ವಿದೇಶ

ಇಸ್ರೇಲ್‌ಗೆ ಸಹಾಯ ಮಾಡಬೇಡಿ, ಇಲ್ಲಾಂದ್ರೆ...: ತೈಲ-ಶ್ರೀಮಂತ ಮಿತ್ರರಾಷ್ಟ್ರಗಳಿಗೆ ಇರಾನ್‌ ಎಚ್ಚರಿಕೆ

ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಜೋರ್ಡಾನ್ ಮತ್ತು ಕತಾರ್‌ನಂತಹ ತೈಲ-ಸಮೃದ್ಧ ರಾಷ್ಟ್ರಗಳನ್ನು ಗುರಿಯಾಗಿಟ್ಟುಕೊಂಡು ರಹಸ್ಯ ರಾಜತಾಂತ್ರಿಕ ಮಾರ್ಗಗಳ ಮೂಲಕ ಎಚ್ಚರಿಕೆಯನ್ನು ರವಾನಿಸಲಾಗಿದೆ.

ಇಸ್ರೇಲ್‌ಗೆ ಸಹಾಯ ಮಾಡಬೇಡಿ, ಇಲ್ಲಾಂದ್ರೆ...: ತೈಲ-ಶ್ರೀಮಂತ ಮಿತ್ರರಾಷ್ಟ್ರಗಳಿಗೆ ಇರಾನ್‌ ಎಚ್ಚರಿಕೆ
ಅರಬ್ ರಾಷ್ಟ್ರಗಳಿಗೆ ಇರಾನ್ ಎಚ್ಚರಿಕೆ
Published On :

ನವದೆಹಲಿ: ಇಸ್ರೇಲ್ ಜೊತೆಗಿನ ಯುದ್ಧ ಮುಂದುವರೆದಿರುವಂತೆಯೇ ತನ್ನ ತೈಲ-ಶ್ರೀಮಂತ ಮಿತ್ರರಾಷ್ಟ್ರಗಳಿಗೆ ಇರಾನ್‌ ಎಚ್ಚರಿಕೆ ನೀಡಿದ್ದು, ಇಸ್ರೇಲ್ ಗೆ ನೆರವು ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಇರಾನ್ ಹೇಳಿದೆ.

ಇರಾನ್ ತನ್ನ ಅರಬ್ ನೆರೆಹೊರೆ ರಾಷ್ಟ್ರಗಳು ಮತ್ತು ಗಲ್ಫ್‌ನಲ್ಲಿರುವ ಅಮೆರಿಕ ಮಿತ್ರರಾಷ್ಟ್ರಗಳಿಗೆ ಕಟುವಾದ ಎಚ್ಚರಿಕೆಯನ್ನು ನೀಡಿದ್ದು, ಇರಾನ್ ಮೇಲಿನ ಯಾವುದೇ ಸಂಭಾವ್ಯ ದಾಳಿನಲ್ಲಿ ಇಸ್ರೇಲ್‌ಗೆ ಮಾಡಲು ತಮ್ಮ ಪ್ರದೇಶಗಳು ಅಥವಾ ವಾಯುಪ್ರದೇಶವನ್ನು ಬಳಸಲು ಅನುವು ಮಾಡಿಕೊಟ್ಟರೆ ತೀವ್ರ ಪ್ರತೀಕಾರ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಜೋರ್ಡಾನ್ ಮತ್ತು ಕತಾರ್‌ನಂತಹ ತೈಲ-ಸಮೃದ್ಧ ರಾಷ್ಟ್ರಗಳನ್ನು ಗುರಿಯಾಗಿಟ್ಟುಕೊಂಡು ರಹಸ್ಯ ರಾಜತಾಂತ್ರಿಕ ಮಾರ್ಗಗಳ ಮೂಲಕ ಎಚ್ಚರಿಕೆಯನ್ನು ರವಾನಿಸಲಾಗಿದೆ. ಇವೆಲ್ಲವೂ ಅಮೆರಿಕ ಸೇನಾ ಪಡೆಗಳ ಆತಿಥ್ಯ ವಹಿಸುತ್ತವೆ. ಅಮೆರಿಕ ಸೇನಾ ಪಡೆಗಳು ಈ ದೇಶಗಳಲ್ಲಿ ಸೇನಾ ಘಟಕಗಳನ್ನು ಹೊಂದಿದೆ. ಇದೇ ದೇಶಗಳ ಮೂಲಕ ಇಸ್ರೇಲ್ ಗೆ ಸೇನಾ ನೆರವು ಹರಿಯುತ್ತಿದೆ ಎಂದು ಇರಾನ್ ಆರೋಪಿಸಿದೆ.

