ವಿದೇಶ

New York ಭೀಕರ ರಸ್ತೆ ಅಪಘಾತ: ಭಾರತೀಯರ ಹೊತ್ತೊಯ್ಯುತ್ತಿದ್ದ ಪ್ರವಾಸಿ ಬಸ್ ಉರುಳಿಬಿದ್ದು ಐವರು ದುರ್ಮರಣ..!

ನಯಾಗರಾ ಜಲಪಾತವನ್ನು ವೀಕ್ಷಿಸಿದ ನಂತರ ಪ್ರವಾಸಿಗರು ನ್ಯೂಯಾರ್ಕ್ ನಗರಕ್ಕೆ ಹಿಂತಿರುಗುತ್ತಿದ್ದಾಗ ಬಫಲೋದಿಂದ ಪೂರ್ವಕ್ಕೆ 25 ಮೈಲಿ (40 ಕಿಲೋಮೀಟರ್) ದೂರದಲ್ಲಿ ದುರ್ಘಟನೆ ಸಂಭವಿಸಿದೆ.

New York ಭೀಕರ ರಸ್ತೆ ಅಪಘಾತ: ಭಾರತೀಯರ ಹೊತ್ತೊಯ್ಯುತ್ತಿದ್ದ ಪ್ರವಾಸಿ ಬಸ್ ಉರುಳಿಬಿದ್ದು ಐವರು ದುರ್ಮರಣ..!
ಅಪಘಾತದ ಸ್ಥಳದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆ
Published On :

ನ್ಯೂಯಾರ್ಕ್: ನ್ಯೂಯಾರ್ಕ್'ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಭಾರತೀಯರು ಸೇರಿದಂತೆ 54 ಜನರನ್ನು ಹೊತ್ತೊಯ್ಯುತ್ತಿದ್ದ ಪ್ರವಾಸಿ ಬಸ್ಸೊಂದು ಉರುಳಿಬಿದ್ದು ಐವರು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.

ನಯಾಗರಾ ಜಲಪಾತವನ್ನು ವೀಕ್ಷಿಸಿದ ನಂತರ ಪ್ರವಾಸಿಗರು ನ್ಯೂಯಾರ್ಕ್ ನಗರಕ್ಕೆ ಹಿಂತಿರುಗುತ್ತಿದ್ದಾಗ ಬಫಲೋದಿಂದ ಪೂರ್ವಕ್ಕೆ 25 ಮೈಲಿ (40 ಕಿಲೋಮೀಟರ್) ದೂರದಲ್ಲಿ ದುರ್ಘಟನೆ ಸಂಭವಿಸಿದೆ.

ಅಪಘಾತಕ್ಕೀಡಾದ ಬಸ್ಸಿನಲ್ಲಿ ಭಾರತೀಯ, ಚೀನೀ ಮತ್ತು ಫಿಲಿಪಿನೋ ಮೂಲದವರು ಇದ್ದರು ಎಂದು ತಿಳಿದುಬಂದಿದೆ.

1 ವರ್ಷದಿಂದ 74 ವರ್ಷ ವಯಸ್ಸಿನವರು ಬಸ್ಸಿನಲ್ಲಿದ್ದರು. ಅಪಘಾತದ ವೇಳೆ ಹಲವರು ಬಸ್ಸಿನಿಂದ ಹೊರಗೆ ಬಿದ್ದಿದ್ದಾರೆ. ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಎಲ್ಲರೂ ವಯಸ್ಕರಾಗಿದ್ದಾರೆಂದು ಪೊಲೀಸ್ ಅಧಿಕಾರಿ ಮೇಜರ್ ಆಂಡ್ರೆ ರೇ ಅವರು ಘಟನೆ ಕುರಿತು ಮಾಹಿತಿ ನೀಡಿದ್ದಾರೆ.

ಹಲವರನ್ನು ರಕ್ಷಣೆ ಮಾಡಲಾಗಿದ್ದು, ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಬಸ್‌ನಲ್ಲಿದ್ದ ಹೆಚ್ಚಿನ ಪ್ರಯಾಣಿಕರು ಭಾರತೀಯ, ಚೀನಿಯರು ಮತ್ತು ಫಿಲಿಪಿನೋ ಮೂಲದವರಾಗಿದ್ದರು. ಅಪಘಾತಕ್ಕೀಡಾಗಿರುವ ವಾಹನ ನ್ಯೂಯಾರ್ಕ್ ನಗರದ ಬರೋ ಆಫ್ ಸ್ಟೇಟನ್ ಐಲ್ಯಾಂಡ್‌ನಲ್ಲಿರುವ M&Y ಟೂರ್ ಇಂಕ್ ಒಡೆತನದ ಬಸ್ಸಾಗಿದ್ದು, ಅಪಘಾತದವೇಳೆ ಹೆಚ್ಚಿನ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.