ವಿದೇಶ

ಆಸ್ಟ್ರೇಲಿಯಾ: ಜಗಳ ಬಿಡಿಸಲು ಹೋದ 22 ವರ್ಷದ ಭಾರತೀಯ ವಿದ್ಯಾರ್ಥಿ ಹತ್ಯೆ!

ಆಸ್ಟ್ರೇಲಿಯಾದಲ್ಲಿ ನಡೆದ ಭಾರತೀಯ ವಿದ್ಯಾರ್ಥಿಗಳ ನಡುವಿನ ಜಗಳದಲ್ಲಿ 22 ವರ್ಷದ ಎಂಟೆಕ್ ವಿದ್ಯಾರ್ಥಿಯನ್ನು ಇರಿದು ಕೊಲ್ಲಲಾಗಿದೆ. ನವಜೀತ್ ಸಂಧು ಮೃತ ವಿದ್ಯಾರ್ಥಿ.

ಆಸ್ಟ್ರೇಲಿಯಾ: ಜಗಳ ಬಿಡಿಸಲು ಹೋದ 22 ವರ್ಷದ ಭಾರತೀಯ ವಿದ್ಯಾರ್ಥಿ ಹತ್ಯೆ!
ಸಾಂದರ್ಭಿಕ ಚಿತ್ರ
Published On :

ಚಂಡೀಗಡ: ಆಸ್ಟ್ರೇಲಿಯಾದಲ್ಲಿ ನಡೆದ ಭಾರತೀಯ ವಿದ್ಯಾರ್ಥಿಗಳ ನಡುವಿನ ಜಗಳದಲ್ಲಿ 22 ವರ್ಷದ ಎಂಟೆಕ್ ವಿದ್ಯಾರ್ಥಿಯನ್ನು ಇರಿದು ಕೊಲ್ಲಲಾಗಿದೆ. ನವಜೀತ್ ಸಂಧು ಮೃತ ವಿದ್ಯಾರ್ಥಿ.

ಸಂತ್ರಸ್ತನ ಚಿಕ್ಕಪ್ಪ ಯಶ್ವೀರ್ ಪ್ರಕಾರ, ಬಾಡಿಗೆ ವಿಚಾರದಲ್ಲಿ ಕೆಲವು ಭಾರತೀಯ ವಿದ್ಯಾರ್ಥಿಗಳ ನಡುವೆ ನಡೆದ ವಿವಾದದಲ್ಲಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಇನ್ನೊಬ್ಬ ವಿದ್ಯಾರ್ಥಿಯು ಚಾಕುವಿನಿಂದ ನವಜೀತ್ ಸಂಧು ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಹೇಳಿದ್ದಾರೆ.

ಮೆಲ್ಬೋರ್ನ್‌ನಲ್ಲಿ ಸ್ಥಳೀಯ ಕಾಲಮಾನ ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ನಡೆದ ಘಟನೆಯಲ್ಲಿ ಮತ್ತೊಬ್ಬ ವಿದ್ಯಾರ್ಥಿ ಗಾಯಗೊಂಡಿದ್ದಾನೆ ಎಂದು ಅವರು ಹೇಳಿದರು. ನವಜೀತ್‌ನ ಸ್ನೇಹಿತ (ಮತ್ತೊಬ್ಬ ಭಾರತೀಯ ವಿದ್ಯಾರ್ಥಿ) ಬಳಿ ಕಾರು ಇತ್ತು. ಹೀಗಾಗಿ ಆತನ ಸಾಮಾನುಗಳನ್ನು ತೆಗೆದುಕೊಳ್ಳಲು ಸ್ನೇಹಿತನ ಜೊತೆಗೆ ಕಾರಿನಲ್ಲಿ ಆತನ ಮನೆಗೆ ಹೋಗಿದ್ದಾನೆ.

ಅವನ ಸ್ನೇಹಿತ ಒಳಗೆ ಹೋದಾಗ, ನವಜೀತ್ ಗೆ ಚೀರಾಡುವ ಕೂಗುಗಳನ್ನು ಕೇಳಿಸಿಕೊಂಡು ಒಳ ಹೋಗಿದ್ದಾನೆ. ಜಗಳವಾಡಬೇಡಿ ಎಂದು ನವಜೀತ್ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ಆತನ ಎದೆಗೆ ಚಾಕುವಿನಿಂದ ಮಾರಣಾಂತಿಕವಾಗಿ ಇರಿದಿದ್ದಾನೆ ಎಂದು ಯಶ್ವಿರ್ ಹೇಳಿದರು.

ನವಜೀತ್ ಅವರಂತೆ ಆರೋಪಿಯೂ ಕೂಡ ಕರ್ನಾಲ್ ಮೂಲದವನಾಗಿದ್ದಾನೆ. ಭಾನುವಾರ ಮುಂಜಾನೆ ಘಟನೆಯ ಬಗ್ಗೆ ಕುಟುಂಬಕ್ಕೆ ಮಾಹಿತಿ ಸಿಕ್ಕಿದೆ ಎಂದು ಯಶ್ವಿರ್ ಹೇಳಿದ್ದಾರೆ. ಘಟನೆಯಲ್ಲಿ ನವಜೀತ್ ಅವರ ಜೊತೆಗಿದ್ದ ಸ್ನೇಹಿತನಿಗೂ ಗಾಯಗಳಾಗಿವೆ ಎಂದು ಮೃತರ ಚಿಕ್ಕಪ್ಪ ತಿಳಿಸಿದ್ದಾರೆ. ಕುಟುಂಬವು ಆಘಾತದ ಸ್ಥಿತಿಯಲ್ಲಿದೆ ಎಂದು ಯಶವೀರ್ ಹೇಳಿದರು.

ನವಜೀತ್ ಉತ್ತಮ ವಿದ್ಯಾರ್ಥಿಯಾಗಿದ್ದು ಜುಲೈನಲ್ಲಿ ರಜೆಗಾಗಿ ತವರಿಗೆ ಹೋಗಬೇಕಿತ್ತು ಯಶವೀರ್ ಪ್ರಕಾರ, ನವಜೀತ್ ಒಂದೂವರೆ ವರ್ಷಗಳ ಹಿಂದೆ ಸ್ಟಡಿ ವೀಸಾದ ಮೇಲೆ ಆಸ್ಟ್ರೇಲಿಯಾಕ್ಕೆ ತೆರಳಿದ್ದರು ಮತ್ತು ಕೃಷಿಕರಾಗಿರುವ ಅವರ ತಂದೆ ಅವರ ಶಿಕ್ಷಣಕ್ಕಾಗಿ ತಮ್ಮ ಒಂದೂವರೆ ಎಕರೆ ಜಮೀನನ್ನು ಮಾರಾಟ ಮಾಡಿದ್ದರು ಎಂದು ವಿವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.