ವಿದೇಶ

America ಶ್ವೇತಭವನದಲ್ಲಿ ನಡೆದ ದೀಪಾವಳಿ ಆಚರಣೆ ಹೀಗಿತ್ತು ನೋಡಿ...

ಮುಂದಿನ ತಿಂಗಳು ಅಧ್ಯಕ್ಷೀಯ ಚುನಾವಣೆ ಕಾಣುತ್ತಿರುವ ಅಮೆರಿಕದಲ್ಲಿ ಅಧ್ಯಕ್ಷ ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ನೇತೃತ್ವದಲ್ಲಿ ಭಾರತೀಯ ಅಮೆರಿಕನ್ನರ ಕೊಡುಗೆಗಳನ್ನು ಗೌರವಿಸುವ ದೀಪಾವಳಿ ಆಚರಣೆಯನ್ನು ಆಯೋಜಿಸಲಾಗಿತ್ತು.

America ಶ್ವೇತಭವನದಲ್ಲಿ ನಡೆದ ದೀಪಾವಳಿ ಆಚರಣೆ ಹೀಗಿತ್ತು ನೋಡಿ...
ಶ್ವೇತಭವನದಲ್ಲಿ ದೀಪಾವಳಿ ಸಂಭ್ರಮ
Published On :

ವಾಷಿಂಗ್ಟನ್: ಹಿಂದೂಗಳ ಪವಿತ್ರ ಬೆಳಕಿನ ಹಬ್ಬ ದೀಪಾವಳಿ ಆಚರಣೆ ಆರಂಭವಾಗಿದೆ. ಕೇವಲ ನಮ್ಮ ದೇಶಗಳಲ್ಲಿ ಮಾತ್ರವಲ್ಲದೆ ವಿದೇಶಿಯರು ಕೂಡ ದೀಪಗಳ ಹಬ್ಬವನ್ನು ಆಚರಿಸಿ ಸಂಭ್ರಮಿಸುವುದುಂಟು. ಅಮೆರಿಕಾದ ಶಕ್ತಿಭವನ ಶ್ವೇತಭವನದಲ್ಲಿ "ಅಮೆರಿಕ-ಭಾರತ ಸಂಬಂಧ"ಗಳ ದ್ಯೋತಕವಾಗಿ ಆಚರಿಸಲಾಗುತ್ತದೆ.

ಮುಂದಿನ ತಿಂಗಳು ಅಧ್ಯಕ್ಷೀಯ ಚುನಾವಣೆ ಕಾಣುತ್ತಿರುವ ಅಮೆರಿಕದಲ್ಲಿ ಅಧ್ಯಕ್ಷ ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ನೇತೃತ್ವದಲ್ಲಿ ಭಾರತೀಯ ಅಮೆರಿಕನ್ನರ ಕೊಡುಗೆಗಳನ್ನು ಗೌರವಿಸುವ ದೀಪಾವಳಿ ಆಚರಣೆಯನ್ನು ಆಯೋಜಿಸಲಾಗಿತ್ತು. ಭಾರತದಲ್ಲಿನ ಯುಎಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ಕಾರ್ಯಕ್ರಮವನ್ನು ಶ್ಲಾಘಿಸಿ ದೀಪಾವಳಿ ಮತ್ತು ಭಾರತೀಯ ಅಮೆರಿಕನ್ನರ ಅಮೂಲ್ಯ ಕೊಡುಗೆಗಳ ಮಹತ್ವವನ್ನು ಎತ್ತಿ ತೋರಿಸಿದರು.

Story image

ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಗೋಪಿನಾಥ್ ಅವರು ಎಕ್ಸ್ ಖಾತೆಯಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ, ಅಮೆರಿಕ ಶ್ವೇತಭವನದಲ್ಲಿ ದೀಪಾವಳಿಯ ಆಚರಣೆ ಮಾಡಿದ ಅಧ್ಯಕ್ಷ ಜೋ ಬೈಡನ್ ಅವರಿಗೆ ಧನ್ಯವಾದಗಳು- ಕತ್ತಲೆಯ ಮೇಲೆ ಬೆಳಕನ್ನು ಮತ್ತು ಅಜ್ಞಾನದ ಮೇಲೆ ಜ್ಞಾನವನ್ನು ಆಚರಿಸುವ ದೀಪಾವಳಿಯ ಶುಭಾಶಯಗಳು!" ಎಂದು ಬರೆದಿದ್ದಾರೆ.