ಈ ತಿಂಗಳ ಆರಂಭದಲ್ಲಿ ಇಸ್ರೇಲ್ ಅನ್ನು ಗುರಿಯಾಗಿಸಿ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಇಸ್ರೇಲ್ ಟೆಹ್ರಾನ್ ವಿರುದ್ಧ ಕಠಿಣ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿತ್ತು. ಈ ದಾಳಿಯಿಂದ ಕೆರಳಿದ ಇಸ್ರೇಲಿ ಅಧಿಕಾರಿಗಳು ಇರಾನ್‌ನ ಪರಮಾಣು ಅಥವಾ ತೈಲ ಮೂಲಸೌಕರ್ಯದ ಮೇಲೆ ಪ್ರತೀಕಾರದ ದಾಳಿಗಳನ್ನು ನಡೆಸುವ ಎಚ್ಚರಿಕೆ ನೀಡಿತ್ತು. ಈ ಎಚ್ಚರಿಕೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಇರಾನ್ ಇಸ್ರೇಲ್‌ನ ನಾಗರಿಕ ಮೂಲಸೌಕರ್ಯ ಮತ್ತು ಇಸ್ರೇಲಿ ಅಥವಾ ಅಮೆರಿಕ ನೇತೃತ್ವದ ದಾಳಿಗೆ ಅನುಕೂಲವಾಗುವಂತಹ ಅರಬ್ ರಾಷ್ಟ್ರಗಳಿಗೆ ಬೆದರಿಕೆ ಹಾಕುವ ಮೂಲಕ ಇರಾನ್ ನನ್ನು ಹಿಮ್ಮೆಟ್ಟಿಸಲು ಪ್ರತಿಜ್ಞೆ ಮಾಡಿದೆ.

ಈ ರಾಷ್ಟ್ರಗಳು ತಮ್ಮ ಮಿಲಿಟರಿ ಮೂಲಸೌಕರ್ಯ ಅಥವಾ ವಾಯುಪ್ರದೇಶವನ್ನು ಇರಾನ್ ವಿರುದ್ಧದ ದಾಳಿಗೆ ಬಳಸಲು ಅನುಮತಿಸುವ ಮೂಲಕ ದೊಡ್ಡ ಪ್ರಮಾಣದ ಯುದ್ಧಕ್ಕೆ ದಾರಿ ಮಾಡಿಕೊಡದಂತೆ ಎಚ್ಚರಿಕೆ ನೀಡಿದೆ.

ಇಂಧನ ಪೂರೈಕೆ ಮೇಲೆ ವ್ಯತ್ಯಯ

ಇರಾನ್ ಇಸ್ರೇಲ್ ಸಂಘರ್ಷದಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಸಂಭಾವ್ಯ ಪರಿಣಾಮ ಎದುರಾಗುವ ಭೀತಿ ಇದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಪೂರ್ಣ ಪ್ರಮಾಣದ ಯುದ್ಧವು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ತೈಲ ರಫ್ತುಗಳನ್ನು ಅಡ್ಡಿಪಡಿಸಬಹುದು, ಇದು ಜಾಗತಿಕ ಇಂಧನ ಪೂರೈಕೆಗೆ ನಿರ್ಣಾಯಕ ಚೆಕ್‌ಪಾಯಿಂಟ್ ಆಗಿದ್ದು, ತೈಲದ ಹರಿವಿನಲ್ಲಿ ಯಾವುದೇ ಅಡ್ಡಿಯು ತೈಲದರಗಳ ಗಗನಕ್ಕೇರಿಸಲು ಕಾರಣವಾಗಬಹುದು. ಇದು ಪ್ರದೇಶವನ್ನು ಮಾತ್ರವಲ್ಲದೆ ಜಾಗತಿಕ ಮಾರುಕಟ್ಟೆಗಳನ್ನೂ ಸಹ ಅಸ್ಥಿರಗೊಳಿಸುತ್ತದೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.