಸಲು ನಾನು ಅವರಿಗೆ ಕರೆ ಮಾಡಿದೆ. ಇದು ಲೇಬರ್ ಪಕ್ಷಕ್ಕೆ ಐತಿಹಾಸಿಕ ಸಂದರ್ಭವಾಗಿದೆ ಮತ್ತು ನಾವು ಅದನ್ನು ಗುರುತಿಸುತ್ತೇವೆ" ಎಂದು ತಿಳಿಸಿದ್ದಾರೆ.
ಆಸ್ಟ್ರೇಲಿಯನ್ ಚುನಾವಣಾ ಆಯೋಗದ ಆರಂಭಿಕ ಮುನ್ಸೂಚನೆಗಳು, 150 ಸ್ಥಾನಗಳ ಪೈಕಿ ಆಡಳಿತಾರೂಢ ಲೇಬರ್ ಪಕ್ಷಕ್ಕೆ 70 ಸ್ಥಾನಗಳು ಮತ್ತು ಸಂಪ್ರದಾಯವಾದಿ ವಿರೋಧ ಪಕ್ಷದ ಒಕ್ಕೂಟಕ್ಕೆ 24 ಸ್ಥಾನಗಳನ್ನು ನೀಡಲಾಗಿದೆ. ಅಲಿಪ್ತ ಸಣ್ಣ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು 13 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ.
ಹಿರಿಯ ಸಚಿವ ಜಿಮ್ ಚಾಲ್ಮರ್ಸ್ ಅವರು ಆರಂಭಿಕ ಫಲಿತಾಂಶಗಳು ರಾಷ್ಟ್ರದಾದ್ಯಂತ ವಿಭಿನ್ನ ಫಲಿತಾಂಸ ಬರುತ್ತಿದ್ದು, ಶನಿವಾರ ಫಲಿತಾಂಶ ಹೊರಬೀಳುವ ಸಾಧ್ಯತೆ ತೀರಾ ಕಡಿಮೆ ಎಂದಿದ್ದಾರೆ.
ಆಸ್ಟ್ರೇಲಿಯಾದ ಚುನಾವಣಾ ಆಯೋಗವು ಮತಗಳ ಎಣಿ ಪೂರ್ಣಗೊಳಿಸುತ್ತಿದ್ದಂತೆ ಪ್ರಧಾನಿ ಆಂಥೋನಿ ಅಲ್ಬನೀಸ್ ಮತ್ತು ವಿರೋಧ ಪಕ್ಷದ ನಾಯಕ ಪೀಟರ್ ಡಟ್ಟನ್ ಅವರು ಸಿಡ್ನಿ ಮತ್ತು ಬ್ರಿಸ್ಬೇನ್‌ನಲ್ಲಿ ಪಕ್ಷದ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