ಗಾರ್ಸೆಟ್ಟಿ ಎಕ್ಸ್ ಖಾತೆಯಲ್ಲಿ ದೀಪಾವಳಿ ಸಂಭ್ರಮದ ಫೋಟೋಗಳನ್ನು ಹಂಚಿಕೊಂಡು ವೈಟ್‌ಹೌಸ್‌ನಲ್ಲಿ ದೀಪಾವಳಿಯ ಆಚರಣೆ ಎಷ್ಟು ಸುಂದರವಾಗಿದೆ! ನಾವು ಬೆಳಕಿನ ಪಯಣವನ್ನು ಆಚರಿಸುತ್ತಿರುವಾಗ ಭಾರತ-ಅಮೆರಿಕ ಬಾಂಧವ್ಯವನ್ನು ಗಾಢವಾಗಿಸುವ ಭಾರತೀಯ ಅಮೆರಿಕನ್ನರ ಅಮೂಲ್ಯ ಕೊಡುಗೆಗಳನ್ನು ನಾವು ಗೌರವಿಸುತ್ತೇವೆ. ದೆಹಲಿಯಿಂದ ವಾಷಿಂಗ್ಟನ್ ಡಿ ಸಿಯವರೆಗೆ ದೀಪಾವಳಿಯ ಬೆಳಕು ಪ್ರಪಂಚದ ಮೂಲೆ ಮೂಲೆಯನ್ನು ಬೆಳಗಿಸಲಿ ಮತ್ತು ಶಾಂತಿ ಮತ್ತು ಸಮೃದ್ಧಿಯ ಸಂದೇಶವನ್ನು ಹರಡಲಿ #CelebrateWithUS #HappyDiwali" ಎಂದು ಬರೆದಿದ್ದಾರೆ.

Story image

ಅಮೆರಿಕದ ಪ್ರಥಮ ಮಹಿಳೆ ಜಿಲ್ ಬಿಡೆನ್ ಮತ್ತು ಅಧ್ಯಕ್ಷ ಜೋ ಬಿಡೆನ್ ಅವರು ಮೊನ್ನೆ ಶ್ವೇತಭವನದಲ್ಲಿ ದೀಪಾವಳಿ ಆಚರಣೆಯನ್ನು ಆಯೋಜಿಸಿ ಅಮೆರಿಕಾದ್ಯಂತ ಇರುವ ಭಾರತೀಯ ಅಮೆರಿಕನ್ನರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. 600ಕ್ಕೂ ಹೆಚ್ಚು ಭಾರತೀಯ ಅಮೆರಿಕನ್ನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅಧ್ಯಕ್ಷನಾಗಿ, ಶ್ವೇತಭವನದಲ್ಲಿ ದೀಪಾವಳಿ ಕಾರ್ಯಕ್ರಮ ಆಯೋಜಿಸಲು ನನಗೆ ಗೌರವವಿದೆ. ಸೆನೆಟರ್, ಉಪಾಧ್ಯಕ್ಷ ಮತ್ತು ಅಧ್ಯಕ್ಷರಾಗಿ; ದಕ್ಷಿಣ ಏಷ್ಯಾದ ಅಮೆರಿಕನ್ನರು ನನ್ನ ಸಿಬ್ಬಂದಿಯ ಪ್ರಮುಖ ಸದಸ್ಯರಾಗಿದ್ದಾರೆ ಎಂದು ಯುಎಸ್ ಅಧ್ಯಕ್ಷರು ದೇಶಾದ್ಯಂತದ ಭಾರತೀಯ ಅಮೇರಿಕನ್ ಕಾಂಗ್ರೆಸ್ ಸದಸ್ಯರು, ಅಧಿಕಾರಿಗಳು ಮತ್ತು ಕಾರ್ಪೊರೇಟ್ ಕಾರ್ಯನಿರ್ವಾಹಕರನ್ನು ಉದ್ದೇಶಿಸಿ ಹೇಳಿದರು.

Story image

ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಪ್ರಥಮ ಮಹಿಳೆ ಡಾ ಜಿಲ್ ಬಿಡೆನ್ ಅವರು ಪ್ರಚಾರದ ಹಾದಿಯಲ್ಲಿನ ಜವಾಬ್ದಾರಿಗಳಿಂದಾಗಿ ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದರು.

2016 ರಲ್ಲಿ ಶ್ವೇತಭವನದಲ್ಲಿ ಆಯೋಜಿಸಲಾದ ಮೊದಲ ದೀಪಾವಳಿ ಆಚರಣೆಯನ್ನು ನೆನಪಿಸಿಕೊಂಡ ಬೈಡೆನ್, "ದಕ್ಷಿಣ ಏಷ್ಯಾದ ಅಮೆರಿಕನ್ನರು ಸೇರಿದಂತೆ ವಲಸಿಗರ ಮೇಲಿನ ದ್ವೇಷ ಮತ್ತು ಹಗೆತನದಿಂದ ರೂಪುಗೊಂಡ ಕಪ್ಪು ಮೋಡವು 2024 ರಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿದೆ" ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.