Explosion at Iran port: ಇರಾನ್ ನ ಅತ್ಯಾಧುನಿಕ ಬಂದರಿನಲ್ಲಿ ಭೀಕರ ಸ್ಫೋಟ; 4 ಸಾವು, 500ಕ್ಕೂ ಅಧಿಕ ಮಂದಿಗೆ ಗಾಯ, Video
ಬಂದರಿನಲ್ಲಿ ನಿಲ್ಲಿಸಲಾಗಿದ್ದ ಹಲವು ಕಂಟೇನರ್ಗಳು ಏಕಕಾಲಕ್ಕೆ ಸ್ಫೋಟಗೊಂಡಿದ್ದರಿಂದ ದೊಡ್ಡ ಪ್ರಮಾಣದ ಬ್ಲಾಸ್ಟ್ ಹಾಗೂ ಬೆಂಕಿ ಉಂಟಾಗಿದೆ.

ಟೆಹ್ರಾನ್: ಇರಾನ್ ನ ಅತ್ಯಾಧುನಿಕ ಬೃಹತ್ ಬಂದರಿನಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಕನಿಷ್ಛ 4 ಮಂದಿ ಸಾವಿಗೀಡಾಗಿ 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇರಾನ್ ನ ಬಂದರು ನಗರವಾದ ಅಬ್ಬಾಸ್ ನಲ್ಲಿ ಶನಿವಾರದಂದು ಪ್ರಬಲ ಸ್ಫೋಟ ಸಂಭವಿಸಿದ್ದು, ಇಲ್ಲಿನ ರಾಜಾಯೈ ಬಂದರಿನಲ್ಲಿ ಈ ಸ್ಫೋಟ ಸಂಭವಿಸಿ ಕನಿಷ್ಛ 4 ಮಂದಿ ಸಾವನ್ನಪ್ಪಿ, 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾಕೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂದರಿನಲ್ಲಿ ನಿಲ್ಲಿಸಲಾಗಿದ್ದ ಹಲವು ಕಂಟೇನರ್ಗಳು ಏಕಕಾಲಕ್ಕೆ ಸ್ಫೋಟಗೊಂಡಿದ್ದರಿಂದ ದೊಡ್ಡ ಪ್ರಮಾಣದ ಬ್ಲಾಸ್ಟ್ ಹಾಗೂ ಬೆಂಕಿ ಉಂಟಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಬಂದರು ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಹೊಗೆ ಹೊರಬರುತ್ತಿರುವುದು ಕಂಡಿದೆ.
ಅಗ್ನಿಶಾಮಕ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಬಂದರು ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಶಾಹಿದ್ ರಾಜೀ ಬಂದರು ವಾರ್ಫ್ ಪ್ರದೇಶದಲ್ಲಿ ಸಂಗ್ರಹಿಸಲಾಗಿದ್ದ ಹಲವಾರು ಕಂಟೇನರ್ಗಳು ಸ್ಫೋಟಗೊಂಡಿದ್ದು ಈ ಘಟನೆಗೆ ಕಾರಣ. ನಾವು ಗಾಯಾಳುಗಳನ್ನು ಸ್ಥಳಾಂತರಿಸುತ್ತಿದ್ದೇವೆ ಮತ್ತು ಆಸ್ಪತ್ರೆಗಳಿಗೆ ವರ್ಗಾಯಿಸುತ್ತಿದ್ದೇವೆ” ಎಂದು ಸ್ಥಳೀಯ ಬಿಕ್ಕಟ್ಟು ನಿರ್ವಹಣಾ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪಹಲ್ಗಾಮ್ ದಾಳಿ: ಲಂಡನ್'ನಲ್ಲಿ ಭಾರತೀಯರ ಪ್ರತಿಭಟನೆ; ಕತ್ತು ಸೀಳುವ ಸನ್ನೆ ಮಾಡಿ ಪಾಕ್ ರಾಜತಾಂತ್ರಿಕ ಉದ್ಧಟತನ; Video
ಕಂಟೈನರ್ ನಲ್ಲಿ ಸ್ಫೋಟ
ಇರಾನ್ ಬಂದರಿನಲ್ಲಿ ನಡೆದಿರುವ ಸ್ಫೋಟ ಕೂಡ ಕಂಟೈನರ್ ಒಂದರಲ್ಲಿ ಬಂದಿರುವ ಕಚ್ಚಾವಸ್ತುವೊಂದು ಸ್ಫೋಟವಾಗಿರುವುದರಿಂದಲೇ ಆಗಿರುವ ಸಾಧ್ಯತೆಯಿದೆ ಎಂದು ಸ್ಥಳೀಯ ತುರ್ತು ಸಂದರ್ಭ ನಿರ್ವಹಣಾಧಿಕಾರಿ ಮೆಹರ್ಬಾದ್ ಹಸನ್ ಝಾದೇ ಅವರು ಹೇಳಿದ್ದಾರೆ. ಇರಾನ್ ನ ರಾಜಾಯ್ಯೈ ಬಂದರಿನಲ್ಲಿ ಸಾಮಾನ್ಯವಾಗಿ ಸರಕು ಸಾಗಣೆಯೇ ಪ್ರಧಾನವಾಗಿ ನಡೆಯುವ ವಾಣಿಜ್ಯ ಚಟುವಟಿಕೆಗಳಾಗಿವೆ. ಅಲ್ಲಿ ವಿಶೇಷವಾಗಿ, ಪೆಟ್ರೋಕೆಮಿಕಲ್ ವಸ್ತುಗಳು, ಕಚ್ಚಾ ತೈಲದ ಕಂಟೈನರ್ ಗಳೇ ಹೆಚ್ಚಾಗಿ ಆಮದು ರಫ್ತು ಆಗುತ್ತಿರುತ್ತವೆ. ಹಾಗಾಗಿ, ಯಾವುದೋ ತೈಲೋತ್ಪನ್ನ ವಸ್ತುವೇ ಸ್ಫೋಟವಾಗಿರಬಹುದು ಎಂದು ಶಂಕಿಸಲಾಗಿದೆ.
