ಭಾರತ-ಚೀನಾ ಗಡಿ ಒಪ್ಪಂದ: 'ಸಂಬಂಧಿತ ವಿಷಯಗಳಿಗೆ' ಪರಿಹಾರ ಸಿಕ್ಕಿದೆ- ಚೀನಾ
"ಇತ್ತೀಚಿನ ಅವಧಿಯಲ್ಲಿ, ಚೀನಾ ಮತ್ತು ಭಾರತ ಗಡಿಗೆ ಸಂಬಂಧಿಸಿದ ವಿಷಯಗಳ ಕುರಿತು ರಾಜತಾಂತ್ರಿಕ ಮತ್ತು ಮಿಲಿಟರಿ ವೇದಿಕೆಗಳ ಮೂಲಕ ನಿಕಟ ಸಂವಹನ ನಡೆಸುತ್ತಿದೆ" ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಇಲ್ಲಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಬೀಜಿಂಗ್: ಪೂರ್ವ ಲಡಾಖ್ನಲ್ಲಿ ಉಭಯ ಸೇನೆಗಳ ನಡುವಿನ ಬಿಕ್ಕಟ್ಟನ್ನು ಕೊನೆಗೊಳಿಸಲು ಭಾರತದೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಚೀನಾ ಮಂಗಳವಾರ ದೃಢಪಡಿಸಿದೆ.
"ಇತ್ತೀಚಿನ ಅವಧಿಯಲ್ಲಿ, ಚೀನಾ ಮತ್ತು ಭಾರತ ಗಡಿಗೆ ಸಂಬಂಧಿಸಿದ ವಿಷಯಗಳ ಕುರಿತು ರಾಜತಾಂತ್ರಿಕ ಮತ್ತು ಮಿಲಿಟರಿ ವೇದಿಕೆಗಳ ಮೂಲಕ ನಿಕಟ ಸಂವಹನ ನಡೆಸುತ್ತಿದೆ" ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಇಲ್ಲಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
4 ವರ್ಷಗಳ ಸುದೀರ್ಘ ಮಿಲಿಟರಿ ಬಿಕ್ಕಟ್ಟನ್ನು ಕೊನೆಗೊಳಿಸಲು ಒಪ್ಪಂದವನ್ನು ತಲುಪಿರುವ ಕುರಿತು ಸೋಮವಾರ (ಅ.21 ರಂದು) ಭಾರತದ ಹೇಳಿಕೆಯ ಬಗ್ಗೆ ಕೇಳಿದ ಪ್ರಶ್ನೆಗೆ ಲಿನ್ ಪ್ರತಿಕ್ರಿಯೆ ನೀಡಿದ್ದು, ಒಪ್ಪಂದವನ್ನು ದೃಢಪಡಿಸಿದ್ದು, ಈಗ, ಉಭಯ ದೇಶಗಳು 'ಸಂಬಂಧಿತ ವಿಷಯಗಳ' ಕುರಿತು ನಿರ್ಣಯವನ್ನು ತಲುಪಿವೆ ಎಂದು ಹೇಳಿದ್ದಾರೆ.
ಇದನ್ನು ಕಾರ್ಯಗತಗೊಳಿಸಲು ಚೀನಾ ಭಾರತದೊಂದಿಗೆ ಕೆಲಸ ಮಾಡುತ್ತದೆ ಎಂದಷ್ಟೇ ಹೇಳಿರುವ ಅವರು ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ.
ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಮತ್ತಷ್ಟು ಒತ್ತಾಯಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಲಿನ್, "ನಾನು ಆ ಪ್ರಶ್ನೆಗೆ ಉತ್ತರಿಸಿದ್ದೇನೆ ಮತ್ತು ಹೆಚ್ಚಿನದ್ದು ಹೇಳಲು ಏನೂ ಇಲ್ಲ." ಎಂದು ತಿಳಿಸಿದ್ದಾರೆ.
ಪೂರ್ವ ಲಡಾಖ್ನಲ್ಲಿನ ನೈಜ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಗಸ್ತು ತಿರುಗಲು ಚೀನಾದೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಭಾರತ ಅ.21 ರಂದು ಘೋಷಿಸಿದ ನಂತರ ಚೀನಾದ ಕಡೆಯಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿರಲಿಲ್ಲ. ಭಾರತದ ಘೋಷಣೆ 4 ವರ್ಷಗಳ ಸುದೀರ್ಘ ಮಿಲಿಟರಿ ಬಿಕ್ಕಟ್ಟನ್ನು ಕೊನೆಗೊಳಿಸುವಲ್ಲಿ ಎರಡು ಸೇನೆಗಳ ನಡುವೆ ಪ್ರಮುಖ ಪ್ರಗತಿ ಎಂದು ವಿಶ್ಲೇಷಿಸಲಾಗುತ್ತಿದೆ.
ಚೀನಾದ ಅಧಿಕೃತ ಮಾಧ್ಯಮವೂ ಭಾರತದ ಪ್ರಕಟಣೆಯನ್ನು ವರದಿ ಮಾಡಿಲ್ಲ. ಉಭಯ ರಾಷ್ಟ್ರಗಳು ಈ ಇತ್ತೀಚಿನ ಬೆಳವಣಿಗೆ, ಹೇಳಿಕೆಗಳ ಬಗ್ಗೆ ವಿವರಗಳನ್ನು ನೀಡಲು ನಿರಾಕರಿಸಿರುವುದು ಗಮನಾರ್ಹವಾಗಿದೆ.
ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮಂಗಳವಾರ ರಷ್ಯಾದ ಕಜಾನ್ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಗೆ ತೆರಳಿದ ನಂತರ. ಭಾರತದೊಂದಿಗಿನ ಒಪ್ಪಂದದ ಬಗ್ಗೆ ಚೀನಾದ ಕಡೆಯಿಂದ ದೃಢೀಕರಣ ಬಂದಿದೆ.
ಏತನ್ಮಧ್ಯೆ, ಮೋದಿ-ಕ್ಸಿ ಜಿನ್ಪಿಂಗ್ ನಡುವಿನ ದ್ವಿಪಕ್ಷೀಯ ಸಭೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಲಿನ್, "ನೀವು ಪ್ರಸ್ತಾಪಿಸಿದ ದ್ವಿಪಕ್ಷೀಯ ಸಭೆಯಲ್ಲಿ, ಏನಾದರೂ ಬೆಳವಣಿಗೆಯಾದಲ್ಲಿ ಚೀನಾ ಸಮಯೋಚಿತ ಮಾಹಿತಿಯನ್ನು ಬಿಡುಗಡೆ ಮಾಡುತ್ತದೆ" ಎಂದಷ್ಟೇ ಹೇಳಿದ್ದಾರೆ.
ಜೂನ್ 2020 ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ನಡೆದ ಭೀಕರ ಘರ್ಷಣೆಯ ನಂತರ ಏಷ್ಯಾದ 2 ದೈತ್ಯ ರಾಷ್ಟ್ರಗಳ ನಡುವಿನ ಸಂಬಂಧಗಳು ಹದಗೆಟ್ಟಿವೆ. ಇದು ದಶಕಗಳಲ್ಲಿ ಉಭಯ ರಾಷ್ಟ್ರಗಳ ನಡುವಿನ ಅತ್ಯಂತ ಗಂಭೀರವಾದ ಮಿಲಿಟರಿ ಸಂಘರ್ಷವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



