Terrorist Attack: 'ಜೂನ್ ಒಂದೇ ತಿಂಗಳಲ್ಲಿ 78 ಉಗ್ರ ದಾಳಿ, 94 ಮಂದಿ ಸಾವು': Pakistan ಗೆ ಮತ್ತೆ ಜಾಗತಿಕ ಮುಜುಗರ!
ಈ ವರ್ಷದ ಜೂನ್ ಒಂದೇ ತಿಂಗಳಿನಲ್ಲಿ ಪಾಕಿಸ್ತಾನದಾದ್ಯಂತ ಬರೊಬ್ಬರಿ 78 ಭಯೋತ್ಪಾದಕ ದಾಳಿಗಳು ನಡೆದಿದ್ದು, ಈ ದಾಳಿಗಳಲ್ಲಿ 53 ಭದ್ರತಾ ಸಿಬ್ಬಂದಿ ಸೇರಿದಂತೆ ಕನಿಷ್ಠ 94 ಜನರು ಸಾವನ್ನಪ್ಪಿದ್ದಾರೆ.

ಲಾಹೋರ್: ಭಯೋತ್ಪಾದನೆ ವಿಚಾರವಾಗಿ ಸದಾಕಾಲಾ ಭಾರತದೊಂದಿಗೆ ಸಂಘರ್ಷಕ್ಕಿಳಿಯುವ ಪಾಕಿಸ್ತಾನಕ್ಕೆ ಅದೇ ಭಯೋತ್ಪಾದನೆ ಜಾಗತಿಕ ಮುಜುಗರ ತಂದೊಡ್ಡಿದೆ.
ಹೌದು.. ಮಂಗಳವಾರ ಬಿಡುಗಡೆಯಾದ ಹೊಸ ವರದಿಯ ಪ್ರಕಾರ, ಈ ವರ್ಷದ ಜೂನ್ ಒಂದೇ ತಿಂಗಳಿನಲ್ಲಿ ಪಾಕಿಸ್ತಾನದಾದ್ಯಂತ ಬರೊಬ್ಬರಿ 78 ಭಯೋತ್ಪಾದಕ ದಾಳಿಗಳು ನಡೆದಿದ್ದು, ಈ ದಾಳಿಗಳಲ್ಲಿ 53 ಭದ್ರತಾ ಸಿಬ್ಬಂದಿ ಸೇರಿದಂತೆ ಕನಿಷ್ಠ 94 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಇಸ್ಲಾಮಾಬಾದ್ ಮೂಲದ ಚಿಂತಕರ ಚಾವಡಿ 'ಪಾಕಿಸ್ತಾನ ಸಂಘರ್ಷ ಮತ್ತು ಭದ್ರತಾ ಅಧ್ಯಯನ ಸಂಸ್ಥೆ (PICSS)' ಬಿಡುಗಡೆ ಮಾಡಿದ ಮಾಸಿಕ ಭದ್ರತಾ ವರದಿಯ ಪ್ರಕಾರ, 2025 ರ ಜನವರಿಯಿಂದ ಜೂನ್ ವರೆಗೆ ದೇಶಾದ್ಯಂತ 502 ಭಯೋತ್ಪಾದಕ ದಾಳಿಗಳು ಸಂಭವಿಸಿದ್ದು, ಒಟ್ಟು 737 ಸಾವುಗಳು ಸಂಭವಿಸಿವೆ ಎಂದು ಮಾಹಿತಿ ಹೊರ ಹಾಕಿದೆ.
ಈ ಪೈಕಿ ಅಂದರೆ ಮೃತರಲ್ಲಿ 284 ಭದ್ರತಾ ಪಡೆ ಸಿಬ್ಬಂದಿ ಮತ್ತು 273 ನಾಗರಿಕರು ಸೇರಿದ್ದಾರೆ. ಜೂನ್ ತಿಂಗಳಲ್ಲಿ ಮಾತ್ರವೇ ಗರಿಷ್ಠ ಅಂದರೆ 78 ಭಯೋತ್ಪಾದಕ ದಾಳಿಗಳು ನಡೆದಿದ್ದು, ಈ ಪೈಕಿ 53 ಭದ್ರತಾ ಸಿಬ್ಬಂದಿ, 39 ನಾಗರಿಕರು ಮತ್ತು ಶಾಂತಿ ಸಮಿತಿಗಳ 2 ಸದಸ್ಯರು ಸಾವನ್ನಪ್ಪಿದ್ದಾರೆ. ಇದಲ್ಲದೆ ಹೆಚ್ಚುವರಿಯಾಗಿ, 126 ಭದ್ರತಾ ಸಿಬ್ಬಂದಿ ಮತ್ತು 26 ನಾಗರಿಕರು ಸೇರಿದಂತೆ 189 ವ್ಯಕ್ತಿಗಳು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಗನ್, ಬಾಂಬ್ಗಳು-ಈಗ ಮಾದಕ ವಸ್ತುಗಳು? ಹಸಿದ ಪ್ಯಾಲೇಸ್ತೀನಿಯರಿಗೆ ಮಾರಕ ಡ್ರಗ್ಸ್ ಬೆರೆಸಿದ ಆಹಾರ ಪೂರೈಸಿದ ಇಸ್ರೇಲ್?
ಹೆಚ್ಚುತ್ತಿರುವ ಹಿಂಸಾಚಾರಕ್ಕೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನಿ ಭದ್ರತಾ ಪಡೆಗಳು ಜೂನ್‌ನಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿದ್ದವು. ಪರಿಣಾಮ ಈ ಕಾರ್ಯಾಚರಣೆಯಲ್ಲಿ 71 ಉಗ್ರರು ಸಾವನ್ನಪ್ಪಿದ್ದಾರೆ. ಈ ಕಾರ್ಯಾಚರಣೆಯಲ್ಲಿ 2 ಭದ್ರತಾ ಸಿಬ್ಬಂದಿ ಮತ್ತು 2 ನಾಗರಿಕರು ಸಾವನ್ನಪ್ಪಿದ್ದರು.
52 ಉಗ್ರರ ಬಂಧನ
ಅಂತೆಯೇ ಇದೇ ಕಾರ್ಯಾಚರಣೆಗಳಲ್ಲಿ, 10 ಉಗ್ರರು ಮತ್ತು 5 ನಾಗರಿಕರು ಗಾಯಗೊಂಡಿದ್ದು, ಜೂನ್‌ನಲ್ಲಿ 52 ಶಂಕಿತ ಉಗ್ರರನ್ನು ಬಂಧಿಸಲಾಯಿತು, ಮುಖ್ಯವಾಗಿ ಖೈಬರ್ ಪಖ್ತುನ್ಖ್ವಾದ ಮಧ್ಯ ಪ್ರದೇಶಗಳಿಂದ ಹೆಚ್ಚು ಉಗ್ರರನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ. ಜೂನ್‌ನಲ್ಲಿ ಉಗ್ರಗಾಮಿ ದಾಳಿಗಳು ಮತ್ತು ಭದ್ರತಾ ಕಾರ್ಯಾಚರಣೆಗಳನ್ನು ಒಳಗೊಂಡಂತೆ ಒಟ್ಟು 175 ಸಾವುನೋವುಗಳು ಸಂಭವಿಸಿವೆ. ಈ ಪೈಕಿ 55 ಭದ್ರತಾ ಸಿಬ್ಬಂದಿ, 77 ಉಗ್ರರು, 41 ನಾಗರಿಕರು ಮತ್ತು 2 ಶಾಂತಿ ಸಮಿತಿ ಸದಸ್ಯರು ಸೇರಿದ್ದಾರೆ ಎಂದು ಅದು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


