ವೆಸ್ಟ್ ಬ್ಯಾಂಕ್: ಭಾರತದ ಮೂಲದ ಇಸ್ರೇಲ್ ಯೋಧ ಸಾವು
ನೋಫ್ ಹಗಲಿಲ್ ನಿವಾಸಿ ಗೆರಿ ಗಿಡಿಯಾನ್ ಹಂಗಲ್ ಮೃತ ಯೋಧ. ಈತ ಕೆಫಿರ್ ಬ್ರಿಗೇಡ್ ನಹ್ಯೋನ್ ಬೆಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಜೆರುಸಲೇಂ: ಪ್ಯಾಲೇಸ್ತಿನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ನಡುವೆ ವೆಸ್ಟ್ ಬ್ಯಾಂಕ್ ನ ಬೈಟ್ ಎಲ್ ಸೆಟಲ್ ಮೆಂಟ್ ಬಳಿ ವಾಹನವೊಂದನ್ನು ನುಗ್ಗಿಸಿ, ಬೆನೈ ಮನಾಶೆ ಸಮುದಾಯಕ್ಕೆ ಸೇರಿದ ಭಾರತ ಮೂಲದ 24 ವರ್ಷದ ಯೋಧ ಸಾವನ್ನಪ್ಪಿರುವುದಾಗಿ ಸಮುದಾಯದ ಸದಸ್ಯರು ತಿಳಿಸಿದ್ದಾರೆ.
ನೋಫ್ ಹಗಲಿಲ್ ನಿವಾಸಿ ಗೆರಿ ಗಿಡಿಯಾನ್ ಹಂಗಲ್ ಮೃತ ಯೋಧ. ಈತ ಕೆಫಿರ್ ಬ್ರಿಗೇಡ್ ನಹ್ಯೋನ್ ಬೆಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ಇಸ್ರೇಲಿ ಸೇನೆ ಮಾಹಿತಿ ನೀಡಿದೆ.
ಆಸಫ್ ಜಂಕ್ಷನ್ ಬಳಿ ಯುವ ಯೋಧನ ಸಾವಿನ ಸುದ್ದಿ ಕೇಳಿ ಆಘಾತವಾಯಿತು ಎಂದು ಸಮುದಾಯದ ಸದಸ್ಯರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಪ್ಯಾಲೇಸ್ತಿನ್ ಪರವಾನಗಿ ಹೊಂದಿರುವ ಟ್ರಕ್ ವೊಂದು ಬಸ್ ನಿಲ್ದಾಣದ ಪಕ್ಕದಲ್ಲಿರುವ ಇಸ್ರೇಲ್ ರಕ್ಷಣಾ ಪಡೆಯ ಭದ್ರತಾ ಪೋಸ್ಟ್ ಗೆ ವೇಗದಲ್ಲಿ ನುಗ್ಗಿ ದಾಳಿ ನಡೆಸಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ. ದಾಳಿ ನಡೆಸಿದ ಶಂಕಿತನ್ನು ಸೆಂಟ್ರಲ್ ವೆಸ್ಟ್ ಬ್ಯಾಂಕ್ ನ ರಫತ್ ನಗರದ ನಿವಾಸಿ 58 ವರ್ಷದ ಹೈಲ್ ಧೈಫಲ್ಲಾ ಎಂದು ಇಸ್ರೇಲ್ ಸೇನೆ ತಿಳಿಸಿದೆ.
2020ರಲ್ಲಿ ಭಾರತದ ಈಶಾನ್ಯ ಭಾಗದಿಂದ ಇಸ್ರೇಲ್ ಗೆ ಹಂಗಲ್ ಕುಟುಂಬ ವಲಸೆ ಬಂದಿತ್ತು. ಇಂದು ಹಂಗಲ್ ಅಂತ್ಯಕ್ರಿಯೆ ನಡೆಯಲಿದೆ ಎಂದು ಸಮುದಾಯದ ಸದಸ್ಯರು ಹೇಳಿದ್ದಾರೆ. ಮಣಿಪುರ ಮತ್ತು ಮಿಜೋರಾಂನಂತಹ ಭಾರತದ ಈಶಾನ್ಯ ರಾಜ್ಯಗಳಿಂದ ವಲಸೆ ಬಂದಿರುವ ಬೆನೈ ಮನಾಶೆ ಸಮುದಾಯದ ಸುಮಾರು 300 ಯುವಕರು ಇಸ್ರೇಲ್ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



