ಅಮೆರಿಕದೊಂದಿಗೆ ನಮ್ಮ ಹಳೆಯ ಸಂಬಂಧ ಮುಗಿದಿದೆ: ವಿಜಯೋತ್ಸವ ಭಾಷಣದಲ್ಲಿ ಕೆನಡಾ ನೂತನ ಪ್ರಧಾನಿ ಮಾರ್ಕ್ ಕಾರ್ನಿ
ನಾವು ಈ ವ್ಯಾಪಾರ ಯುದ್ಧವನ್ನು ಗೆಲ್ಲುತ್ತೇವೆ" ಎಂದು ಕಾರ್ನಿ ಒಟ್ಟಾವಾದಲ್ಲಿ ವಿಜಯೋತ್ಸವ ಭಾಷಣದಲ್ಲಿ ಬೆಂಬಲಿಗರಿಗೆ ಹೇಳಿದರು. ಟ್ರಂಪ್‌ರ ಸುಂಕ ಸಮರ ಮತ್ತು ಸ್ವಾಧೀನ ಬೆದರಿಕೆಗಳಿಂದ ಬರುವ 'ಸವಾಲಿನ' ದಿನಗಳ ಬಗ್ಗೆ ಎಚ್ಚರಿಕೆ ನೀಡಿದರು.

ಕೆನಡಾದ ಹೊಸಯಾದ ಪ್ರಧಾನಿ ಮಾರ್ಕ್ ಕಾರ್ನಿ, ಯುನೈಟೆಡ್ ಸ್ಟೇಟ್ಸ್‌ನೊಂದಿಗಿನ ದೇಶದ ಹಳೆಯ ಸಂಬಂಧ, ನಿರಂತರವಾಗಿ ಹೆಚ್ಚುತ್ತಿರುವ ಏಕೀಕರಣವನ್ನು ಆಧರಿಸಿದ ಸಂಬಂಧ, 'ಮುಗಿದಿದೆ' ಎಂದು ಹೇಳಿದ್ದಾರೆ.
"ಇವು ದುರಂತಗಳು, ಆದರೆ ಇದು ನಮ್ಮ ಹೊಸ ವಾಸ್ತವವೂ ಆಗಿದೆ. ನಾವು ಅಮೆರಿಕದ ದ್ರೋಹದ ಆಘಾತದಿಂದ ಹೊರಬಂದಿದ್ದೇವೆ, ಆದರೆ ಅದರ ಪಾಠಗಳನ್ನು ನಾವು ಎಂದಿಗೂ ಮರೆಯಬಾರದು. ನಾವು ನಮ್ಮನ್ನು ನಾವು ನೋಡಿಕೊಳ್ಳಬೇಕು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ನಾವು ಪರಸ್ಪರ ಕಾಳಜಿ ವಹಿಸಬೇಕು" ಎಂದು ಅವರು ಹೇಳಿದ್ದಾರೆ.
"ನಾವು ಈ ವ್ಯಾಪಾರ ಯುದ್ಧವನ್ನು ಗೆಲ್ಲುತ್ತೇವೆ" ಎಂದು ಕಾರ್ನಿ ಒಟ್ಟಾವಾದಲ್ಲಿ ವಿಜಯೋತ್ಸವ ಭಾಷಣದಲ್ಲಿ ಬೆಂಬಲಿಗರಿಗೆ ಹೇಳಿದರು. ಟ್ರಂಪ್‌ರ ಸುಂಕ ಸಮರ ಮತ್ತು ಸ್ವಾಧೀನ ಬೆದರಿಕೆಗಳಿಂದ ಬರುವ 'ಸವಾಲಿನ' ದಿನಗಳ ಬಗ್ಗೆ ಎಚ್ಚರಿಕೆ ನೀಡಿದರು.
ವಾಷಿಂಗ್ಟನ್‌ನ ಬೆದರಿಕೆಗಳ ಹಿನ್ನೆಲೆಯಲ್ಲಿ ಕೆನಡಾದ ಏಕತೆಯ ಮಹತ್ವವನ್ನು ಕಾರ್ನಿ ಒತ್ತಿ ಹೇಳಿದರು. "ಅಧ್ಯಕ್ಷ ಟ್ರಂಪ್ ಅಮೆರಿಕ ನಮ್ಮನ್ನು ವಿಲೀನಗೊಳಿಸಿಕೊಳ್ಳಲು ಅಥವಾ ನಮ್ಮನ್ನು ಮುರಿಯಲು ಪ್ರಯತ್ನಿಸುತ್ತಿದ್ದಾರೆ. ಅದು ಎಂದಿಗೂ ... ಎಂದಿಗೂ ಸಂಭವಿಸುವುದಿಲ್ಲ" ಎಂದು ಅವರು ಪ್ರತಿಪಾದಿಸಿದ್ದಾರೆ. ಆದಾಗ್ಯೂ, ನಮ್ಮ ಜಗತ್ತು ಮೂಲಭೂತವಾಗಿ ಬದಲಾಗಿದೆ ಎಂಬ ವಾಸ್ತವವನ್ನು ಗುರುತಿಸಬೇಕು ಎಂದು ಅವರು ಇದೇ ವೇಳೆ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ
ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೊಸದಾಗಿ ಆಯ್ಕೆಯಾದ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರನ್ನು ಅಭಿನಂದಿಸಿದ್ದಾರೆ ಮತ್ತು ದೀರ್ಘ ರಾಜತಾಂತ್ರಿಕ ತಂಪಿನ ನಂತರ ಭಾರತ-ಕೆನಡಾ ಸಂಬಂಧಗಳನ್ನು ಪುನರುಜ್ಜೀವನಗೊಳಿಸುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. "ನಮ್ಮ ಪಾಲುದಾರಿಕೆಯನ್ನು ಬಲಪಡಿಸಲು ಮತ್ತು ನಮ್ಮ ಜನರಿಗೆ ಹೆಚ್ಚಿನ ಅವಕಾಶಗಳನ್ನು ತೆರೆಯಲು ನಿಮ್ಮೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ" ಎಂದು ಪ್ರಧಾನಿ ಮೋದಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



