ಸುಡಾನ್ ಮಿಲಿಟರಿ ವಿಮಾನ ಅಪಘಾತ: ಸೇನಾ ಅಧಿಕಾರಿಗಳು, ನಾಗರಿಕರು ಸೇರಿದಂತೆ 10 ಜನರ ಸಾವು
ಸೇನಾ ವಿಮಾನವು ವಾಯು ನೆಲೆಯಿಂದ ಟೇಕ್ ಆಫ್ ಆಗುವ ಸಮಯದಲ್ಲಿ ಪತನಗೊಂಡಿದ್ದು, ಸೇನಾ ಸಿಬ್ಬಂದಿ, ನಾಗರಿಕರು ಸಾವನ್ನಪ್ಪಿದ್ದಾರೆ.

ಖಾರ್ಟೂಮ್: ರಾಜಧಾನಿ ಖಾರ್ಟೂಮ್‌ನ ಹೊರವಲಯದಲ್ಲಿ ಮಂಗಳವಾರ ಸೂಡಾನ್ ಮಿಲಿಟರಿ ವಿಮಾನವೊಂದು ಪತನಗೊಂಡಿದ್ದು, ಹಲವಾರು ಅಧಿಕಾರಿಗಳು,ನಾಗರಿಕರು ಸೇರಿದಂತೆ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಎಂದು ಸೇನೆ ಹೇಳಿದೆ.
ಸೇನಾ ವಿಮಾನವು ವಾಯು ನೆಲೆಯಿಂದ ಟೇಕ್ ಆಫ್ ಆಗುವ ಸಮಯದಲ್ಲಿ ಪತನಗೊಂಡಿದ್ದು, ಸೇನಾ ಸಿಬ್ಬಂದಿ, ನಾಗರಿಕರು ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಗ್ನಿಶಾಮಕ ತಂಡಗಳು ಅಪಘಾತದ ಸ್ಥಳದಲ್ಲಿ ಬೆಂಕಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ" ಎಂದು ಸೇನೆ ತಡರಾತ್ರಿ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ.
ತಾಂತ್ರಿಕ ದೋಷದಿಂದ ಆಂಟೊನೊವ್ ವಿಮಾನ ಪತನವಾಗಿರುವುದಾಗಿ ಮಿಲಿಟರಿ ಮೂಲವೊಂದು ಈ ಹಿಂದೆ ಸುದ್ದಿಸಂಸ್ಥೆ ಎಎಫ್‌ಪಿಗೆ ತಿಳಿಸಿತ್ತು.
ವಾಡಿ ಸೀಡ್ನಾ ವಾಯುನೆಲೆಯ ಬಳಿ ಅಪಘಾತ ಸಂಭವಿಸಿದೆ. ಇದು ಒಮ್ದುರ್ಮನ್‌ನಲ್ಲಿರುವ ಸೇನೆಯ ಅತಿದೊಡ್ಡ ಸೇನಾ ಕೇಂದ್ರಗಳಲ್ಲಿ ಒಂದಾಗಿದೆ.
ಸುಡಾನ್‌ನಾದ್ಯಂತ ನೆರವು ನೀಡುವ ಸ್ವಯಂಸೇವಕರನ್ನು ಹೊಂದಿರುವ ಕರಾರಿ ರೆಸಿಸ್ಟೆನ್ಸ್ ಕಮಿಟಿ, 10 ಮೃತದೇಹಗಳು ಮತ್ತು ಗಾಯಾಳುಗನ್ನು ಓಮ್‌ಡುರ್‌ಮನ್‌ನಲ್ಲಿರುವ ಅಲ್-ನಾವೊ ಆಸ್ಪತ್ರೆಗೆ ದಾಖಲಿಸಿರುವುದಾಗಿ ವರದಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


