Russia vs Ukraine: ಶಸ್ತ್ರಾಸ್ತ್ರಗಳಿಲ್ಲದೇ ಪರದಾಟ; ಅಧ್ಯಕ್ಷರ ವಿರುದ್ಧವೇ ತಿರುಗಿಬಿದ್ದ ಉಕ್ರೇನ್ ಸೈನಿಕರು!
ರಷ್ಯಾ ವಿರುದ್ಧದ ಯುದ್ಧ ಚಾಲ್ತಿಯಲ್ಲಿರುವಂತೆಯೇ ಅತ್ತ ಉಕ್ರೇನ್ ಸೈನಿಕರು ತಮ್ಮದೇ ಅಧ್ಯಕ್ಷರ ವಿರುದ್ಧ ತಿರುಗಿ ಬಿದಿದ್ದಾರೆ ಎಂದು ಹೇಳಲಾಗಿದೆ.

ಕೀವ್: ರಷ್ಯಾ ವಿರುದ್ಧದ ಯುದ್ಧ ಚಾಲ್ತಿಯಲ್ಲಿರುವಂತೆಯೇ ಅತ್ತ ಉಕ್ರೇನ್ ಸೈನಿಕರು ತಮ್ಮದೇ ಅಧ್ಯಕ್ಷರ ವಿರುದ್ಧ ತಿರುಗಿ ಬಿದಿದ್ದಾರೆ ಎಂದು ಹೇಳಲಾಗಿದೆ.
ಉಕ್ರೇನ್ ಮೇಲೆ ಸಮರ ಸಾರಿರುವ ರಷ್ಯಾ ದಿನಕಳೆದಂತೆ ಉಕ್ರೇನ್ ಮೇಲಿನ ಹಿಡಿತವನ್ನು ಬಿಗಿಗೊಳಿಸುತ್ತಿದ್ದು, ಉಕ್ರೇನ್ ಹಿಡಿತದಲ್ಲಿದ್ದ ಪ್ರದೇಶಗಳನ್ನು ತನ್ನ ಕೈವಶ ಮಾಡಿಕೊಳ್ಳುತ್ತಿದೆ.
ಇದೀಗ ಉಕ್ರೇನ್ ಗೆ ಗಾಯದ ಮೇಲೆ ಬರೆ ಎಂಬಂತೆ ಇದೀಗ ಉಕ್ರೇನ್ ಸೈನಿಕರೇ ತಮ್ಮ ಅಧ್ಯಕ್ಷ ಝೆಲೆನ್ಸ್ಕಿ ವಿರುದ್ಧ ತಿರುಗಿಬಿದ್ದಿದ್ದು, ರಷ್ಯಾ ವಿರುದ್ಧ ಹೋರಾಟ ಮಾಡಲು ಅಗತ್ಯ ಶಸ್ತ್ರಾಸ್ತ್ರ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಯುದ್ಧದಲ್ಲಿ ರಷ್ಯಾ ಸೈನಿಕರು ಮುನ್ನಡೆಯಲ್ಲಿದ್ದು, ಉಕ್ರೇನ್‌ನ ದೊಡ್ಡ ಪ್ರಾಂತ್ಯ ಮತ್ತು ರಷ್ಯಾ ಗಡಿಗೆ ಹತ್ತಿರದಲ್ಲೇ ಇರುವ ಖಾರ್ಕೀವ್ ಮೇಲೆ ರಷ್ಯಾ ಸೈನಿಕರು ಬಹುತೇಕ ಹಿಡಿತ ಸಾಧಿಸಿದ್ದಾರೆ. ಕಳೆದ 2 ದಿನದಲ್ಲಿ ಭರ್ಜರಿ 10 ಹಳ್ಳಿ, ಹಾಗೂ ಹಲವು ಪ್ರದೇಶಗಳ ಮೇಲೆ ಹಿಡಿತ ಸಾಧಿಸಿದ್ದಾರೆ.
ಉಕ್ರೇನ್ ಸೈನಿಕರಿಗೆ ಸೂಕ್ತ ಶಸ್ತ್ರಾಸ್ತ್ರಗಳು ಸಿಗದ ಕಾರಣ ಯಾವುದೇ ವಿರೋಧ ಇಲ್ಲದೆ ರಷ್ಯಾ ಈಗ ಖಾರ್ಕೀವ್ ನಗರವನ್ನು ವಶಕ್ಕೆ ಪಡೆಯುತ್ತಿದ್ದು, ಇದು ಉಕ್ರೇನ್ ಜನರ ಚಿಂತೆ ಹೆಚ್ಚಿಸಿದ್ದು ಮಾತ್ರವಲ್ಲದೇ ಸೈನಿಕರ ಆಕ್ರೋಶಕ್ಕೂ ಕಾರಣವಾಗಿದೆ.
ಝೆಲೆನ್ಸ್ಕಿ ಜಾಗತಿಕ ಸಮುದಾಯಕ್ಕೆ ಉಕ್ರೇನ್ ಸಮಸ್ಯೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಇದೇ ಕಾರಣಕ್ಕೆ ಜಾಗತಿಕ ಸಮುದಾಯದಿಂದ ಉಕ್ರೇನ್ ಗೆ ಸರಿಯಾದ ನೆರವು ಸಿಗುತ್ತಿಲ್ಲ ಎಂದು ಸೈನಿಕರು ಆರೋಪಿಸುತ್ತಿದ್ದಾರೆ ಎನ್ನಲಾಗಿದೆ.
ನ್ಯಾಟೋ ಸೇರ್ಪಡೆ ವಿಚಾರವೇ ಯುದ್ಧಕ್ಕೆ ಕಾರಣ
ಅಮೆರಿಕ ನೇತೃತ್ವದ 'ನ್ಯಾಟೋ' ಒಕ್ಕೂಟಕ್ಕೆ ಉಕ್ರೇನ್ ಸೇರ್ಪಡೆ ಆಗುತ್ತಿದೆ ಎಂಬ ಆರೋಪವೇ ಯುದ್ಧ ಆರಂಭವಾಗಲು ಕಾರಣವಾಗಿತ್ತು. ರಷ್ಯಾದ ಅಧ್ಯಕ್ಷ ಪುಟಿನ್ ಯುದ್ಧ ಘೋಷಿಸಿದ್ದರು. 2022ರ ಫೆಬ್ರವರಿ 24ರಂದು ರಷ್ಯಾ ಸೇನೆ ಉಕ್ರೇನ್ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಭಾರತವೂ ಸೇರಿದಂತೆ ಜಾಗತಿಕ ಸಮುದಾಯದ ಒತ್ತಡದ ಹೊರತಾಗಿಯೂ ರಷ್ಯಾ ಅಧ್ಯಕ್ಷ ಉಕ್ರೇನ್ ಮೇಲೆ ಯುದ್ಧ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




