ವಿದೇಶ

ಬ್ರಿಟಿನ್ ಮಾಜಿ ಪ್ರಧಾನಿ ರಿಷಿ ಸುನಕ್‌ಗೆ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಗೆ 14 ವಾರ ಜೈಲು ಶಿಕ್ಷೆ

ಭಾರತೀಯ ಮೂಲದ ಬ್ರಿಟಿಷ್ ನಾಯಕನ ವೈಯಕ್ತಿಕ ಸಹಾಯಕರು ಇಮೇಲ್‌ಗಳನ್ನು ಗುರುತಿಸಿ ಪೊಲೀಸರಿಗೆ ದೂರು ನೀಡಿದ್ದರು.

ಬ್ರಿಟಿನ್ ಮಾಜಿ ಪ್ರಧಾನಿ ರಿಷಿ ಸುನಕ್‌ಗೆ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಗೆ 14 ವಾರ ಜೈಲು ಶಿಕ್ಷೆ
ರಿಷಿ ಸುನಕ್
Published On :

ಲಂಡನ್: ಕಳೆದ ವರ್ಷ ಜೂನ್‌ನಲ್ಲಿ ಬ್ರಿಟಿಷ್ ಪ್ರಧಾನಿಯಾಗಿದ್ದ ರಿಷಿ ಸುನಕ್‌ಗೆ ಜನಾಂಗೀಯ ಕೊಲೆ ಬೆದರಿಕೆ ಇಮೇಲ್ ಕಳುಹಿಸಿದ್ದ 21 ವರ್ಷದ ವ್ಯಕ್ತಿಗೆ 14 ವಾರಗಳ ಕಾಲ ಜೈಲು ಶಿಕ್ಷೆ ಮತ್ತು ಎರಡು ವರ್ಷ ನಿರ್ಬಂಧ ವಿಧಿಸಲಾಗಿದೆ.

ಯಾರ್ಕ್‌ಷೈರ್‌ನ ರಿಚ್‌ಮಂಡ್ ಮತ್ತು ನಾರ್ತಲರ್ಟನ್‌ನ ಸಂಸದ ಸುನಕ್ ಅವರ ಇಮೇಲ್ ವಿಳಾಸಕ್ಕೆ ಎರಡು ಬೆದರಿಕೆ ಮತ್ತು ಆಕ್ಷೇಪಾರ್ಹ ಇಮೇಲ್‌ಗಳನ್ನು ಕಳುಹಿಸಿರುವುದಾಗಿ ವಾಯುವ್ಯ ಇಂಗ್ಲೆಂಡ್‌ನ ಮರ್ಸಿಸೈಡ್‌ನಲ್ಲಿರುವ ಬಿರ್ಕೆನ್‌ಹೆಡ್‌ನ ಲಿಯಾಮ್ ಶಾ ತಪ್ಪೊಪ್ಪಿಕೊಂಡಿದ್ದಾರೆ ಎಂದು ಬ್ರಿಟನ್ ನ ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್ ತಿಳಿಸಿದೆ.

ಭಾರತೀಯ ಮೂಲದ ಬ್ರಿಟಿಷ್ ನಾಯಕನ ವೈಯಕ್ತಿಕ ಸಹಾಯಕರು ಇಮೇಲ್‌ಗಳನ್ನು ಗುರುತಿಸಿ ಪೊಲೀಸರಿಗೆ ದೂರು ನೀಡಿದ್ದರು.

"ಅತ್ಯಂತ ಪ್ರಮುಖ ಹುದ್ದೆಯಲ್ಲಿರುವ ವ್ಯಕ್ತಿಗೆ ಜನಾಂಗೀಯ ಮತ್ತು ಬೆದರಿಕೆ ಸಂದೇಶಗಳನ್ನು ಕಳುಹಿಸಿದ ಲಿಯಾಮ್ ಶಾಗೆ ಶಿಕ್ಷೆ ವಿಧಿಸಲಾಗಿದೆ" ಎಂದು ಸಿಪಿಎಸ್ ಮರ್ಸಿ ಚೆಷೈರ್‌ನ ಹಿರಿಯ ಕ್ರೌನ್ ಪ್ರಾಸಿಕ್ಯೂಟರ್ ಮ್ಯಾಥ್ಯೂ ಡಿಕ್ಸನ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.