ಇರಾನ್ ಪ್ರಮುಖ ಮತ್ತು ಅತ್ಯಾಧುನಿಕ ಬಂದರು
ಬಂದರು ಟೆಹ್ರಾನ್ನಿಂದ ಆಗ್ನೇಯಕ್ಕೆ ಸುಮಾರು 1,050 ಕಿಲೋಮೀಟರ್ ದೂರದಲ್ಲಿ, ಹಾರ್ಮುಜ್ ಜಲಸಂಧಿಯ ಉದ್ದಕ್ಕೂ ಈ ಬಂದರು ಇದೆ. ಇದು ಇರಾನ್ ನ ಅತೀ ದೊಡ್ಡ ಮತ್ತು ಅತ್ಯಾಧುನಿಕ ಬಂದರು ಕೂಡ ಆಗಿದೆ. ಜಾಗತಿಕ ತೈಲ ವ್ಯಾಪಾರದ ಶೇ. 20ರಷ್ಟು ಇದರ ಮೂಲಕ ಹಾದುಹೋಗುತ್ತದೆ. ಸ್ಫೋಟದ ಸ್ಥಳದಿಂದ ದೊಡ್ಡ ಪ್ರಮಾಣದಲ್ಲಿ ಹೊಗೆ ಹೊರಬರುತ್ತಿರುವ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕಾರಣ ನಿಗೂಢ
ಇದು ಬಾಂಬ್ ಸ್ಫೋಟವೋ ಅಥವಾ ಬಂದರಿನಲ್ಲಿ ಇರಿಸಲಾಗಿದ್ದ ಯಾವುದಾದರೂ ಕಚ್ಚಾ ವಸ್ತುವಿನ ಸ್ಫೋಟವೋ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಸದ್ಯಕ್ಕೆ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಆನಂತರ ಸೂಕ್ತ ತನಿಖೆಯಲ್ಲಿ ಈ ಬಗ್ಗೆ ನಿಖರ ಮಾಹಿತಿ ನೀಡಲಾಗುತ್ತದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಈ ಸ್ಫೋಟದ ಕಾರಣವನ್ನು ಇನ್ನೂ ಖಚಿತಪಡಿಸಿಕೊಳ್ಳಬೇಕಾಗಿದೆ. ಈ ಬಗ್ಗೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಈ ಹಿಂದೆ ಟರ್ಕಿಯ ರಾಜಧಾನಿ ಬೈರೂತ್ ನ ಬಂದರಿನಲ್ಲಿ 2019ರಲ್ಲಿ ಹೀಗೆಯೇ ಪ್ರಬಲವಾದ ಸ್ಫೋಟ ಸಂಭವಿಸಿತ್ತು. ಅದು ಭಯೋತ್ಪಾದನೆಯ ಕೃತ್ಯವಾಗಿರಲಿಲ್ಲ. ಹಡಗಿನಲ್ಲಿ ತರಲಾಗಿದ್ದ ಕಂಟೈನರ್ ಒಂದರಲ್ಲಿ ಬಂದಿದ್ದ ಪಾರ್ಸೆಲ್ ಒಂದು ಸ್ಫೋಟಗೊಂಡಿತ್ತು. ಆ ತೀವ್ರತೆಯಿಂದಾಗಿ 200 ಮಂದಿ ಸಾವಿಗೀಡಾಗಿದ್ದರು. ಕಿಲೋಮೀಟರ್ ಗಳವರೆಗೆ ಅದರ ತೀವ್ರತೆ ಆವರಿಸಿತ್ತು. ಅನೇಕ ಮನೆಗಳು ಹಾಗೂ ಧ್ವಂಸವಾಗಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


